Congress To Elect New Chief : 21 ವರ್ಷದ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

ದೆಹಲಿ : Congress To Elect New Chief ಸತತ ಸೋಲು, ಸ್ವಪಕ್ಷೀಯ ನಾಯಕರ ವಿರೋಧ, ಘಟಾನುಘಟಿ ನಾಯಕರ ರಾಜೀನಾಮೆಯಿಂದ ಕಂಗೆಟ್ಟು ಹೋಗಿರೋ ದೇಶದ ಅತ್ಯಂತ ಹಳೇಯ ಪಕ್ಷ ಕಾಂಗ್ರೆಸ್, ಸದ್ಯ ಈ ಪಕ್ಷದ ಅಧ್ಯಕ್ಷರ ಆಯ್ಕೆಗೆ ಮುಹೂರ್ತ ಫಿಕ್ಸ್ ಆಗಿದೆ. ಅಕ್ಟೋಬರ್ 17ರಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಅಕ್ಟೋಬರ್ 17 ರಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 19ರಂದು ಫಲಿತಾಂಶ ಬರಲಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಯಾರು ಬೇಕಾದ್ರೂ ನಾಮಪತ್ರ ಸಲ್ಲಿಸಬಹುದು ಅಂತಾ ತಿಳಿಸಲಾಗಿದೆ. ಸೆಪ್ಟೆಂಬರ್ 24ರಿಂದ 30ನೇ ತಾರೀಖಿನವರೆಗೆ ನಾಮಪತ್ರ ಸಲ್ಲಿಕೆ ಮಾಡಬಹುದಾಗಿದೆ. ಅಲ್ಲಿಗೆ 2000ನೇ ವರ್ಷದ ಬಳಿಕ ಬರೋಬ್ಬರಿ 21 ವರ್ಷದ ನಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ದೆಹಲಿಯಲ್ಲಿ ನಡೆದ CWC ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ವರ್ಚುವಲ್ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ತೆಗೆದುಕೊಂಡಿರೋ ನಿರ್ಧಾರ ಪ್ರಕಟವಾಗಿದೆ. ಆರೋಗ್ಯ ತಪಾಸಣೆಗೆಗಾಗಿ ವಿದೇಶಕ್ಕೆ ತೆರಳಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವರ್ಚುವಲ್ ಸಭೆಯಲ್ಲಿ ಹಾಜರಾಗಿದ್ರು.

1998ರಿಂದ ಪಕ್ಷದ ಅಧ್ಯಕ್ಷೆಯಾಗಿರೋ ಸೋನಿಯಾ ಗಾಂಧಿ, ಅತಿ ಹೆಚ್ಚು ವರ್ಷ ಸೇವೆ ಸಲ್ಲಿಸಿದ ಕಾಂಗ್ರೆಸ್ ಪಕ್ಷದ ಅಧ್ಯೆಕ್ಷೆಯಾಗಿದ್ದಾರೆ. ಕಳೆದ ಲೋಕಸಭೆ ಚುನಾವಣೆ ವೇಳೆ ರಾಹುಲ್ ಗಾಂಧಿ ಅವ್ರನ್ನ ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಚುನಾವಣೆ ಸೋಲಿನ ಬಳಿಕ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ರಾಹುಲ್ ಗಾಂಧಿ ಬಳಿಕ, ಸೋನಿಯಾ ಗಾಂಧಿಯೇ ಮತ್ತೆ ಅಧ್ಯೆಕ್ಷೆಯಾಗಿ ಮುಂದುವರೆದಿದ್ರು. ಹಂಗಾಮಿ ಅಧ್ಯಕ್ಷರಾಗಿ ಮತ್ತೆ ಪಕ್ಷದ ಆಡಳಿತವನ್ನು ವಹಿಸಿಕೊಂಡ ಸೋನಿಯಾ ಗಾಂಧಿ ಅವರು ಜಿ -23 ನಾಯಕರ ಬಹಿರಂಗ ಬಂಡಾಯದ ನಂತರ, 2020 ರಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದರು, ಆದರೆ CWC ಸದಸ್ಯರು ಸೋನಿಯಾ ಅವ್ರನ್ನೇ ಮುಂದುವರಿಯುವಂತೆ ಒತ್ತಾಯಿಸಿದ್ದರು. ಸತತ ಸೋಲಿನ ಬಳಿಕ ಪಕ್ಷದ ನಾಯಕತ್ವದ ವಿರುದ್ಧ ಕೆಲ ನಾಯಕರು ಸಿಡಿದೆದ್ದಿದ್ರ. ಪಕ್ಷದ ಸಾರಥ್ಯ ವಹಿಸಲು ಗಟ್ಟಿಯಾದ ನಾಯಕ ಬೇಕು ಅಂತಾ ಆಗ್ರಹಿಸಿದ್ರು. ಅಂತಹ ನಾಯಕರ ಗುಂಪನ್ನ ಜಿ-23 ನಾಯಕರು ಅಂತಾ ಕರೆಯಲಾಗ್ತಿತ್ತು. ಈ ಜಿ-23 ತಂಡದ ಗುಲಾಮ್ ನಬಿ ಆಜಾದ್  ಶುಕ್ರವಾರ ದಿಢೀರ್ ರಾಜೀನಾಮೆ  ನೀಡಿದ್ರು ಮತ್ತು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಅವರು ಬರೆದಿದ್ರು. ಪತ್ರದ ಹಿನ್ನೆಲೆಯಲ್ಲಿ CWC ಸಭೆ ನಡೆಸಲಾಗಿದೆ.

ಆಜಾದ್ ತಮ್ಮ ಪತ್ರದಲ್ಲಿ ರಾಹುಲ್ ಗಾಂಧಿ ಪಕ್ಷದ ಸಂಪೂರ್ಣ ಸಮಾಲೋಚನಾ ಕಾರ್ಯವಿಧಾನವನ್ನು ಕೆಡವಿದ್ದಾರೆ ಎಂದು ಟೀಕಿಸಿದ್ದಾರೆ. ಚುನಾವಣಾ ವೇಳಾಪಟ್ಟಿಗೆ ಅನುಮೋದನೆ ನೀಡುವುದರ ಜೊತೆಗೆ, ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ CWC ಸದಸ್ಯರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ನಾಯಕತ್ವದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಬಹುದು ಎಂದು ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ : Arkavathi trouble : ಮಾಜಿ ಸಿಎಂ ಸಿದ್ದರಾಮಯ್ಯಗೆ ಮತ್ತೆ ಅರ್ಕಾವತಿ ಸಂಕಷ್ಟ: ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ ದೂರುದಾರ

ಇದನ್ನೂ ಓದಿ : flood effect actor Jaggesh house : ರಾಜ್ಯಸಭಾ ಸದಸ್ಯ ಜಗ್ಗೇಶ್ ಮನೆಗೂ ನೆರೆನೀರು : ಟ್ವೀಟರ್ ನಲ್ಲಿ ದುಃಖತೋಡಿಕೊಂಡ ನವರಸ ನಾಯಕ

Congress To Elect New Chief-Sonia Gandhi- Rahul Gandhi-politics

Comments are closed.