ಮಂಗಳವಾರ, ಏಪ್ರಿಲ್ 29, 2025
HomeCinemaDaali Dhananjay birthday announcement : ಡಾಲಿ ಧನಂಜಯ್ ಹುಟ್ಟುಹಬ್ಬದಂದೇ ಮಹತ್ವದ ಘೋಷಣೆ

Daali Dhananjay birthday announcement : ಡಾಲಿ ಧನಂಜಯ್ ಹುಟ್ಟುಹಬ್ಬದಂದೇ ಮಹತ್ವದ ಘೋಷಣೆ

- Advertisement -

Daali Dhananjay birthday announcement : ನಟ ಡಾಲಿ ಧನಂಜಯ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟರಾಕ್ಷಸನ ಹುಟ್ಟುಹಬ್ಬಕ್ಕೆ ಸ್ಯಾಂಡಲ್ ವುಡ್ ಸೇರಿದಂತೆ ಟಾಲಿವುಡ್‌ ,ಕಾಲಿವುಡ್ ನಿಂದಲೂ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ. ಈ ಮಧ್ಯೆ ಪುನೀತ್ ನಿಧನದ ಕಾರಣಕ್ಕೆ ಅದ್ದೂರಿ ಹುಟ್ಟುಹಬ್ಬ ಆಚರಣೆಯಿಂದ ದೂರ ಉಳಿದಿರುವ ಡಾಲಿ ಧನಂಜಯ್ ಹುಟ್ಟುಹಬ್ಬದ ದಿನ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ.

ಹೌದು ಡಾಲಿ ಧನಂಜಯ್ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಮನೆಮಾತಾಗಿರೋ ನಾಯಕ ನಟ ಮತ್ತು ಅಬ್ಬರಿಸಬಲ್ಲ ವಿಲನ್. ಆದರೆ ಸ್ಯಾಂಡಲ್ ವುಡ್ ನಲ್ಲಿ ಡಾಲಿ ಧನಂಜಯ್ ಸಾಧಿಸಿದ ಈ ಸ್ಥಾನಮಾನ ಹಾಗೂ ಜನಪ್ರಿಯತೆಯ ಹಿಂದೆ ಅವರ ವರ್ಷಗಳ ಶ್ರಮವಿದೆ. ಇಂಜಿನೀಯರ್ ಆಗಿದ್ದ ಡಾಲಿ ಧನಂಜಯ್ ಸಿನಿಮಾ ರಂಗದ ಹಾದಿ ಹೂವಿನ ಹಾದಿಯಾಗಿರಲಿಲ್ಲ. ಸಾಕಷ್ಟು ಏರಿಳಿತಗಳನ್ನು ಕಂಡ ಡಾಲಿ ಧನಂಜಯ್ ತಮ್ಮ ಹುಟ್ಟುಹಬ್ಬದಂದು ತಮ್ಮಂತೆ ಕನಸುಗಳನ್ನು ಹೊತ್ತು ಸಿನಿಮಾ ಕ್ಷೇತ್ರಕ್ಕೆ ಬರುವವರನ್ನು ಪ್ರೋತ್ಸಾಹಿಸಲು ಚಿಂತನೆ ನಡೆಸಿದ್ದು, ಭರವಸೆಯ ಘೋಷಣೆಯೊಂದನ್ನು ಮಾಡಿದ್ದಾರೆ.

ಈ ಬಗ್ಗೆ ಡಾಲಿ ಧನಂಜಯ್ ಪ್ರಕಟಣೆಯೊಂದನ್ನು ನೀಡಿದ್ದು ಅದರಲ್ಲಿ, ಡಾಲಿ ಪಿಕ್ಚರ್ಸ್ ಎಂಬ ಕನಸೊಂದನ್ನು ಹುಟ್ಟು ಹಾಕಿದ ಈ ಸಂಸ್ಥೆಯ ನಿರ್ಮಾತೃ ಧನಂಜಯವರ ಹುಟ್ಟುಹಬ್ಬದ ಪ್ರಯುಕ್ತ ನಮ್ಮಿಂದ ಹೀಗೊಂದು ಘೋಷಣೆ.‌ ಧನಂಜಯ್ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಒಂದು ಹಿಡಿ ಯಷ್ಟು ಆಸೆ ಹಾಗೂ ಪ್ರತಿಭೆಯನ್ನು ಕಟ್ಟಿಕೊಂಡು ಗಾಂಧಿ ನಗರಕ್ಕೆ ಕಾಲಿಟ್ಟರು. ಒಂದೇ ಪಾತ್ರವನ್ನು ದಕ್ಕಿಸಿಕೊಳ್ಳಲು ಕಷ್ಟಪಡಬೇಕಾದ ಸ್ಥಿತಿಯಿತ್ತು. ಇಂಥ ಅನೇಕ ಅಡೆತಡೆ ದಾಟಿ ಬಂದ ಧನಂಜಯ್ ಡಾಲಿ ಹಾಗೂ ನಟರಾಕ್ಷಸ ಎಂದು ಬಿರುದು ಪಡೆದಿದ್ದಾರೆ.

ಈ ಹೋರಾಟವನ್ನು ಸ್ಮರಿಸಿಕೊಂಡ ಡಾಲಿ ಧನಂಜಯ್ ಹೊಸಬರ ಅಂದ್ರೆ ಹೊಸ ಪ್ರತಿಭೆಗಳ ಆರಂಭದ ಕಲ್ಲುಮುಳ್ಳಿನ ಹಾದಿಯನ್ನು ಸುಲಭವಾಗಿಸು ಉದ್ದೇಶದಿಂದ ಸ್ವತಃ ಡಾಲಿ ಧನಂಜಯ್ ತಮ್ಮ ನಿರ್ಮಾಣ ಸಂಸ್ಥೆಯಿಂದ ಎರಡು ಹೊಸಬರ ಸಿನಿಮಾ ನಿರ್ಮಿಸೋದಾಗಿ ಘೋಷಿಸಿದ್ದಾರೆ. ಅಲ್ಲದೇ ಈ ಸಿನಿಮಾಗಳಲ್ಲಿ ಹೊಸಬರಿಗೆ ಹೆಚ್ಚಿನ ಆದ್ಯತೆ ನೀಡೋದಾಗಿ ಡಾಲಿ ಸ್ಬತಃ ಘೋಷಿಸಿದ್ದಾರೆ.

2013 ರಲ್ಲಿ ಡೈರೈಕ್ಟರ್ ಸ್ಪೆಷಲ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಡಾಲಿ ಧನಂಜಯ್ ನಟನೆಯ ಮೂಲಕವೇ ಗಮನ ಸೆಳೆದರು. 2018 ರಲ್ಲಿ ತೆರೆಕಂಡ ಟಗರು ಸಿನಿಮಾದಲ್ಲಿ ಖಳನಟನ ಪಾತ್ರದಲ್ಲಿ ಮಿಂಚಿ ಡಾಲಿ ಧನಂಜಯ್ ಎಂದೇ ಖ್ಯಾತರಾಗಿದ್ದಾರೆ. ಸದ್ಯ ಹೆಡ್ ಬುಷ್ ಸೇರಿದಂತೆ ಹಲವು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ : Alia Bhatt Trolled: ಆಲಿಯಾ ಭಟ್ ವಿರುದ್ಧ ಬಾಯ್ಕಾಟ್ ‘ಬ್ರಹ್ಮಾಸ್ತ್ರ’

ಇದನ್ನೂ ಓದಿ : Jothe Jotheyali Team : ಜೊತೆ ಜೊತೆಯಲಿ ಸೀರಿಯಲ್​ ಸೆಟ್​ನಿಂದ ಅನೂಪ್​ ಭಂಡಾರಿಗೆ ಆಫರ್​​

Daali Dhananjay birthday Important announcement on

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular