ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್‌ : ಕಾಂತಾರ ಶಿವ ರಿಷಬ್‌ ಶೆಟ್ಟಿಗೆ ಬೆಸ್ಟ್‌ ಆಕ್ಟರ್‌ ಪ್ರಶಸ್ತಿ

ಕಳೆದ ವರ್ಷ ತೆರೆಕಂಡ ಕಾಂತಾರ ಸಿನಿಮಾದಿಂದ ರಿಷಬ್‌ ಶೆಟ್ಟಿ ಪ್ಯಾನ್‌ ಇಂಡಿಯಾ ಸ್ಟಾರ್‌ ಎನ್ನುವ ಹೆಗ್ಗಳಿಕೆಗೆ (Critics’ Choice Awards) ಪಾತ್ರರಾಗಿದ್ದಾರೆ. ಯಾಕೆಂದರೆ ಕರಾವಳಿ ದೈವರಾಧನೆ ಹಾಗೂ ಭೂತಕೋಲದ ಕಥೆಯನ್ನು ಒಳಗೊಂಡ ಈ ಸಿನಿಮಾ ಇಡೀ ಭಾರತೀಯ ಸಿನಿರಂಗವೇ ಕನ್ನಡ ಸಿನಿರಂಗವನ್ನು ಪ್ರಶಂಸಿಸುವಂತೆ ಮಾಡಿದೆ. ಅತೀ ಕಡಿಮೆ ಬಜೆಟ್‌ನಲ್ಲಿ ಮಾಡಿರುವ ಈ ಸಿನಿಮಾ ಸುಮಾರು 400 ಕೋಟಿಯಷ್ಟು ಬಾಕ್ಸ್‌ ಆಫೀಸ್‌ನ್ನು ಕೊಳ್ಳೆ ಹೊಡೆದಿದೆ. ಇದೀಗ ಈ ಸಿನಿಮಾದಲ್ಲಿ ನಟ ರಿಷಬ್‌ ಶೆಟ್ಟಿಯ ನಟನೆಗೆ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್‌ ಅವರು ಬೆಸ್ಟ್‌ ಆಕ್ಟರ್‌ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಈ ಕುರಿತಂತೆ ನಟ ರಿಷಬ್‌ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಟ್ವಿಟರ್‌ನಲ್ಲಿ, “ಟೀಮ್ ಕ್ರಿಟಿಕ್ಸ್ ಚಾಯ್ಸ್‌ನಿಂದ ಅತ್ಯುತ್ತಮ ನಟ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಕ್ಕೆ ಕೃತಜ್ಞರಾಗಿರುತ್ತೇನೆ. ಈ ಪ್ರೀತಿ ಮತ್ತು ಆಶೀರ್ವಾದಕ್ಕೆ ನಾನು ಸದಾಋುಣಿ” ಎಂದು ಪ್ರಶ್ತಿ ಪಡೆದ ಒಂದಷ್ಟು ಪೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್‌ಗೆ ಅಭಿಮಾನಿಗಳು,”ನಿಮ್ಮ ಸಿನಿಮೀಯ ಪ್ರದರ್ಶನಕ್ಕಾಗಿ ಮತ್ತು ಅತ್ಯುತ್ತಮ ನಟನೆಗಾಗಿ ನಾವು ಸಹ ಕೃತಜ್ಞರಾಗಿರುತ್ತೇವೆ.” ಎಂದೆಲ್ಲಾ ಕಾಮೆಂಟ್‌ ಮಾಡುವ ಮೂಲಕ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ವಿಸ್ಟಾಸ್ ಮೀಡಿಯಾ ಕ್ಯಾಪಿಟಲ್ ಜೊತೆಗೆ ಮೋಷನ್ ಕಂಟೆಂಟ್ ಗ್ರೂಪ್ ಮತ್ತು ಫಿಲ್ಮ್ ಕ್ರಿಟಿಕ್ಸ್ ಗಿಲ್ಡ್ ಬೆಂಬಲಿತ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್‌ನ 5 ನೇ ಆವೃತ್ತಿಯಾಗಿದೆ. ಪ್ರಶಸ್ತಿಗಳು ಪ್ರತಿ ವರ್ಷ ಚಲನಚಿತ್ರಗಳು, ಕಿರುಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿನ ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸಿ ಗೌರವಿಸುತ್ತವೆ.

ಇದನ್ನೂ ಓದಿ : Scam 1770 Movie Teaser : ದಡ್ಡ ಪ್ರವೀಣ್‌ನ ಹೊಸ ಸಿನಿಮಾಕ್ಕೆ ಶುಭಕೋರಿದ ನಟ ರಿಷಬ್‌ ಶೆಟ್ಟಿ

ಇದನ್ನೂ ಓದಿ : ನಟ ಚೇತನ್ ವೀಸಾ ರದ್ದು ಮಾಡಿದ ಕೇಂದ್ರ ಸರಕಾರ

7 ಸ್ಟಾರ್ ಡೈನೋಸರ್ ಎಂಟರ್ಟೈನ್ಮೆಂಟ್, ಲಾಲಣ್ಣನ ಹಾಡು, ಲಿಟಲ್ ವಿಂಗ್ಸ್ ಮುಂತಾದ ಕಿರುಚಿತ್ರಗಳು ವಿವಿಧ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿವೆ. ವೆಬ್ ಸರಣಿಯ ವಿಭಾಗಗಳಲ್ಲಿ, ರಾಕೆಟ್ ಬಾಯ್ಸ್ ಮತ್ತು ದೆಹಲಿ ಕ್ರೈಮ್ಸ್ ನಾಮನಿರ್ದೇಶನಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸಿನಿಮಾಗಳಲ್ಲಿ ಗಂಗೂಬಾಯಿ ಕಥಿಯಾವಾಡಿಗಾಗಿ ಅಲಿಯಾ ಭಟ್ ಅತ್ಯುತ್ತಮ ನಟಿ ವಿಭಾಗದಲ್ಲಿ ಗಾರ್ಗಿಗಾಗಿ ಸಾಯಿ ಪಲ್ಲವಿ ಮತ್ತು ಜಲ್ಸಾಗಾಗಿ ಶೆಫಾಲಿ ಶಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.

ಇನ್ನು ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ, ಕಿಶೋರ್ ಮತ್ತು ಸಪ್ತಮಿ ಗೌಡ ಅಭಿನಯದ ಕಾಂತಾರ, ಕರ್ನಾಟಕ ಮತ್ತು ಜಗತ್ತಿನಾದ್ಯಂತ ಹಲವಾರು ದಾಖಲೆಗಳನ್ನು ಮುರಿದಿದ್ದಾರೆ. ಈ ಸಿನಿಮಾವು ಮನುಷ್ಯ ಮತ್ತು ಪ್ರಕೃತಿ ಸಂಘರ್ಷದ ಕುರಿತಾಗಿದೆ. ಮಾಧ್ಯಮದೊಂದಿಗೆ ನೀಡಿದ ಸಂದರ್ಶನದಲ್ಲಿ, ರಿಷಬ್ ಶೆಟ್ಟಿ ಹೀಗೆ ಹೇಳಿದ್ದರು. “ಮನುಷ್ಯ ಮತ್ತು ಪ್ರಕೃತಿ ಸಂಘರ್ಷ ಶಾಶ್ವತವಾಗಿ ಅಸ್ತಿತ್ವದಲ್ಲಿದೆ. ಅದೇ ಕಥೆಯನ್ನು ಜನಪದ ಕಥೆಯ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ.

ಇದನ್ನೂ ಓದಿ : ಕೆಜಿಎಫ್ 2 ಸೆಟ್‌ನಲ್ಲಿ ಯಶ್ ಭೇಟಿಯಾದ ರಾಧಿಕಾ ಪಂಡಿತ್‌ : ವಿಡಿಯೋ ಸಖತ್‌ ವೈರಲ್

Critics’ Choice Awards: Best Actor Award for Kantara Shiva Rishabh Shetty

Comments are closed.