Arvind Kejriwal : ಅಗ್ನಿ ಪರೀಕ್ಷೆಗಿಳಿದ ಅರವಿಂದ್ ಕೇಜ್ರಿವಾಲ್

ದೆಹಲಿ : Arvind Kejriwal ಬಿಜೆಪಿ ವಿರುದ್ಧ ಸಮರ ಸಾರಿರೋ ದೆಹಲಿ ಮುಖ್ಯಮಂತ್ರಿ (Delhi Chief Minister) ಅರವಿಂದ್ ಕೇಜ್ರಿವಾಲ್ ಇಂದು ವಿಶ್ವಾಸ ಮತಯಾಚನೆ ಅನ್ನೋ ಅಗ್ನಿ ಪರೀಕ್ಷೆಗೆ ತಮ್ಮನ್ನ ತಾವೇ ಒಡ್ಡಿಕೊಂಡಿದ್ದಾರೆ. ದೆಹಲಿ ವಿಧಾನಸಭೆಯಲ್ಲಿ ಅರವಿಂದ್ ಕೇಜ್ರಿವಾಲ್ ವಿಶ್ವಾಸ ಮತಯಾಚನೆಯ ನಿರ್ಣಯ ಮಂಡಿಸಿದ್ರು. ಇಂದು ವಿಧಾನಸಭೆ ಯಲ್ಲಿ ವಿಶ್ವಾಸಮತ ಯಾಚನೆ ಮೂಲಕ ತಮ್ಮ ಪಕ್ಷದಿಂದ ಯಾವುದೇ ಶಾಸಕರು ಪಕ್ಷಾಂತರ ಮಾಡೋದಿಲ್ಲ ಅನ್ನೋದನ್ನ ಸಾಬೀತು ಮಾಡಲು ಮುಂದಾಗಿದ್ದಾರೆ.

ದೆಹಲಿ ಉಪ ಮಖ್ಯಮಂತ್ರಿ ಮನೀಶ್ ಸಿಸೋಡಿಯಾ  ಮೇಲೆ ಸಿಬಿಐ ದಾಳಿ ಬಳಿಕ ಕೇಂದ್ರದ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್ ನಡುವಿನ ಶೀತಲ ಸಮರ ಬಹಿರಂಗ ಯುದ್ಧ ಎನ್ನುವಂತಾಗಿತ್ತು. ಒಂದ್ಕಡೆ ಮನೀಶ್ ಸಿಸೋಡಿಯಾ, ಬಿಜೆಪಿ ನಾಯಕರು ತಮ್ಮನ್ನು ಬಿಜೆಪಿ ಸೇರುವಂತೆ ಕೇಳಿಕೊಂಡಿದ್ರು. ಬಿಜೆಪಿಗೆ ಸೇರಿದ್ರೆ ನನ್ನ ಮೇಲಿನ ಎಲ್ಲ ಕೇಸ್ ಕ್ಲೋಸ್ ಮಾಡ್ತೀವಿ ಅಂತಾ ಆಫರ್ ಕೊಟ್ಟಿದ್ರು ಅಂತಾ ಆರೋಪಿಸಿದ್ರು. ಅಷ್ಟೇ ಅಲ್ಲದೇ ಬಿಜೆಪಿ ನಾಯಕರು ನನಗೆ ನೀಡಿರೋ ಆಫರ್ ಕುರಿತು ಆಡಿಯೋ ರೆಕಾರ್ಡ್ ನನ್ನ ಬಳಿ ಇದೆ. ಅದನ್ನ ಸಮಯ ಬಂದಾಗ ರಿಲೀಸ್ ಮಾಡುತ್ತೇನೆ ಅಂತಾ ಹೇಳಿದ್ರು.

ಇದಾದ ಬೆನ್ನಲ್ಲೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೇಂದ್ರದ ಬಿಜೆಪಿ ವಿರುದ್ಧ ಹರಿಹಾಯ್ದಿದ್ರು. ಬಿಜೆಪಿ ದೆಹಲಿಯಲ್ಲಿರೋ ಆಪ್ ಸರ್ಕಾರವನ್ನ ಕೆಡವಲು ಯತ್ನಿಸ್ತಿದೆ. ಆಮ್ ಆದ್ಮಿ ಪಕ್ಷದ ಪ್ರತಿಯೊಬ್ಬ ಶಾಸಕರಿಗೆ ಬಿಜೆಪಿ 20 ಕೋಟಿ ರೂಪಾಯಿ ಆಫರ್ ಮಾಡಿದೆ ಅಂತಾ ದೆಹಲಿ ವಿಧಾನಸಭೆಯಲ್ಲೇ ಕೇಜ್ರಿವಾಲ್ ಆರೋಪಿಸಿದ್ರು.

ಇದಕ್ಕೂ ಮೊದಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಹಾತ್ಮಾ ಗಾಂಧಿ ಸಮಾಧಿ ಸ್ಥಳ ರಾಜ್ ಘಾಟ್ ಗೆ ತೆರಳಿ, ಸರ್ಕಾರ ಕೆಡವಲು ಬಿಜೆಪಿ ಮಾಡಿದ ತಂತ್ರ ಫಲಿಸಲಿಲ್ಲ ಅಂತಾ ಪ್ರಾರ್ಥನೆ ಸಲ್ಲಿಸಿದ್ರು. ತಮ್ಮ ಪಕ್ಷದ 40 ಶಾಸಕರನ್ನ ಖರೀದಿಸೋಕೆ ಬಿಜೆಪಿ ಯತ್ನಿಸಿದೆ, ಆದ್ರೆ ಯಾವೊಬ್ಬ ಶಾಸಕನೂ ಬಿಜೆಪಿಗೆ ಹೋಗ್ತಿಲ್ಲ ಅಂತಾ ಗಾಂಧಿ ಸಮಾಧಿ ಬಳಿ ಹೇಳಿದ್ರು.

ಇದೀಗ ತಮ್ಮ ಪಕ್ಷದ ಯಾವೊಬ್ಬ ಶಾಸಕನೂ ಬಿಜೆಪಿ ಆಮೀಷಕ್ಕೆ ಬಲಿಯಾಗಿಲ್ಲ. ಎಲ್ಲರೂ ತಮ್ಮ ಜೊತೆಯಲ್ಲೇ ಇದ್ದಾರೆ ಅನ್ನೋದನ್ನ ಸಾಬೀತು ಮಾಡೋದಕ್ಕಾಗಿಯೇ ಅರವಿಂದ್ ಕೇಜ್ರಿವಾಲ್ ವಿಶ್ವಾಸ ಮತ ಯಾಚನೆ ಮಾಡ್ತಿದ್ದಾರೆ. ಆದ್ರೆ ಸಿಎಂ ಅರವಿಂದ್ ಕೇಜ್ರಿವಾಲ್ ಮಾಡಿರೋ ಆರೋಪವನ್ನ ಬಿಜೆಪಿ ತಳ್ಳಿ ಹಾಕಿದೆ.

ಇದನ್ನೂ ಓದಿ : Arkavathi trouble : ಮಾಜಿ ಸಿಎಂ ಸಿದ್ದರಾಮಯ್ಯಗೆ ಮತ್ತೆ ಅರ್ಕಾವತಿ ಸಂಕಷ್ಟ: ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ ದೂರುದಾರ

ಇದನ್ನೂ ಓದಿ : Congress To Elect New Chief : 21 ವರ್ಷದ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

Arvind Kejriwal- Delhi Chief Minister-a vote of confidence-bjp

Comments are closed.