ಮುಂಬೈ: Sushant Singh death case: ಹಿಂದಿ ಕಿರುತೆರೆ ನಟಿ ತುನಿಶಾ ಶರ್ಮಾ ಆತ್ಮಹತ್ಯೆಯ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಕಳೆದ 2 ವರ್ಷಗಳ ಹಿಂದೆ ನಡೆದಿದ್ದ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಸುಶಾಂತ್ ಸಿಂಗ್ ರದ್ದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಸುಶಾಂತ್ ಮರಣೋತ್ತರ ಪರೀಕ್ಷೆ ನಡೆಸಿದ ಕೂಪರ್ ಆಸ್ಪತ್ರೆಯ ಪೋಸ್ಟ್ ಮಾರ್ಟಮ್ ವಿಭಾಗದ ಸಿಬ್ಬಂದಿಯೊಬ್ಬರು ಈ ಹೇಳಿಕೆಯನ್ನು ನೀಡಿದ್ದು, ಇದೀಗ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ.
ಸುಶಾಂತ್ ಸಿಂಗ್ ಮರಣೋತ್ತರ ಪರೀಕ್ಷೆ ನಡೆಸಿದ ಕೂಪರ್ ಆಸ್ಪತ್ರೆಯ ಪೋಸ್ಟ್ ಮಾರ್ಟಮ್ ವಿಭಾಗದ ಸಿಬ್ಬಂದಿ ರೂಪ್ ಕುಮಾರ್ ಎಂಬುವವರು ಸುಶಾಂತ್ ಸಿಂಗ್ ರದ್ದು ಆತ್ಮಹತ್ಯೆ ಅಲ್ಲ, ಅದೊಂದು ಕೊಲೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಅಲ್ಲದೇ ಪೋಸ್ಟ್ ಮಾರ್ಟಮ್ ನಡೆದ ದಿನದ ಘಟನೆಯನ್ನು ಮಾಧ್ಯಮಗಳ ಮುಂದೆ ವಿವರಿಸಿ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸುಶಾಂತ್ ಸಿಂಗ್ ಮರಣೋತ್ತರ ಪರೀಕ್ಷೆ ವೇಳೆ ನಾನೂ ಇದ್ದೆ. ಸುಶಾಂತ್ ಮೃತಪಟ್ಟ ದಿನ ನಮ್ಮ ಆಸ್ಪತ್ರೆಗೆ ಒಟ್ಟು 5 ಮೃತದೇಹಗಳು ಬಂದಿದ್ದವು. ಈ ಪೈಕಿ ಒಂದು ವಿಐಪಿ ಶವ ಎಂದು ಹೇಳಲಾಗುತ್ತಿತ್ತು. ಆದರೆ ಯಾರದ್ದು ಎಂದು ಹೇಳಿರಲಿಲ್ಲ. ಬಳಿಕ ಅದು ಸುಶಾಂತ್ ರದ್ದು ಎಂದು ಗೊತ್ತಾಯಿತು. ಶವ ಪರೀಕ್ಷೆ ವೇಳೆ ಅವರ ದೇಹವನ್ನು ನೋಡಿದಾಗ ಅಲ್ಲಿ ಅನೇಕ ಗಾಯದ ಗುರುತುಗಳು ಕಂಡುಬಂದಿದ್ದವು. ಕುತ್ತಿಗೆಯ ಮೇಲೆ ಎರಡ್ಮೂರು ಗಾಯದ ಕಲೆಗಳಿದ್ದವು. ಇಡೀ ಪೋಸ್ಟ್ ಮಾರ್ಟಮ್ ವಿಡಿಯೋ ರೆಕಾರ್ಡ್ ಮಾಡಬೇಕೆಂಬ ನಿಯಮವಿದೆ. ಆದರೆ ಹಿರಿಯ ಅಧಿಕಾರಿಗಳು ವಿಡಿಯೋ ರೆಕಾರ್ಡಿಗ್ ಬೇಡ. ಕೇವಲ ಫೋಟೋಗಳನ್ನು ತೆಗೆದಿಡಿ ಎಂದಿದ್ದರು. ಹೀಗಾಗಿ ನಾವು ಅದನ್ನೇ ಮಾಡಿದ್ದೇವು ಎಂದರು.
ಅಂದು ನಾನು ಸುಶಾಂತ್ ಸಿಂಗ್ ಅವರ ಮೃತದೇಹವನ್ನು ಕಂಡ ಕೂಡಲೇ ಅದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ನನಗೆ ಅನಿಸುತ್ತಿದೆ ಎಂದು ಹಿರಿಯ ಸಿಬ್ಬಂದಿಗೆ ತಿಳಿಸಿದ್ದೆ. ಅಲ್ಲದೇ ಆಸ್ಪತ್ರೆಯ ನಿಯಮದಂತೆ ನಾವು ಮಾಡೋಣ ಎಂಬ ಸಲಹೆಯನ್ನೂ ನೀಡಿದ್ದೆ. ಆದರೆ ಅದಕ್ಕೆ ಅವರು ಒಪ್ಪಿಗೆ ನೀಡಿರಲಿಲ್ಲ. ಹೇಳಿದಷ್ಟು ಮಾಡು. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಈ ಮೃತದೇಹವನ್ನು ಪೊಲೀಸರಿಗೆ ಒಪ್ಪಿಸೋಣ ಎಂದು ನನಗೆ ಅವರು ಹೇಳಿದ್ದರು. ಹೀಗಾಗಿ ರಾತ್ರಿ ಹೊತ್ತಲ್ಲಿ ಈ ಪೋಸ್ಟ್ ಮಾರ್ಟಮ್ ಮಾಡಿದ್ದೆವು ಎಂದು ರೂಪ್ ಕುಮಾರ್ ಹೇಳಿಕೆ ನೀಡಿದ್ದಾರೆ. ಸದ್ಯ ಇವರ ಈ ಹೇಳಿಕೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದೆ.
2020ರ ಜೂನ್ 14ರಂದು ಮುಂಬೈನ ಬಾಂದ್ರಾದ ಅಪಾರ್ಟ್ ಮೆಂಟ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಮೃತದೇಹ ಪತ್ತೆಯಾಗಿತ್ತು. ಸುಶಾಂತ್ ಸಿಂಗ್ ರದ್ದು ಆತ್ಮಹತ್ಯೆ ಅಲ್ಲ, ಕೊಲೆ ಎಂಬ ಕೂಗು ಕೇಳಿಬಂದ ಬೆನ್ನಲ್ಲೇ ಸಿಬಿಐ ತನಿಖೆಯೂ ಆರಂಭಗೊಂಡಿತ್ತು. ಈ ಕೇಸ್ ನಲ್ಲಿ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಜೈಲು ಪಾಲಾಗಿ ಸಿಬಿಐ ವಿಚಾರಣೆಗೆ ಒಳಪಟ್ಟಿದ್ದಾರೆ. ಸದ್ಯ ಜಾಮೀನಿನ ಮೇಲೆ ಹೊರಬಂದಿದ್ದಾರೆ.
ಇದನ್ನೂ ಓದಿ: Kranti Pushpavathi Song : “ನನಗೆ ಮಿಲಿಯನ್ ಡಾಲರ್ ಅವಕಾಶ” ಎಂದ ಕ್ರಾಂತಿ ಸಿನಿಮಾದ ಪುಷ್ಪಾವತಿ ನಿಮಿಕಾ ರತ್ನಾಕರ್
ಇನ್ನು ಸುಶಾಂತ್ ಸಾವಿನೊಂದಿಗೆ ಡ್ರಗ್ಸ್ ಕೂಡಾ ಲಿಂಕ್ ಹಾಕಿಕೊಂಡಿದ್ದು, ಎನ್ ಸಿಬಿ, ಸಿಬಿಐ ತನಿಖೆ ನಡೆಯುತ್ತಿದೆ. ಅಲ್ಲದೇ ಹಣಕಾಸಿನ ನಂಟು ಕೂಡಾ ಪ್ರಕರಣದಲ್ಲಿದ್ದು, ಸಿಬಿಐ ಅಧಿಕಾರಿಗಳು ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಒಂದೆಡೆ ಸುಶಾಂತ್ ರದ್ದು ಆತ್ಮಹತ್ಯೆ ಎಂದೇ ಕಂಡುಬರುತ್ತಿದ್ದರೂ, ಕುಟುಂಬಸ್ಥರು ಮಾತ್ರ ಇದೊಂದು ಕೊಲೆ ಎಂದೇ ವಾದಿಸುತ್ತಿದ್ದಾರೆ. ಈ ಬೆನ್ನಲ್ಲೇ ಇದೀಗ ರೂಪ್ ಕುಮಾರ್ ಹೇಳಿಕೆ ಬಹಳಷ್ಟು ಮಹತ್ವ ಪಡೆದುಕೊಂಡಿದೆ.
Cooper Hospital employee who attended actor’s post-mortem reveals that Sushant Singh Rajput did not commit suicide he was murdered