ಗುಣಮುಖನಾದ ಕೊರೊನಾ ಸೋಂಕಿತನಿಗೆ ಮತ್ತೆ ಜ್ವರ : ಕಾಫಿನಾಡಲ್ಲಿ ಶುರುವಾಗಿದೆ ಆತಂಕ !

0

ಮಡಿಕೇರಿ : ಒಂದೆಡೆ ಕೊರೊನಾ ಸೋಂಕಿನ ಭಯ, ಇನ್ನೊಂದೆಡೆ ಆಸ್ಪತ್ರೆಯಿಂದ ಸೋಂಕಿತರು ಗುಣಮುಖರಾಗ್ತಿದ್ದಾರೆ ಅನ್ನೋ ಖುಷಿ. ಆದ್ರೆ ಕಾಫಿನಾಡು ಮಡಿಕೇರಿಯಲ್ಲಿ ಕೊರೊನಾ ಸೋಂಕಿನಿಂದ ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದ ವ್ಯಕ್ತಿಗೆ ಇದೀಗ ಜ್ವರ ಕಾಣಿಸಿಕೊಂಡಿದ್ದು, ಕೊಡಗು ಜಿಲ್ಲೆಯ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.

ದುಬೈನಿಂದ ಕೊಡಗು ಜಿಲ್ಲೆಗೆ ಹಿಂದಿರುಗಿದ್ದ 35 ವರ್ಷದ ವ್ಯಕ್ತಿಯನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಾರ್ಚ್ 19ರಂದು ವ್ಯಕ್ತಿಗೆ ಕೊರೊನಾ ಸೋಂಕಿರುವುದು ಪತ್ತೆಯಾಗಿದೆ. ಹೀಗಾಗಿ 22 ದಿನಗಳ ಕಾಲ ವ್ಯಕ್ತಿಗೆ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಎಪ್ರಿಲ್ ಮೊದಲ ವಾರದಲ್ಲಿ ವ್ಯಕ್ತಿ ಗುಣಮುಖನಾಗುತ್ತಿದ್ದಂತೆಯೇ ಮತ್ತೊಮ್ಮೆ ಕೊರೊನಾ ಪರೀಕ್ಷೆ ನಡೆಸಲಾಗಿದೆ. ವರದಿಯಲ್ಲಿ ಕೊರೊನಾ ಸೋಂಕು ಇಲ್ಲಾ ಅನ್ನುವುದು ಖಚಿತವಾಗುತ್ತಿದ್ದಂತೆಯೇ ವ್ಯಕ್ತಿಯನ್ನು ಎಪ್ರಿಲ್ 11 ರಂದು ಡಿಸ್ಚಾರ್ಜ್ ಮಾಡಲಾಗಿತ್ತು.

ಆದ್ರೀಗ ವ್ಯಕ್ತಿಗೆ ಮತ್ತೆ ಜ್ವರ ಕಾಣಿಸಿಕೊಂಡಿದೆ. ವ್ಯಕ್ತಿಗೆ ಮತ್ತೆ ಜ್ವರ ಕಾಣಿಸಿಕೊಳ್ಳುತ್ತಿದ್ದಂತೆಯೇ ವ್ಯಕ್ತಿ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ಇದೀಗ ಗುಣಮುಖನಾಗಿದ್ದ ಕೊರೊನಾ ಸೋಂಕಿತನಿಗೆ ಜ್ವರ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ವ್ಯಕ್ತಿಯ ಗಂಟಲು ಹಾಗೂ ದ್ರವ ಮತ್ತು ರಕ್ತದ ಮಾದರಿಯನ್ನು ಮೈಸೂರಿನ ಲ್ಯಾಬ್ ಗೆ ಕಳುಹಿಸಿಕೊಡಲಾಗಿದೆ.

ವ್ಯಕ್ತಿಯ ಲ್ಯಾಬ್ ರಿಪೋರ್ಟ್ ನಾಳೆ ಕೊಡಗು ಜಿಲ್ಲಾಡಳಿತ ಕೈ ಸೇರಲಿದೆ. ಆದ್ರೆ ಜಿಲ್ಲೆಯ ಜನತೆ ಆತಂಕಕ್ಕೆ ಒಳಗಾಗೋದು ಬೇಡಾ ಅಂತಾ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮನವಿ ಮಾಡಿದ್ದಾರೆ.

Leave A Reply

Your email address will not be published.