dance karnataka dance 6 : ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ರಿಯಾಲಿಟಿ ಶೋನಲ್ಲಿ ಒಟ್ಟಾಗಿ ಕಾಣಿಸಲಿದ್ದಾರೆ ಕಿಚ್ಚ- ಶಿವಣ್ಣ

dance karnataka dance 6 : ಚಂದನವನದ ಪಾಲಿಗೆ ಈ ವರ್ಷ ಸುವರ್ಣ ಯುಗ ಎಂದೇ ಹೇಳಬಹುದು. ಏಕೆಂದರೆ ಸ್ಯಾಂಡಲ್​ವುಡ್​ನಲ್ಲಿ ಬರ್ತಿರೋ ಸಾಲು ಸಾಲು ಹಿಟ್​ ಸಿನಿಮಾಗಳು ಸ್ಯಾಂಡಲ್​ವುಡ್​ ಇಂಡಸ್ಟ್ರಿಯ ಹೆಸರನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುತ್ತಿದೆ. ಬೇರೆ ಬೇರೆ ಸಿನಿಮಾ ಇಂಡಸ್ಟ್ರಿ ಕೂಡ ಕನ್ನಡದತ್ತ ಮುಖ ಮಾಡಿ ನೋಡುವಂತಾಗಿದೆ. ಗರುಡ ಗಮನ ವೃಷಭ ವಾಹನ, ಕೆಜಿಎಫ್​ 2, 777 ಚಾರ್ಲಿ ಹೀಗೆ ಒಂದಾದ ಮೇಲೊಂದರಂತೆ ಹಿಟ್​ ಸಿನಿಮಾಗಳು ಸ್ಯಾಂಡಲ್​ವುಡ್​ನಿಂದ ಬರುತ್ತಿದೆ.


ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ ಇದೀಗ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಮತ್ತೊಂದು ಹಿಟ್​ ಸಿನಿಮಾವನ್ನು ನೀಡಲು ಸಜ್ಜಾಗಿದ್ದಾರೆ. ಅನೂಪ್​ ಭಂಡಾರಿ ನಿರ್ದೇಶನದ ಕಿಚ್ಚ ಸುದೀಪ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ವಿಕ್ರಾಂತ್​ ರೋಣ ಸಿನಿಮಾ ವಿಶ್ವಾದ್ಯಂತ ರಿಲೀಸ್​ ಆಗಲು ದಿನಗಣನೆ ಆರಂಭವಾಗಿದೆ. ಸ್ಯಾಂಡಲ್​ವುಡ್​ನಲ್ಲಿ ಸಧ್ಯ ಸಾಲು ಸಾಲು ಸಿನಿಮಾಗಳು ಹಿಟ್​ ಆಗ್ತಿರೋದ್ರಿಂದ ಎಲ್ಲರಿಗೂ ವಿಕ್ರಾಂತ್​ ರೋಣ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಿದರೆ ಸುಳ್ಳಾಗಲಾರದು.


ವಿಕ್ರಾಂತ್​ ರೋಣ ಸಿನಿಮಾದ ಟ್ರೈಲರ್​ ಕೆಲವು ದಿನಗಳ ಹಿಂದೆಯಷ್ಟೇ ರಿಲೀಸ್​ ಆಗಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಸಂಪೂರ್ಣ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದೆ. ಸಿನಿಮಾದ ಪ್ರಚಾರದ ಭಾಗವಾಗಿ ನಟ ಕಿಚ್ಚ ಸುದೀಪ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಎಂಬ ರಿಯಾಲಿಟಿ ಶೋನಲ್ಲಿ ಈ ಬಾರಿ ಕಾಣಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಡ್ಜ್​ ಆಗಿ ನಟ ಶಿವಣ್ಣ ಇದ್ದಾರೆ. ಹೀಗಾಗಿ ಈ ವಾರ ಕಿರುತೆರೆ ವೀಕ್ಷಿಸುವ ಪ್ರತಿಯೊಬ್ಬರೂ ಮನೆಯಲ್ಲಿಯೇ ಕುಳಿತು ಶಿವಣ್ಣ ಹಾಗೂ ಸುದೀಪ ಕಾಂಬಿನೇಷನ್​ನ ಮಜಾವನ್ನು ವೀಕ್ಷಿಸಬಹುದಾಗಿದೆ.


ಈ ವಾರ ಡಿಕೆಡಿ ಸ್ಟೇಜ್​ನಲ್ಲಿ ಎಂಟರ್​ಟೈನ್​ಮೆಂಟ್​ ಕಿಚ್ಚು ಹಚ್ಚೋಕೆ ಬರುತ್ತಿರುವ ಗೆಸ್ಟ್​ ಯಾರು ಹೇಳಿ ಎಂದು ಜೀ ಕನ್ನಡ ವಾಹಿನಿ ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಂಚಿಕೊಂಡಿದೆ. ಹೀಗಾಗಿ ಕಿಚ್ಚ ಅಭಿಮಾನಿಗಳು ಫುಲ್​ ಖುಶ್​ ಆಗಿದ್ದು ವೀಕೆಂಡ್​ ಯಾವಾಗ ಬರುತ್ತಪ್ಪಾ..? ಶಿವಣ್ಣ ಹಾಗೂ ಸುದೀಪ ಒಟ್ಟಾಗಿ ರಕ್ಕಮ್ಮ ಹಾಡಿಗೆ ಸ್ಟೆಪ್ಸ್​ ಹಾಕೋದನ್ನು ನೋಡಬೇಕು ಅಂತಾ ಹೇಳ್ತಿದ್ದಾರೆ.

ಇದನ್ನು ಓದಿ : Eknath Shinde : ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಿ ಏಕನಾಥ್​ ಶಿಂಧೆ ಆಯ್ಕೆ

ಇದನ್ನೂ ಓದಿ : Eoin Morgan : ಇಂಗ್ಲಿಷ್ ಕ್ರಿಕೆಟ್ ದಿಕ್ಕನ್ನೇ ಬದಲಿಸಿದ ಐರಿಷ್ ಆಟಗಾರ ; ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಂಗ್ಲೆಂಡ್ ದಿಗ್ಗಜನ ವಿದಾಯ

dance karnataka dance 6 shivarajkumar and vikranr rona actor sudeep combination for this week

Comments are closed.