ಬೆಂಗಳೂರು : ಕೊರೊನಾ ವಿರುದ್ದ ಹೋರಾಟಕ್ಕೆ ಹಲವು ಸಾಥ್ ಕೊಡ್ತಿದ್ದಾರೆ. ಅದ್ರಲ್ಲೂ ಸ್ಯಾಂಡಲ್ ವುಡ್ ನಟಿ ರಾಗಿಣಿ ಕೊರೊನಾ ವಾರಿಯರ್ಸ್ ಗೆ ರುಚಿಕರವಾದ ಊಟ ತಯಾರಿಸಿ ಬಡಿಸೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಅದ್ರಲ್ಲೂ ರಾಗಿಣಿ ಕಿಚನ್ ನಿಂದ ಬರೋಬ್ಬರಿ 150 ಸರಕಾರಿ ಆಸ್ಪತ್ರೆಗಳ ವೈದ್ಯರಿಗೆ ರುಚಿಕರ ಅಡುಗೆ ತಯಾರಿಸಿ ರವಾನಿಸಿದ್ದಾರೆ.

ಕೊರೊನಾ ಆರಂಭವಾಗುತ್ತಿದ್ದಂತೆಯೇ ಒಂದಿಲ್ಲೊಂದು ರೀತಿಯಲ್ಲಿ ಕೊರೊನಾ ವಿರುದ್ದ ಹೋರಾಟ ನಡೆಸುವರಿಗೆ ರಾಗಿಣಿ ಸಹಾಯ ಮಾಡುತ್ತಾ ಬಂದಿದ್ದಾರೆ. ಕೊರೊನಾ ಜಾಗೃತಿ ಮೂಡಿಸೋ ಸಲುವಾಗಿ ರಸ್ತೆಗೆ ಇಳಿದಿದ್ದ ರಾಗಿಣಿ ಕೊರೊನಾದಿಂದ ಪಾರಾಗಲು ಮಾಸ್ಕ್, ಗ್ಲೌಸ್ ಧರಿಸೋ ಕುರಿತು ಜಾಗೃತಿಯನ್ನು ಮೂಡಿಸಿ ಜನರಿಗೆ ಉಚಿತವಾಗಿ ಕೈಗ್ಲೌಸ್ ವಿತರಣೆ ಮಾಡಿದ್ದರು. ಕೈ ಗ್ಲೌಸ್ ಮಹತ್ವವನ್ನು ಜನರಿಗೆ ತಿಳಿಸೋ ಕಾರ್ಯ ಮಾಡಿದ್ದರು.

ನಂತರ ಬಿಬಿಎಂಪಿಯ ಪೌರ ಕಾರ್ಮಿಕರ ಜೊತೆಗೆ ಚಾಯ್ ಪೇ ಚರ್ಚೆ ನಡೆಸಿ ಕೊರೊನಾ ವಿರುದ್ದದ ಹೋರಾಟಕ್ಕೆ ಧೈರ್ಯ ತುಂಬಿದ್ದರು. ನಮಗಾಗಿ ಕೆಲಸ ಮಾಡೋ ಪೌರ ಕಾರ್ಮಿಕರಿಗೆ ಸಹಾಯ ಮಾಡಬೇಕು ಅಂತಾ ಹೇಳಿದ್ದರು. ಪೌರ ಕಾರ್ಮಿಕರಿಗೆ ತಾವೇ ಚಹಾ ಮಾಡಿಕೊಟ್ಟು ಅವರೊಂದಿಗೆ ಸಾಕಷ್ಟು ವಿಚಾರಗಳನ್ನು ಚರ್ಚೆ ಮಾಡಿದ್ದರು.
ಇದೀಗ ತಮ್ಮ ಜೀವದ ಹಂಗು ತೊರೆದು ಕೊರೊನಾ ಮಹಾಮಾರಿಯ ವಿರುದ್ದ ಹೋರಾಟ ನಡೆಸುತ್ತಿರುವ ವೈದ್ಯರಿಗೆ ಸಹಾಯ ಮಾಡಿದ್ದಾರೆ. ರಾಗಿಣಿ ಅವರು ತಮ್ಮದೇ ಮನೆಯಲ್ಲಿ 150 ಸರಕಾರಿ ಆಸ್ಪತ್ರೆಯ ವೈದ್ಯರಿಗೆ ರುಚಿಕರವಾದ ಅಡುಗೆಯನ್ನು ತಯಾರಿಸಿಕೊಟ್ಟಿದ್ದಾರೆ. ಮನೆಮಂದಿಯೆಲ್ಲಾ ಮುಖಕ್ಕೆ ಮಾಸ್ಕ್ ತಯಾರಿಸಿ ಅಡುಗೆ ತಯಾರಿಸೋ ಮೂಲಕ ಜನರಿಗೆ ಜಾಗೃತಿಯನ್ನೂ ಮೂಡಿಸಿದ್ದಾರೆ. ಮನೆಯಂದಿಯೆಲ್ಲಾ ಮನೆಯಲ್ಲಿ ಅಡುಗೆ ತಯಾರಿಸೋ ಪೋಟೋವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.