ಡಾಲಿ ಧನಂಜಯ್ (dali dhananjaya) ಹಾಗೂ ಸತ್ಯದೇವ್ (Sathya Dev) ಕಾಂಬಿನೇಷನ್ ನ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಝೀಬ್ರಾ (Zebra Kannada Movie) . ಸಿನಿಮಾ ಚಿತ್ರೀಕರಣ ಆರಂಭವಾದ ದಿನದಿಂದಲೂ ಒಲ್ಲೊಂದು ವಿಚಾರಗಳಿಗಾಗಿ ಸಿನಿಮಾ ಸದ್ದು ಮಾಡುತ್ತಲೇ ಇದ್ದು, ತೀವ್ರ ಕುತೂಹಲ ಮೂಡಿಸುತ್ತಿದೆ. ಸದ್ಯ ಸಿನಿಮಾ ಶೀಘ್ರದಲ್ಲಿಯೇ ತೆರಗೆ ಬರಲಿದೆ.
ಈಗಾಗಲೇ ಝೀಬ್ರಾ ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ನಡೆಯುತ್ತಿವೆ. ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಝೀಬ್ರಾ ಮಾಸ್ ಎಂಟರ್‌ಟೇನರ್ ಸಿನಿಮಾ ಆಗಿದೆ. ಡಾಲಿ ಜೊತೆ ಸತ್ಯದೇವ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಈ ಚಿತ್ರದ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಸತ್ಯದೇವ್ ಮತ್ತು ಡಾಲಿ ಇಬ್ಬರೂ ಚಿತ್ರದ ನಾಯಕರಾಗಿದ್ದು, ಇಬ್ಬರ ಕಾಂಬಿನೇಷನ್ ಸಿನಿಮಾ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ. ಇನ್ನೊಂದು ವಿಶೇಷವೆಂದ್ರೆ ಡಾಲಿ ಧನಂಜಯ ಹಾಗೂ ಸತ್ಯದೇವ್ ಇಬ್ಬರದ್ದು ಇದು 26ನೇ ಸಿನಿಮಾ ಅನ್ನೋದೇ ವಿಶೇಷ. ಝೀಬ್ರಾ ಸಿನಿಮಾ ತೆಲುಗು ಮತ್ತು ಕನ್ನಡದಲ್ಲಿ ಮೂಡಿ ಬರಲಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ತೆರೆ ಕಾಣಲಿದೆ.
ಇದನ್ನೂ ಓದಿ : ವೈವಾಹಿಕ ಜೀವನಕ್ಕೆ ಕಾಲಿಟ್ಟ ಖ್ಯಾತ ಗಾಯಕ ವಾಸುಕಿ ವೈಭವ್ : ಯಾರು ಈ ಹುಡುಗಿ..?
ಝೀಬ್ರಾ ಸಿನಿಮಾದಲ್ಲಿ ಡಾಲಿ ಧನಂಜಯ್, ಸತ್ಯದೇವ್ ಮಾತ್ರವಲ್ಲದೇ ಪ್ರಿಯಾ ಭವಾನಿ ಶಂಕರ್, ಸತ್ಯರಾಜ್, ಸುನೀಲ್ ವರ್ಮ, ಜೆನಿಫರ್ , ಸುರೇಶ್‌ಚಂದ್ರ ಮೆನನ್, ಕಲ್ಯಾಣಿ ನಟರಾಜ್ ಸೇರಿದಂತೆ ಖ್ಯಾತನಾಮ ಕಲಾವಿದರು ಬಣ್ಣ ಹಚ್ಚಿದ್ದಾರೆ. ಈಶ್ವರ್ ಕಾರ್ತಿಕ್ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದೆ.
ಇದನ್ನೂ ಓದಿ : ಅಬ್ಬಬ್ಬಾ… ಬಿಗ್ಬಾಸ್ ಮನೆಯಲ್ಲೇ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿಕೊಂಡ ಸ್ಪರ್ಧಿ
ಇನ್ನು ಸಿನಿಮಾದ ಕಥೆ, ಚಿತ್ರಕಥೆಯನ್ನೂ ಕೂಡ ಈಶ್ವರ್ ಕಾರ್ತಿಕ್ ಬರೆದಿದ್ದು, ಕೆಜಿಎಫ್ ಖ್ಯಾತಿಯ ರವಿಬಸ್ರೂರು ಪ್ಯಾನ್ ಇಂಡಿಯಾ ಸಿನಿಮಾ ‘ZEBRA’ಕ್ಕೆ ಸಂಗೀತ ನೀಡಿದ್ದಾರೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಶೀಘ್ರದಲ್ಲಿಯೇ ಸಿನಿಮಾವನ್ನು ತೆರೆಗೆ ತರಲು ಸಿದ್ದತೆ ನಡೆಸುತ್ತಿದೆ.

ಈ ವರ್ಷ ಡಾಲಿ ಧನಂಜಯ ಆರ್ಕೆಸ್ಟ್ರಾ ಮೈಸೂರು, ಗುರುದೇವ ಹೊಯ್ಸಳ, ಪಾಯುಂ ಒಲಿ ನೀ ಯೇನಕ್ಕು, ಮನು ರಚಿತ್ರ, ತೋತಾಪುರಿ ೨ ಸಿನಿಮಾಗಳು ತೆರೆ ಕಂಡಿವೆ. ಜೀಬ್ರಾ ಈಗಾಗಲೇ ಶೂಟಿಂಗ್ ಮುಗಿಸಿದ್ದರೆ, ಉತ್ತರ ಕಾಂಡ ಪೋಸ್ಟ್ ಪ್ರೊಡಕ್ಸನ್ಸ್ ಕೆಲಸ ನಡೆಯುತ್ತಿದೆ. ಇನ್ನು ತೆಲುಗು ಸಿನಿಮಾ ಪುಷ್ಪಾ೨ ಚಿತ್ರೀಕರಣ ನಡೆಯುತ್ತಿದೆ. ಮೆಕ್ಸಿಕೋದಿಂದ ಅನ್ನಾ ಸಿನಿಮಾ ಕೂಡ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ನಡೆಯುತ್ತಿದೆ.
ಇದನ್ನೂ ಓದಿ : ಸುಧಾರಾಣಿ 21 ವರ್ಷದ ಬಳಿಕ ಮತ್ತೆ ಡ್ಯುಯೇಟ್: ಸ್ಪೆಶಲ್ ವಿಡಿಯೋ ವೈರಲ್
ಬಡವ ರಾಸ್ಕಲ್, ಹೆಡ್‌ಬುಷ್ ಹಾಗೂ ಟಗರು ಪಾಳ್ಯ ಸಿನಿಮಾವನ್ನು ಡಾಲಿ ಧನಂಜಯ ನಿರ್ಮಾಣ ಮಾಡುತ್ತಿದ್ದಾರೆ. ಹೆಡ್ ಬುಷ್, ತೋತಾಪುರ, ಮಾನ್ಸೂನ್ ರಾಗ, ಬಡವ ರಾಸ್ಕಲ್, ಪುಷ್ಪಾ, ರತ್ನನ್ ಪ್ರಪಂಚ, ಸಲಗ, ಯುವರತ್ನ, ಪೊಗರು, ಟಗರು ಸಿನಿಮಾಗಳು ಧನಂಜಯ್‌ಗೆ ಖ್ಯಾತಿಯನ್ನು ತಂದುಕೊಟ್ಟಿದೆ.
dali dhananjaya Sathyadev Combination Move Zebra Shooting Compelet