Chief Minister Eknath Shinde:ದುಬಾರಿ ಕಾರಿಗೆ ಬೆಂಕಿ : ರಸ್ತೆ ಮಧ್ಯೆ ಸಹಾಯಕ್ಕೆ ನಿಂತ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ

ಮುಂಬೈ : ದುಬಾರಿ ಕಾರೊಂದು ರಸ್ತೆ ಮಧ್ಯದಲ್ಲಿಯೇ ಹೊತ್ತಿ ಉರಿದಿದೆ. ಈ ವೇಳೆಯಲ್ಲಿ ಮಾರ್ಗದಲ್ಲಿ ಸಾಗುತ್ತಿದ್ದ ಮಹಾರಾಷ್ಟ್ರ (Chief Minister Eknath Shinde) ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಕಾರಿನಲ್ಲಿದ್ದವರ ನೆರವಿಗೆ ನಿಂತಿದ್ದಾರೆ. ಕಾರು ಚಾಲಕನ ಜೊತೆಗೆ ಸಿಎಂ ಶಿಂಧೆ ಅವರು ನಡೆಸಿದ ಸಂಭಾಷಣೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸೋಮವಾರ ಮಧ್ಯರಾತ್ರಿ ಮುಂಬೈನ ವೆಸ್ಟರ್ನ್‌ ಎಕ್ಸ್ ಪ್ರೆಸ್‌ ಹೈವ್ ಯಲ್ಲಿ ದುಬಾರಿ ಕಾರೊಂದಕ್ಕೆ ಬೆಂಕಿ ಹತ್ತಿಕೊಂಡಿತ್ತು.ಕಾರಿನ ಚಾಲಕ ಕಾರಿಗೆ ತಗುಲಿದ ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದ. ಈ ವೇಳೆಯಲ್ಲಿ ಮಾರ್ಗದಲ್ಲಿ ಸಾಗುತ್ತಿದ್ದ ಮಹಾರಾಷ್ಟ್ರ (Chief Minister Eknath Shinde)ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಸ್ಥಳದಲ್ಲಿ ಕಾರನ್ನು ನಿಲ್ಲಿಸಿದ್ದಾರೆ. ಕಾರು ಚಾಲಕನನ್ನು ಹೊತ್ತಿ ಉರಿಯುತ್ತಿರುವ ಕಾರಿನ ಬಳಿಗೆ ಧಾವಿಸದಂತೆ ತಡೆದಿದ್ದಾರೆ.

ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಉರಿಯುತ್ತಿರುವ ಕಾರಿನ ಬೆಂಕಿಯನ್ನು ನಂದಿಸಿದ್ದಾರೆ. ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದ್ದರು ಕೂಡ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂತರದಲ್ಲಿ ಏಕನಾಥ್‌ ಶಿಂಧೆ ಸ್ಥಳದಿಂದ ತೆರಳಿದ್ದರು.

ಇದನ್ನೂ ಓದಿ : ಯಾವುದೇ ಮುಲಾಜು ನೋಡದೇ ಒತ್ತುವರಿ ತೆರವು ಕಾರ್ಯ ಮಾಡುತ್ತಿದ್ದೇವೆ: ಸಚಿವ ಆರ್​.ಅಶೋಕ್​​

ಇದನ್ನೂ ಓದಿ : ರಾಜ್ಯ ರಾಜಧಾನಿಯಲ್ಲಿ ನೆರೆ ಹಾನಿ ಅಭಿಪ್ರಾಯ ಸಂಗ್ರಹಕ್ಕೆ ಕಾಂಗ್ರೆಸ್​ನಿಂದ ಸಮಿತಿ ರಚನೆ

ಇದನ್ನೂ ಓದಿ : 2023 ನಮ್ಮ ಪಾಲಿಗೆ ಕೊನೆ ಚುನಾವಣೆ : ನಿಖಿಲ್​ ಕುಮಾರಸ್ವಾಮಿ ಹೊಸ ಬಾಂಬ್​​

ಇದನ್ನೂ ಓದಿ : ಮೋದಿ ಹುಟ್ಟುಹಬ್ಬಕ್ಕೆ ಮೆಗಾ ರಕ್ತದಾನ ಅಭಿಯಾನ

ಇದನ್ನೂ ಓದಿ : ಮೊಬೈಲ್ ಫೋನ್ ಬ್ಯಾಟರಿ ಸ್ಫೋಟ 8 ತಿಂಗಳ ಮಗು ಸಾವು

ಮುಖ್ಯಮಂತ್ರಿ ಏಕನಾಥ್‌ ಶಿಂಧೆ ರವರು ಕಾರು ಚಾಲಕನೊಂದಿಗೆ ಮಾತನಾಡುತ್ತಿರುವ ವೀಡಿಯೋ ಈಗಾಗಲೇ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಹಾಗೆ ಏಕನಾಥ್‌ ಶಿಂಧೆಯವರ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಕಾರು ಚಾಲಕನ ಹೆಸರನ್ನು ಪಡೆದುಕೊಂಡು ಕಾರಿಗಿಂತ ಜೀವನ ಮುಖ್ಯ ಹಾಗಾಗಿ ಬೆಂಕಿ ತಗುಲಿದ ಕಾರಿನ ಬಳಿ ಹೋಗಬೇಡಿ ಎನ್ನುವುದರ ಜೊತೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

Expensive car caught fire: Maharashtra Chief Minister Eknath Shinde stopped to help in the middle of the road

Comments are closed.