ನಿರ್ದೇಶಕ ಶಶಾಂಕ್ ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿ ಸೇರಿದಂತೆ ಹಲವು ವಿಭಿನ್ನ ರೀತಿಯ ಲವ್‌ಸ್ಟೋರಿ ಸಿನಿಮಾಗಳನ್ನು ಮಾಡುವುದರಲ್ಲಿ ಯಶಸ್ಸು ಕಂಡಿದ್ದಾರೆ. ಸದ್ಯ ಡಾರ್ಲಿಂಗ್ ಕೃಷ್ಣ ಹಾಗೂ ನಿರ್ದೇಶಕ ಶಶಾಂಕ್ ಕಾಂಬಿನೇಷನ್‌ನಲ್ಲಿ ‘ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾ (Kousalya Supraja Rama movie) ಬರಲಿದೆ. ಇನ್ನು ಈ ಸಿನಿಮಾದ ಮೊದಲ ಹಾಡನ್ನು ನಾಳೆ (ಏಪ್ರಿಲ್ 17) ರಿಲೀಸ್ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಶಶಾಂಕ್ ಮಾಹಿತಿ ನೀಡಿದ್ದಾರೆ.
ನಿರ್ದೇಶಕ ಶಶಾಂಕ್ ತಮ್ಮ ಟ್ವೀಟ್‌ನಲ್ಲಿ, “ಒಂದು ಆಸಕ್ತಿದಾಯಕ ವಿಡಿಯೋ, ನಾಳೆ ಸಂಜೆ 6.00 ಗಂಟೆಗೆ ಕೌಸಲ್ಯಾಸುಪ್ರಜಾರಾಮ ಮೊದಲನೆಯ ಹಾಡಿನ ಝಲಕ್ ಬಿಡುಗಡೆಯಾಗಲಿದೆ.. ನಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಿಗೆ ಟ್ಯೂನ್ ಆಗಿರಿ” ಎಂದು ಪೋಸ್ಟರ್ ಹಾಕುವ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಒಟ್ಟು ಐದು ಹಾಡುಗಳಿದ್ದು, ನಾಳೆ ಒಂದು ಹಾಡನ್ನು ಬಿಡುಗಡೆ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ಹೆಣ್ಣಿನ ದೃಷ್ಟಿಕೋನಲ್ಲಿ ನಿಜವಾದ ಗಂಡಸು ಎಂದರೆ ಯಾರು ಮತ್ತು ಆತ ಹೇಗಿರಬೇಕು ಎನ್ನುವುದನ್ನು ಹೇಳುವ ಕಥೆ ಕೌಸಲ್ಯಾ ಸುಪ್ರಜಾ ರಾಮ ಸಿನಿಮಾದ್ದು ಎಂದು ನಿರ್ದೇಶಕ ಶಶಾಂಕ್ ತಿಳಿಸಿದ್ದಾರೆ.
ಒಂದು ಆಸಕ್ತಿದಾಯಕ ವಿಡಿಯೋ ಮೂಲಕ, ನಾಳೆ ಸಂಜೆ 6:00 ಗಂಟೆಗೆ#ಕೌಸಲ್ಯಾಸುಪ್ರಜಾರಾಮ
— Shashank (@Shashank_dir) April 16, 2023
ಚಿತ್ರದ ಮೊದಲನೆಯ ಹಾಡಿನ ಝಲಕ್ ಬಿಡುಗಡೆಯಾಗಲಿದೆ..
Stay tuned to our social media handles #KousalyaSuprajaRama@darlingkrishnaa @brinda_ba18 @ArjunJanyaMusic @saregamasouth#ShashankCinemass#KouravaProductionHouse pic.twitter.com/84vGLay2dk
ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರ ರಗಡ್ ಲುಕ್ ಕಾಣಿಸಿಕೊಂಡಿದ್ದು, ಒಂದು ಬದಿಯಲ್ಲಿ ತಾಯಿಯ ಪ್ರೀತಿ, ಇನ್ನೊಂದು ಬದಿಯಲ್ಲಿ ಹುಡುಗಿಯ ಪ್ರೇಮ ಕಾಣುತ್ತದೆ. ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಮೈಸೂರಿನ ದೃಶ್ಯಗಳಿವೆ. ಲವ್ ಮಾಕ್‌ಟೇಲ್ ಮತ್ತು ಲವ್‌ಬರ್ಡ್ಸ್‌ಗಿಂತ ವಿಭಿನ್ನ ರೀತಿಯ ಡಾರ್ಲಿಂಗ್ ಕೃಷ್ಣ ಅವರನ್ನು ಈ ಸಿನಿಮಾದಲ್ಲಿ ನಿರೀಕ್ಷಿಸಬಹುದು. ಈ ಸಿನಿಮಾದ ಶೂಟಿಂಗ್ ಕಳೆದ ಅಕ್ಟೋಬರ್‌ನಲ್ಲೇ ಆರಂಭವಾಗಿದ್ದು, ಮಾರ್ಚ್‌ವರೆಗೆ ಒಟ್ಟು 70 ದಿನಗಳ ಕಾಲ ಚಿತ್ರೀಕರಣ ನಡೆದಿದೆ.
ಇದನ್ನೂ ಓದಿ : ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ : ಕಾಂತಾರ ಶಿವ ರಿಷಬ್ ಶೆಟ್ಟಿಗೆ ಬೆಸ್ಟ್ ಆಕ್ಟರ್ ಪ್ರಶಸ್ತಿ
ಇದನ್ನೂ ಓದಿ : Scam 1770 Movie Teaser : ದಡ್ಡ ಪ್ರವೀಣ್‌ನ ಹೊಸ ಸಿನಿಮಾಕ್ಕೆ ಶುಭಕೋರಿದ ನಟ ರಿಷಬ್ ಶೆಟ್ಟಿ
ಬೆಂಗಳೂರು ಹಾಗೂ ಮೈಸೂರಿನ ವಿವಿಧ ಭಾಗಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಕಾಶ್ಮೀರದಲ್ಲಿ ಒಂದು ಹಾಡನ್ನು ಸೆರೆಹಿಡಿಯಲಾಗಿದೆ. ಈಗ ಸಿನಿಮಾ ರೀ-ರೆಕಾರ್ಡಿಂಗ್ ಕೆಲಸ ನಡೆಯುತ್ತಿದೆ. ಈ ಸಿನಿಮಾ ಜೂನ್‌ನಲ್ಲಿ ತೆರೆಗೆ ಕಾಣುವ ನಿರೀಕ್ಷೆ ಇದೆ. ಕೌಸಲ್ಯಾ ಸುಪ್ರಜಾ ರಾಮ ದಲ್ಲಿ ಬೃಂದಾ ಆಚಾರ್ಯ ನಾಯಕಿಯಾಗಿ ನಟಿದ್ದಾರೆ. ಈ ಸಿನಿಮಾದಲ್ಲಿ ರಂಗಾಯಣ ರಘು, ಸುಧಾ ಬೆಳವಾಡಿ, ನಾಗಭೂಷಣ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಸಿನಿಮಾವನ್ನು ಬಿ.ಸಿ. ಪಾಟೀಲ್ ಅವರ ಕೌರವ ಪ್ರೊಡಕ್ಷನ್ ಹಾಗೂ ಶಶಾಂಕ್ ಸಿನಿಮಾಸ್ ಜಂಟಿಯಾಗಿ ನಿರ್ಮಿಸಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಸಿನಿಮಾಕ್ಕಿದೆ.
Darling Krishna starrer Kousalya Supraja Rama movie first song release tomorrow