encroachment clearance operation :ಯಾವುದೇ ಮುಲಾಜು ನೋಡದೇ ಒತ್ತುವರಿ ತೆರವು ಕಾರ್ಯ ಮಾಡುತ್ತಿದ್ದೇವೆ: ಸಚಿವ ಆರ್​.ಅಶೋಕ್​​

ಬೆಂಗಳೂರು : encroachment clearance operation :ಕಳೆದ ಭಾನುವಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಮಳೆಯು ಸಿಲಿಕಾನ್​ ಸಿಟಿಯನ್ನು ನೆರೆ ಸಿಟಿಯನ್ನಾಗಿ ಮಾಡಿತ್ತು. ಮಹದೇವಪುರ ಹಾಗೂ ಕೆ.ಆರ್​ಪುರಂ ಭಾಗಗಳಲ್ಲಂತೂ ರಕ್ಷಣಾ ಕಾರ್ಯಕ್ಕೆ ಬೋಟ್​ಗಳನ್ನು ಬಳಕೆ ಮಾಡುವಷ್ಟರ ಮಟ್ಟಿಗೆ ಕೈ ತಪ್ಪಿ ಹೋಗಿತ್ತು, ರಾಜ್ಯ ಸರ್ಕಾರವು ಇಂದು ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದ ಒತ್ತುವರಿಗಳ ಆರೋಪ ಎಂದು ಕೂಡ ಆರೋಪಿಸಿತ್ತು. ಈ ಎಲ್ಲದರ ನಡುವೆ ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಲಾದ ಕಟ್ಟಡಗಳನ್ನು ಬುಲ್ಡೋಜರ್​ ಬಳಸಿ ಉರುಳಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಆದರೆ ಬಿಬಿಎಂಪಿ ಅಧಿಕಾರಿಗಳು ಸಾಮಾನ್ಯರ ಮನೆಗಳಿಗೆ ಮಾತ್ರ ಹಾನಿ ಉಂಟು ಮಾಡುತ್ತಿದ್ದು ಪ್ರಭಾವಿಗಳ ಕಟ್ಟಡಗಳನ್ನು ರಕ್ಷಿಸುತ್ತಿದೆ ಎಂಬ ಆರೋಪ ಎದುರಾಗಿದೆ.

ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಎದುರಾಗಿರುವ ಈ ಆರೋಪದ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್​.ಅಶೋಕ್​ ನಾವು ಒತ್ತುವರಿ ಕಾರ್ಯಾಚರಣೆಯನ್ನು ಮಾಡಲು ದೊಡ್ಡವರು ಹಾಗೂ ಕೆಟ್ಟವರು ಎಂಬ ಯಾವುದೇ ಮುಲಾಜನ್ನು ನೋಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ರಾಜ ಕಾಲುವೆಯನ್ನು ಸುಮಾರು 30 ಐಟಿ ಕಂಪನಿಗಳು ಒತ್ತುವರಿ ಮಾಡಿದ್ದಾರೆ, ಈ ಎಲ್ಲಾ ದಾಖಲೆಗಳು ನಮ್ಮ ಬಳಿ ಇದೆ. ಈ ದಾಖಲೆಗಳನ್ನು ಕಂದಾಯ ಇಲಾಖೆ ಬಿಬಿಎಂಪಿಗೆ ಈಗಾಗಲೇ ಕೊಟ್ಟಿದೆ. ಈ ಪಟ್ಟಿಯ ಅನುಸಾರ ಬಿಬಿಎಂಪಿ ಯಾವುದೇ ಮುಲಾಜನ್ನು ನೋಡದೇ ಒತ್ತುವರಿ ತೆರವು ಮಾಡ್ತಾ ಇದೆ ಎಂದು ಹೇಳಿದರು.

ಪ್ರತಿ ಬಾರಿ ಮಳೆ ಬಂದಾಗೆಲ್ಲ ಹಿಂದಿನ ಸರ್ಕಾರಗಳು ನಾವು ಒತ್ತುವರಿ ತೆರವು ಕಾರ್ಯ ಮಾಡ್ತೇವೆ ಎಂದು ಸುಳ್ಳು ಭರವಸೆಗಳನ್ನು ನೀಡುತ್ತಿದ್ದರು. ಆದರೆ ಮಳೆ ನಿಲ್ಲುತ್ತಿದ್ದಂತೆಯೇ ಒತ್ತುವರಿ ತೆರವು ಕಾರ್ಯ ಅಲ್ಲೇ ನಿಂತು ಹೋಗುತ್ತಿತ್ತು. ಆದರೆ ಈ ನೆರೆಯು ನಮಗೆ ಬಹುದೊಡ್ಡ ಪಾಠವನ್ನೇ ಕಲಿಸಿದೆ. ನಾವು ಯಾವುದೆ ಒತ್ತಡಗಳಿಗೆ ಬಲಿಯಾಗದೇ ಒತ್ತುವರಿ ತೆರವು ಕಾರ್ಯ ಮಾಡ್ತಿದ್ದೇವೆ. ಇಲ್ಲಿ ನಾವು ದೊಡ್ಡವರು ಚಿಕ್ಕವರು ಎಂಬುದನ್ನು ನೋಡಲ್ಲ. ಕೋರ್ಟ್​ ಕೊವಿಯೆಟ್​​ ಹಾಕುವ ಬಗ್ಗೆ ಸಿಎಂ ಮತ್ತು ಅಡ್ವಕೇಟ್​ ಜನರಲ್​ ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನು ಓದಿ : Dinesh Karthik: 12 ವರ್ಷಗಳ ನಂತರ ಮತ್ತೊಮ್ಮೆ ವಿಶ್ವಕಪ್ ಆಡಲಿದ್ದಾರೆ ಡಿಕೆ ; ನಾಲ್ಕೇ ಶಬ್ದಗಳಲ್ಲಿ ಖುಷಿ ಹಂಚಿಕೊಂಡ ಕಾರ್ತಿಕ್

ಇದನ್ನೂ ಓದಿ : Dinesh Karthik: 12 ವರ್ಷಗಳ ನಂತರ ಮತ್ತೊಮ್ಮೆ ವಿಶ್ವಕಪ್ ಆಡಲಿದ್ದಾರೆ ಡಿಕೆ ; ನಾಲ್ಕೇ ಶಬ್ದಗಳಲ್ಲಿ ಖುಷಿ ಹಂಚಿಕೊಂಡ ಕಾರ್ತಿಕ್

Minister R. Ashok’s statement about the encroachment clearance operation

Comments are closed.