Sai Pallavi : ವಿರಾಟಪರ್ವಂ ರಿಲೀಸ್ ಹೊತ್ತಿನಲ್ಲಿ ಸಾಯಿಪಲ್ಲವಿ ವಿವಾದ : ಹೈದ್ರಾಬಾದ್ ನಟಿ ವಿರುದ್ಧ FIR

ಸಿಂಪಲ್ ನಟಿಯೆಂದೇ ಖ್ಯಾತಿ ಗಳಿಸಿದ ಬಹುಭಾಷಾ ನಟಿ ಸಾಯಿ ಪಲ್ಲವಿ (Sai Pallavi ) ತಮ್ಮ‌ ಹೊಸದೊಂದು ಸಿನಿಮಾ‌ರಿಲೀಸ್ ಹೊತ್ತಿನಲ್ಲಿ ವಿವಾದವೊಂದಕ್ಕೆ ಸಿಲುಕಿದ್ದಾರೆ. ಕಾಶ್ಮೀರಿ ಹತ್ಯೆಯ ವಿಚಾರವನ್ನು ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಹೋಲಿಸಿ ಮಾತನಾಡಿದ ಕಾರಣಕ್ಕೆ ನಟಿ ಸಾಯಿಪಲ್ಲವಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ನಟಿ ಸಾಯಿ ಪಲ್ಲವಿ ಪರ ಮತ್ತು ವಿರುದ್ಧ ಚರ್ಚೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ನಟಿ ಸಾಯಿ ಪಲ್ಲವಿ ವಿರುದ್ಧ ಹೈದ್ರಾಬಾದ್ ನಲ್ಲಿ ದೂರು ದಾಖಲಾಗಿದೆ.

ನಟಿ ಸಾಯಿಪಲ್ಲವಿ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಬಜರಂಗದಳದ ಸದಸ್ಯ ಅಖಿಲ್ ಹೈದ್ರಾಬಾದ್ ನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಗ್ರೇಟ್ ಆಂಧ್ರ ಯೂಟ್ಯೂಬ್ ಚಾನೆಲ್ ಗೆ ನೀಡಿದ ಇಂಟರ್ ವ್ಯೂ ನಲ್ಲಿ ಸಾಯಿ ಪಲ್ಲವಿ, ಕಾಶ್ಮೀರಿ ಭಯೋತ್ಪಾದಕರನ್ನು ಗೋ ರಕ್ಷಕರಿಗೆ ಹೋಲಿಸಿದ್ದಾರೆ. ಈ ಹೇಳಿಕೆಯಿಂದ ನೋವಾಗಿದೆ. ಹೀಗಾಗಿ ಸಾಯಿ ಪಲ್ಲವಿ ವಿರುದ್ಧ ಕ್ರಮ ಜರುಗಿಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತೆಲುಗು ಚಿತ್ರ ವಿರಾಟ ಪರ್ವಂ ಸಿನಿಮಾದ ಭಾಗವಾಗಿ ಯೂಟ್ಯೂಬ್ ಚಾನೆಲ್ ನೀಡಿದ ಸಂದರ್ಶನದಲ್ಲಿ ನಟಿ ಸಾಯಿ ಪಲ್ಲವಿ ದಿ ಕಾಶ್ಮೀರಿ ಫೈಲ್ ಸಿನಿಮಾದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆಯನ್ನು ತೋರಿಸಲಾಗಿದೆ. ನೀವು ಅದನ್ನು ಧಾರ್ಮಿಕ ಸಂಘರ್ಷ ಎಂಬುದಾಗಿ ನೋಡಿದರೇ, ಕೊರೋನಾ ಸಂದರ್ಭದಲ್ಲಿ ಹಸುಗಳನ್ನು ಸಾಗಿಸುವ ವಾಹನ ಚಲಾಯಿಸುವ ಮುಸಲ್ಮಾನ ಡ್ರೈವರ್ ಮೇಲೆ ಜೈ ಶ್ರೀರಾಮ ಎಂಬ ಘೋಷಣೆಯೊಂದಿಗೆ ನಡೆದ ಹಲ್ಲೆಯನ್ನು ಏನೆಂದು ಅರ್ಥೈಸಬಹುದೆಂದು ಪ್ರಶ್ನಿಸಿದ್ದರು. ಸಾಯಿ ಪಲ್ಲವಿ ಈ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಪರ ಮತ್ತು ವಿರುದ್ಧ ಹೇಳಿಕೆಗಳು ಕೇಳಿಬಂದಿದ್ದು, ಸ್ಯಾಂಡಲ್ ವುಡ್ ಪದ್ಮಾವತಿ ರಮ್ಯ ಸಾಯಿಪಲ್ಲವಿ ಬೆಂಬಲಿಸಿದ್ದರೇ, ಇತ್ತ ಪ್ರಣೀತಾ ಸುಭಾಶ್ ಮಾತ್ರ ಸಾಯಿ ಪಲ್ಲವಿ ಸಿನಿಮಾವನ್ನು ಗ್ರಹಿಸುವಲ್ಲಿ ಎಡವಿದ್ದಾರೆ. ಇನ್ನೊಮ್ಮೆ ಸಿನಿಮಾ ವೀಕ್ಷಿಸಲಿ ಎಂದು ಸಲಹೆ ನೀಡಿದ್ದಾರೆ.

ಇನ್ನೊಂದೆಡೆ ಸಾಯಿ ಪಲ್ಲವಿ ಸಂದರ್ಶನದ ವೇಳೆ ನೀಡಿದ ಹೇಳಿಕೆ ಅವರ ಸಿನಿಮಾದ‌ ಮೇಲೆ ಪ್ರಭಾವ ಬೀರಲಾರಂಭಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ವಿರಾಟ ಪರ್ವಂ ಅಭಿಯಾನ ಪ್ರಾರಂಭವಾಗಿದೆ. ಇನ್ನೊಂದೆಡೆ ಉತ್ತಮ ಡ್ಯಾನ್ಸರ್, ನಟಿಯಾಗಿದ್ದ ಸಾಯಿ ಪಲ್ಲವಿ ಯಾವುದೇ ವಿವಾದವಿಲ್ಲದ ತಮ್ಮ ಸರಳ ನಡೆಯಿಂದಲೇ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದವರು.ಆದರೆ ಈಗ ಈ ವಿವಾದದ ಮೂಲಕ ಸಾಯಿಪಲ್ಲವಿ ಧಾರ್ಮಿಕ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ : Meghana Raj : ಅಮ್ಮಾ ಅನ್ನೋ ಮೇಘನಾಗೆ ಅಪ್ಪಾ ಎಂದ ಮಗ : ವೈರಲ್ ವಿಡಿಯೋ ಕಣ್ಣಿರಿಟ್ಟ ಅಭಿಮಾನಿಗಳು

ಇದನ್ನೂ ಓದಿ : ಹರಿತವಾದ ಕಥೆ, ರೋಚಕ ತಿರುವುಗಳ ‘ಧರಣಿ ಮಂಡಲ ಮಧ್ಯದೊಳಗೆ’ ಟೀಸರ್ ರಿಲೀಸ್

Complaint against actor Sai Pallavi over remarks on Kashmiri Pandit

Comments are closed.