Conspiracy to murder Umapati case : ನಿರ್ಮಾಪಕ ಉಮಾಪತಿ ಕೊಲೆಗೆ ಸಂಚು : ಆರೋಪಿ ಕರಿಯ ರಾಜೇಶ್‌ ಅರೆಸ್ಟ್

ಬೆಂಗಳೂರು : (Conspiracy to murder Umapati case) ನಿರ್ಮಾಪಕ ಉಮಾಪತಿ ಕೊಲೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ರಾಜೇಶ್‌ ಅಲಿಯಾಸ್‌ ಕರಿಯ ರಾಜೇಶ್‌ ನನ್ನು ಕೆಂಪೇಗೌಡ ಪೊಲೀಸರು ಬಂಧಿಸಿದ್ದಾರೆ. ಕಳೆದ ಕೆಲವು ವರ್ಷದಿಂದ ಆರೋಪಿ ತಲೆಮರೆಸಿಕೊಂಡಿದ್ದು, ರಾಬರಿ, ಕಳವು ಪ್ರಕರಣ, ಕೊಲೆ, ಸುಲಿಗೆ ಹೀಗೆ ಹತ್ತಾರು ಪ್ರಕರಣಗಳು ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿವೆ.

ಆರೋಪಿ ರಾಜೇಶ್‌ ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಈತ ಕೊಲೆ, ಕೊಲೆಯತ್ನ, ದರೋಡೆ ಹೀಗೆ ಹತ್ತಾರು ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಹನುಮಂತನಗರ, ಸಿದ್ದಾಪುರ, ಕಾಟನ್‌ ಪೇಟೆ, ಬಸವನಗುಡಿ, ಕೆ.ಜಿ ನಗರ ಠಾಣೆಯಲ್ಲಿ ಈತನ ವಿರುದ್ದ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣದ ತನಿಖೆಗೆ ನ್ಯಾಯಾಲಯದ ಮುಂದೆಯೂ ಹಾಜರಾಗದೇ ಈತ ತಲೆಮರೆಸಿಕೊಂಡಿದ್ದ. 2006 ರಿಂದಲೇ ರೌಡಿಸಂನಲ್ಲಿ ಆಕ್ಟೀವ್‌ ಆಗಿದ್ದ ಕರಿಯ ರಾಜೇಶ್‌ ಮೇಲೆ ನಾಲ್ಕು ಠಾಣೆಗಳ ಐದು ಕೇಸ್‌ ಗಳಲ್ಲಿ ವಾರೆಂಟ್‌ ಜಾರಿ ಮಾಡಲಾಗಿತ್ತು.

ಭೂಗತ ಪಾತಕಿ ಬಾಂಬೆ ರವಿ ಸೂಚನೆ ಮೇರೆಗೆ ಆರೋಪಿಗಳು ನಿರ್ಮಾಪಕ ಉಮಾಪತಿ ಗೌಡ, ಅವರ ಸಂಬಂಧಿ ದೀಪಕ್‌, ಕುಖ್ಯಾತ ರೌಡಿಶೀಟರ್‌ ಗಳಾದ ಸೈಕಲ್‌ ರವಿ ಹಾಗೂ ಬೇಕರಿ ರಘು ಅವರನ್ನು ಹತ್ಯೆಗೈಯಲು ಸಂಚು ರೂಪಿಸಲಾಗಿತ್ತು. ಈ ಸಂಬಂಧ ಆರೋಪಿಗಳು 2020 ರ ಡಿಸೆಂಬರ್‌ 20 ರಂದು ಜಯನಗರ ಠಾಣೆ ವ್ಯಾಪ್ತಿಯ ನ್ಯಾಷನಲ್‌ ಕಾಲೇಜು ಮೈದಾನದ ಬಳಿ ಟೆಂಪೋ ಟ್ರಾವೆಲರ್‌ ವಾಹನದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಮಂದಿ ಮಾರಕಾಸ್ತ್ರಗಳ ಸಮೇತ ಕುಳಿತಿದ್ದರು. ಅದೇ ವೇಳೆ ಗಸ್ತು ತಿರುಗುತ್ತಿದ್ದ ಜಯನಗರ ಠಾಣೆ ಸುದರ್ಶನ್‌ ಅನುಮಾನಗೊಂಡು ವಾಹನ ಪರಿಸೀಲಿಸಿದಾಗ ಆರೋಪಿಗಳು ಅವರ ಮೇಲೆಯೇ ವಾಹನ ಹತ್ತಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ವೇಳೆ ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ಅವರ ಮಾಹಿತಿ ಮೇರೆಗೆ ಸುಮಾರು ಎಂಟು ಮಂದಿಯನ್ನು ಬಂಧಿಸಲಾಗಿತ್ತು. ಆದರೆ, ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದರು.

ಈ ಸಂಬಂಧ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ, ಇನ್ನಿಬ್ಬರು ಆರೋಪಿಗಳನ್ನು ದರ್ಶನ್‌ ಮತ್ತು ಸಂಜು ಎನ್ನುವ ಇಬ್ಬರು ಆರೋಪಿಗಳನ್ನು 2022 ರಲ್ಲಿ ಬಂಧಿಸಲಾಗಿತ್ತು. ಇದೀಗ ಕರಿಯ ರಾಜೇಶ್‌ ಎನ್ನುವ ಅರೋಪಿ ಪೊಲೀಸರ ಕೈಸೆರೆಯಾಗಿದ್ದು, ಆರೋಪಿಯ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

ಇದನ್ನೂ ಓದಿ : Gas pipeline explosion: ಬೆಂಗಳೂರಿನಲ್ಲಿ ಗ್ಯಾಸ್ ಪೈಪ್ ಲೈನ್ ಸ್ಫೋಟ: ಇಬ್ಬರಿಗೆ ಗಾಯ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಕ್ರೇಜಿ ಸ್ಟಾರ್ ವಿ.ರವಿಚಂದ್ರನ್, ಅಮಲಾ ಪೌಲ್, ಪಿ.ರವಿಶಂಕರ್ ಮುಂತಾದವರು ಅಭಿನಯಿಸಿದ್ದ ಎಸ್.ಕೃಷ್ಣ ಆಕ್ಷನ್ ಕಟ್ ಹೇಳಿದ್ದ ಬಿಗ್ ಬಜೆಟ್ ‘ಹೆಬ್ಬುಲಿ’ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಬಂಡವಾಳ ಹಾಕಿದ್ದರು. ಇದಲ್ಲದೇ ದರ್ಶನ್‌ ನಟನೆಯ ರಾಬರ್ಟ್‌, ಮುರುಳಿ ಅಭಿನಯದ ಮದಗಜ ಚಿತ್ರಕ್ಕೂ ಕೂಡ ನಿರ್ಮಾಪಕರಾಗಿದ್ದರು.

Conspiracy to murder Umapati case: Rowdy Andar had plotted to murder Umapati

Comments are closed.