ಭಾನುವಾರ, ಏಪ್ರಿಲ್ 27, 2025
HomeCinemaDarshan - Sudeep : ಸುದೀಪ್‌ ಬೆಂಬಲಕ್ಕೆ ಧನ್ಯವಾದ ಹೇಳಿದ ದರ್ಶನ್‌ : ಹಳೆಯದನ್ನು ಮರೆತು...

Darshan – Sudeep : ಸುದೀಪ್‌ ಬೆಂಬಲಕ್ಕೆ ಧನ್ಯವಾದ ಹೇಳಿದ ದರ್ಶನ್‌ : ಹಳೆಯದನ್ನು ಮರೆತು ಇಬ್ಬರು ಒಂದಾಗಿ ಎಂದ ಜಗ್ಗೇಶ್

- Advertisement -

“ಕ್ರಾಂತಿ” ಸಿನಿಮಾದ ಎರಡನೇ ಹಾಡಿನ ಬಿಡುಗಡೆಯ ಬಿಡುಗಡೆಯ ವೇಳೆ ಹೊಸಪೇಟೆಯಲ್ಲಿ ನಡೆದ ಘಟನೆಯನ್ನು ಖಂಡಿಸಿ ನಟ ಸುದೀಪ್‌ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿ, ದರ್ಶನ್‌ಗೆ ಬೆಂಬಲವನ್ನು (Darshan – Sudeep) ಸೂಚಿಸಿದ್ದರು. ಪ್ರತಿಯಾಗಿ ನಟ ದರ್ಶನ್‌, “ಸುದೀಪ್‌ ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು” ಎಂದು ಪ್ರತಿಕ್ರಿಸಿದ್ದಾರೆ. ಸುದೀಪ್‌ ಬೆಂಬಲದ ಮಾತುಗಳಿಗೆ ದರ್ಶನ್‌ ಧನ್ಯವಾದ ತಿಳಿಸುತ್ತಿದ್ದಂತೆ ನಟ ಜಗ್ಗೇಶ್‌ ವೈಮನಸ್ಸು ಮರೆತು ಇಬ್ಬರೂ ಒಂದಾಗಿ ಎಂದು ಕಿವಿ ಮಾತು ಹೇಳಿದ್ದಾರೆ.

ಐದು ವರ್ಷಗಳ ಹಿಂದೆ ಸುದೀಪ್‌ ಹಾಗೂ ದರ್ಶನ್‌ ಯಾವುದೋ ಒಂದು ವಿಚಾರಕ್ಕೆ ವೈಮನಸ್ಸಿನಿಂದ ದೂರವಾಗಿದ್ದರು. ನಂತರದ ದಿನಗಳಲ್ಲಿ ದರ್ಶನ್‌ ಎಂದಿಗೂ ಸುದೀಪ್‌ ಹೆಸರನ್ನು ಎಲ್ಲೂ ತೆಗೆದುಕೊಂಡಿರಲಿಲ್ಲ. ಇಬ್ಬರು ಒಬ್ಬರಿಗೊಬ್ಬರು ಪರಿಚಯವಿಲ್ಲ ಎಂಬ ರೀತಿಯಲ್ಲಿ ಇದ್ದಿದ್ದರು. ಅದರಲ್ಲಿ ಸುದೀಪ್‌ ಕೆಲ ಸಮಯದ ನಂತರ ಸ್ನೇಹದ ಹಸ್ತವನ್ನು ಚಾಚಿದ್ದರು. ಆದರೆ ದರ್ಶನ್‌ ಮಾತ್ರ ತಮ್ಮ ಪಟ್ಟನ್ನು ಬಿಟ್ಟಿರಲಿಲ್ಲ. ಇದೇ ಮೊದಲ ಬಾರಿಗೆ ಸುದೀಪ್‌ ಟ್ವೀಟ್‌ಗೆ ದರ್ಶನ್‌ ಪ್ರತಿಕ್ರಿಯಿಸಿದ್ದಾರೆ.

ದರ್ಶನ್‌ ಮತ್ತು ಸುದೀಪ್‌ ಇವರಿಬ್ಬರು ದೂರವಾದ ದಿನದಿಂದ ಇಬ್ಬರ ಅಭಿಮಾನಿಗಳು ಆದಷ್ಟು ಬೇಗ ಒಂದಾಗಲಿ, ಇಬ್ಬರನ್ನೂ ಒಟ್ಟಿಗೆ ನೋಡುವ ಹಾಗೆ ಆಗಲಿ ಎಂದು ಆಶಿಸುತ್ತಲೇ ಬಂದಿದ್ದಾರೆ. ಇದೀಗ ನಟ ಜಗ್ಗೇಶ್‌ ಕೂಡ ದರ್ಶನ್‌ಗೆ ಇದೇ ಸಲಹೆಯನ್ನು ನೀಡಿದ್ದಾರೆ. “ಪ್ರೀತಿಯ ದರ್ಶನ್‌ ಹಳೆಯ ಚಿಂತನೆಗೆ ವಿನಾಯಿತಿ ಕೇಳಿ ಹೊಸ ಸ್ನೇಹದ ಭಾಷ್ಯಕ್ಕೆ ಮುನ್ನುಡಿ ಬರೆದು ಸುದೀಪ್‌ ನೀನು ಒಂದಾಗಿ ಸಹಸ್ರ ಅಭಿಮಾನಿಗಳಿಗೆ ಹರ್ಷದ ಹೊನಲು ಹರಸಿ. ನೀವಿಬ್ಬರು ಒಂದಾದರೆ ಕೋಟಿ ಮನ ಒಂದಾಗಿ ಭಿನ್ನಾಭಿಪ್ರಾಯ ಎಂಬ ಕಾಡ್ಗಿಚ್ಚು ತಣ್ಣಗಾಗಿ ಸುಟ್ಟ ಜಾಗ ನಂದನವನ ಆಗುತ್ತದೆ. ಹಳೆಯದನ್ನು ಮರೆತು ಇಬ್ಬರು ಅಪ್ಪಿಕೊಳ್ಳಿ” ಎಂದು ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ : Jhoome Jo Pathaan : “ಪಠಾನ್‌” ಸಿನಿಮಾದ ಎರಡನೇ ಹಾಡು “ಜೂಮ್‌ ಜೋ” ರಿಲೀಸ್‌ : ಇನ್ನೊಂದು ಸಲ ಹಾಟ್‌ ಲುಕ್‌ನಲ್ಲಿ ಶಾರುಖ್‌ ಮತ್ತು ದೀಪಿಕಾ ಪಡುಕೋಣೆ

ಇದನ್ನೂ ಓದಿ : kantara: ಆಸ್ಕರ್​ ರೇಸ್​ಗೆ ಇಳಿಯಲು ಸಜ್ಜಾದ ಕಾಂತಾರ : ಕಾಂತಾರ 2 ಬಗ್ಗೆಯೂ ಹೊಂಬಾಳೆ ಫಿಲ್ಮ್ಸ್​​ನಿಂದ ಬಿಗ್​ ಅಪ್​​ಡೇಟ್​

ಇದನ್ನೂ ಓದಿ : ಕೆಜಿಎಫ್‌ ಸಿನಿಮಾಕ್ಕೆ 4 ವರ್ಷ : ಇತಿಹಾಸ ಸೃಷ್ಟಿಸಿದ ದಿನವನ್ನು ನೆನಪಿಸಿದ ಹೊಂಬಾಳೆ ಫಿಲ್ಮ್ಸ್

ಸುದೀಪ್‌ ಬೆಂಬಲದ ಮಾತುಗಳಿಗೆ ನಟ ದರ್ಶನ್‌ ಪ್ರತಿಕ್ರಿಯಿಸುತ್ತಿದ್ದಂತೆ ಇಬ್ಬರ ಅಭಿಮಾನಿಗಳು ಖುಷಿಯಾಗಿದ್ದಾರೆ. ಕೆಲವೇ ನಿಮಿಷಗಳಲ್ಲಿ ಈ ರಿಪ್ಲೇ ಟ್ವೀಟ್‌ ಒಂಬತ್ತು ಸಾವಿರ ಕ್ಕೂ ಅಧಿಕ ಮರು ಟ್ವೀಟ್‌, ಸಾವಿರಕ್ಕೂ ಅಧಿಕ ಕಾಮೆಂಟ್‌ ಹಾಗೂ 25 ಸಾವಿರಕ್ಕೂ ಅದೀಕ ಲೈಕ್ಸ್‌ ಗಿಟ್ಟಿಸಿಕೊಂಡಿದೆ. ಇವರ ಅಭಿಮಾನಿಗಳು ಇದು ರಾಜ್ಯವೇ ಖುಷಿಪಟುವ ಸುದ್ಧಿ ಎಂದು ಹೇಳಿ ಸಂಭ್ರಮಿಸಿದ್ದಾರೆ. ಆದಷ್ಟು ಬೇಗ ಇಬ್ಬರು ಒಂದಾಗಿ ಕುಚುಕು ಗೆಳೆಯರನ್ನು ಒಟ್ಟಿಗೆ ನೋಡಲು ಕಾಯುತ್ತಿದ್ದೇವೆ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡುತ್ತಿದ್ದಾರೆ.

Darshan – Sudeep : Darshan thanked Sudeep for his support : Jaggesh said that they have forgotten the old and become one.

RELATED ARTICLES

Most Popular