ಸೋಮವಾರ, ಏಪ್ರಿಲ್ 28, 2025
HomeCinemaOlavina Nildana:ಸಿದ್ಧಾಂತ್‌ ಮನಗೆಲ್ಲಲು ಅವನ ಅಮ್ಮನ ಬರ್ತಡ್‌ ಪ್ಲಾನ್‌ ಮಾಡಿದ ತಾರಿಣಿ

Olavina Nildana:ಸಿದ್ಧಾಂತ್‌ ಮನಗೆಲ್ಲಲು ಅವನ ಅಮ್ಮನ ಬರ್ತಡ್‌ ಪ್ಲಾನ್‌ ಮಾಡಿದ ತಾರಿಣಿ

- Advertisement -

(Colors Kannada)ಕಲರ್ಸ್‌ ಕನ್ನಡದಲ್ಲಿ ಹೊಸದಾಗಿ ಶುರುವಾಗಿರುವ (Olavina Nildana) ಒಲವಿನ ನಿಲ್ದಾಣ ಧಾರವಾಹಿ ಈಗಾಗಲೇ ಪ್ರೇಕ್ಷಕರ ಮನಗೆದ್ದಿದೆ. ಮಲೆನಾಡಿನ ಮನೆತನಕ್ಕೆ ಸೇರಿದ ನಟಿ ತಾರಿಣಿಯ ಮುಗ್ಧತೆ, ತನ್ನ ಕನಸಿನ ಹುಡುಗನ ಬಗ್ಗೆ ಇರುವ ಪರಿ ಪ್ರೇಕ್ಷಕರ ಗಮನ ಸೆಳೆದಿದೆ. ಜೊತೆಗೆ ನಟ ಸಿದ್ದಾಂತ್‌ ಮನೆ ಪರಿಸ್ಥಿತಿಯಿಂದಾಗಿ ಅವನಿಗೆ ಮನೆಯವರ ಮೇಲಿನ ಕಾಳಜಿ, ಗೌರವ ಹಾಗೂ ಅವನ ಗುರಿ ಕಡೆಗೆ ಇರುವ ಗಮನವು ಜನರಿಗೆ ಬಹಳ ಇಷ್ಟವಾಗುತ್ತಿದೆ.

(Olavina Nildana)ತಾರಿಣಿ ಮತ್ತು ಸಿದ್ಧಾಂತ್‌ ನಡುವಿನ ನಿಶ್ಚಿತಾರ್ಥವು ಸುಳ್ಳಾಗಿದ್ದರು, ತಾರಿಣಿಗೆ ಮಾತ್ರ ಸಿದ್ದಾಂತ್ ನ ಮೇಲೆ ಪ್ರೀತಿ ಹುಟ್ಟಿಕೊಂಡಿದೆ. ಆದ್ದರಿಂದ ಅವನ ಪ್ರೀತಿಯನ್ನು ಪಡೆಯಲು ಸದಾ ಹಂಬಲಿಸುತ್ತಿದ್ದಾಳೆ. ಸಿದ್ದಾಂತ್‌ ತಾರಿಣಿಯನ್ನು ಒಳ್ಳೆಯ ಸೇಹ್ನಿತೆಯಾಗಿ ನೋಡುತ್ತಿದ್ದ. ಹೀಗಾಗಿ ಇಬ್ಬರೂ ಜೊತೆಯಲ್ಲಿ ಎಲ್ಲಾ ವಿಷಯಗಳನ್ನು ಹಚ್ಚಿಕೊಳ್ಳುತ್ತಿದ್ದರು.

ಹೀಗಿರುವಾಗ ಸಿದ್ದಾಂತ್‌ ಅಮ್ಮನ ಬರ್ತಡೆ ಬಂದೇ ಬಿಟ್ಟಿದೆ. ಸಿದ್ದಾಂತ ತಂದೆ ಅವರ ಹೆಂಡತಿಗೆ ಸೀರೆಯನ್ನು ಉಡುಗೊರೆಯಾಗಿ ಕೊಡಬೇಕು ಎಂದು ಕೊಳ್ಳುತ್ತಾರೆ. ಸಿದ್ದಾಂತ ಅಮ್ಮನಿಗೆ ಸೀರೆ ಸೆಲೆಕ್ಟ್‌ ಮಾಡುವುದಕ್ಕಾಗಿ ತಾರಿಣಿ ಸಿದ್ದಾಂತ ಜೊತೆಯಲ್ಲಿ ಹೋಗುತ್ತಾಳೆ. ತಾನು ಸೆಲೆಕ್ಟ್‌ ಮಾಡಿರುವ ಸೀರೆ ಸಿದ್ದಾಂತ್‌ ಅಮ್ಮನಿಗೆ ಇಷ್ಟವಾಗುತ್ತೋ, ಇಲ್ಲವೋ ಎಂಬ ಕುತೂಹಲದಲ್ಲಿ ಇರುತ್ತಾಳೆ.

ಸಿದ್ದಾಂತ್‌ಗೆ ಅವನ ಅಮ್ಮ ಅಂದರೆ ತುಂಬಾ ಇಷ್ಟ ಅನ್ನೋದು ತಾರಿಣಿಗೆ ಗೊತ್ತಿದೆ. ಹಾಗಾಗಿ ಸಿದ್ದಾಂತ್‌ ಗೆ ಮಧ್ಯರಾತ್ರಿ 12 ಗಂಟೆಗೆ ಕರೆ ಮಾಡಿ ಅಮ್ಮನಿಗೆ ವಿಶ್‌ ಮಾಡಲ್ವಾ ಎಂದು ಕೇಳುತ್ತಾಳೆ. ಆಗ ಸಿದ್ದಾಂತ್‌ ನನಗೆ ಇದ್ದೆಲ್ಲಾ ಅಭ್ಯಾಸವಿಲ್ಲ ಎಂದು ಹೇಳುತ್ತಾನೆ. ವಿಶ್‌ ಮಾಡಿ ನೋಡಿ ಅಮ್ಮ ಖುಷಿ ಪಡುತ್ತಾರೆ ಅಂತಾ ಸಲಹೆ ಕೊಡ್ತಾಳೆ ತಾರಿಣಿ. ಸಿದ್ದಾಂತ್‌ ಕೂಡ ತಾರಿಣಿ ಹೇಳಿದಂತೆ ಕೇಕ್‌ ತರಿಸಿ ಅಮ್ಮ ಕೈನಲ್ಲಿ ಕಟ್‌ ಮಾಡಿಸುತ್ತಾನೆ. ಆಗ ಸಿದ್ದಾಂತ್‌ ಅಮ್ಮ ತುಂಬಾ ಖುಷಿಯಾಗುತ್ತಾಳೆ. ತಾರಿಣಿ ಮರುದಿನ ದೇವಸ್ಥಾನದಲ್ಲಿ ಸಿದ್ದಾಂತ್‌ ಗೆ ಗೊತ್ತಿಲ್ಲದ ಹಾಗೆ ಅಮ್ಮನ ಹೆಸರಿನಲ್ಲಿ ಪೂಜೆಯನ್ನು ಏರ್ಪಡಿಸಿ, ಅವನ ತಾಯಿ ಖುಷಿಯನ್ನು ನೋಡುವ ಹಾಗೆ ಮಾಡುತ್ತಾಳೆ.

ಇದನ್ನೂ ಓದಿ : ಲೀಲಾ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದ ಎಜೆ ಸೊಸೆ ದುರ್ಗಾ

ಇದನ್ನೂ ಓದಿ : ಮಾಲ್ಡೀವ್ಸ್ ನಲ್ಲಿ ಮಾದಕ ಬೆಡಗಿ: ನಿದ್ದೆ ಕದಿಯುತ್ತಿದೆ ಸನ್ನಿ ಲಿಯೋನ್ ಪೋಟೋಸ್

ಇದನ್ನೂ ಓದಿ : ”ಕೆಜಿಎಫ್”‌ ನಟ ಯಶ್‌ ಗೆಟಪ್‌ ಅನುಕರಣೆ ಮಾಡಿದ ಬಾಲಿವುಡ್‌ ಸ್ಟಾರ್ ಸಲ್ಮಾನ್‌ ಖಾನ್‌

ತಾರಿಣಿ ಸಿದ್ದಾಂತ್‌ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವುದು ಸುಳ್ಳು ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಹೀಗಿರುವಾಗ ತಾರಿಣಿಯ ತಾಯಿ ಸಿದ್ದಾಂತ ಮನೆಯವರನ್ನು ಕೆರೆದುಕೊಂಡು ಬರಲು ಹೇಳುತ್ತಾರೆ. ಆದರೆ ತಾರಿಣಿ ತಾನು ಹೇಗೆ ಕರೆದುಕೊಂದು ಬರುವುದು ಎಂದು ಚಿಂತೆ ಮಾಡುತ್ತಿರುತ್ತಾಳೆ. ತಾನು ಸಿದ್ದಾಂತ್‌ನ ಪ್ರೀತಿಯನ್ನು ಪಡೆದುಕೊಂಡರೆ ಅವರನ್ನು ಮನೆಗೆ ಕರೆದುಕೊಂಡು ಹೋಗಬಹುದು ಎಂದು ಒದ್ದಾಡುತ್ತಾಳೆ.

Colors Kannada Olavina Nildana Serial

RELATED ARTICLES

Most Popular