ನವವಿವಾಹಿತರಿಗೆ ಸಿಹಿ ಸುದ್ದಿ : ಕೇಂದ್ರ ಸರಕಾರದಿಂದ 2.50 ಲಕ್ಷ ರೂ. ಉಚಿತ ಧನ ಸಹಾಯ

ನವದೆಹಲಿ : ಪ್ರತಿ ವರ್ಷ ದೀಪಾವಳಿಯ ನಂತರ ಮದುವೆ ಕಾರ್ಯಕ್ರಮಗಳು ಪ್ರಾರಂಭವಾಗುತ್ತದೆ. ಈ ವರ್ಷವೂ ಸಹ ಅನೇಕ ಕುಟುಂಬದ ಹುಡುಗ – ಹುಡುಗಿಯರು ಮದುವೆಯಾಗಲು (Newly Married Couple) ಸಿದ್ಧರಾಗಿದ್ದಾರೆ. ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ಇತ್ತೀಚೆಗೆ ಮದುವೆಯಾಗಿದ್ದರೆ, ಈ ಸುದ್ಧಿ ಬಹಳ ಮುಖ್ಯವಾಗುತ್ತದೆ. ಹಾಗಾಗಿ ನೀವು ಸರಕಾರದ ಈ ಯೋಜನೆಯ ಬಗ್ಗೆ ತಿಳಿದುಕೊಳ್ಳಬೇಕಾಗಿದೆ.

ನವ ದಂಪತಿಗಳಿಗೆ ಸರಕಾರ 2 ಲಕ್ಷದ 50 ಸಾವಿರ ರೂ.ಗಳನ್ನು ನೀಡುತ್ತಿದ್ದು, ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ಕ್ಷೇತ್ರದ ಸಂಸದ ಅಥವಾ ಶಾಸಕರಿಗೆ ಅರ್ಜಿ ಸಲ್ಲಸಬೇಕು. ಈ ಯೋಜನೆಯಿಂದ ನೀವು ಅಥವಾ ನವವಿವಾಹಿತರು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎನ್ನುವ ಮಾಹಿತಿ ಇಲ್ಲಿದೆ. ಮೊದಲು ನೀವು ಅಥವಾ ನವ ದಂಪತಿಗಳು ಇರುವ ಪ್ರದೇಶದ ಪ್ರಸ್ತುತ ಶಾಸಕ ಅಥವಾ ಸಂಸದರನ್ನು ಸಂಪರ್ಕಿಸಬೇಕಾಗಿದೆ.

ಈ ಯೋಜನೆಗಾಗಿ ರಾಜ್ಯ ಸರಕಾರ ಅಥವಾ ಜಿಲ್ಲಾಡಳಿತ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು. ನಿಯಮಗಳ ಪ್ರಕಾರ ನವ ದಂಪತಿಗಳು ಅರ್ಜಿಯನ್ನು ಭರ್ತಿ ಮಾಡಿ, ಅದನ್ನು ಕಚೇರಿಗೆ ನೀಡಬೇಕು. ಅಲ್ಲಿಂದ ಕಳುಹಿಸಿದ ಅರ್ಜಿಯ್ನು ಡಾ. ಅಂಬೇಡ್ಕರ್‌ ಪೌಂಡೇಶನ್‌ ಕಛೇರಿಗೆ ಕಳುಹಿಸಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ಸಾಮಾನ್ಯ ವರ್ಗದ ವ್ಯಕ್ತಿಗಳ ಅರ್ಜಿಯನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಅದು ದಲಿತ ಹುಡುಗಿಯನ್ನು ಮದುವೆಯಾಗಿರಬೇಕು. ಅಂದರೆ ಮದುವೆಯಾಗುವ ಹುಡುಗ – ಹುಡುಗಿ ಒಂದೇ ಜಾತಿಗೆ ಸೇರಿರಬಾರದು. ನವವಿವಾಹಿತರು ತಮ್ಮ ಮದುವೆಯನ್ನು ಹಿಂದೂ ವಿವಾಹ ಕಾಯಿದೆ 1955ರ ಅಡಿಯಲ್ಲಿ ನೋಂದಾಯಿಸಿರಬೇಕು.

ಇಲ್ಲಿ ಗಮನಿಸಿಬೇಕಾದ ವಿಷಯವೆನೆಂದರೆ, ಇದು ದಂಪತಿಗಳ ಮೊದಲ ಮದುವೆಯಾಗಿರಬೇಕು. ಇದು ಅವರ ಎರಡನೇ ಮದುವೆಯಾಗಿದ್ದರೆ, ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಿರುವುದಿಲ್ಲ. ಹಾಗೇ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವ ಮೊದಲು ನೀವು ಯಾವುದೇ ರಾಜ್ಯ ಅಥವಾ ಕೇಂದ್ರ ಸರಕಾರದ ಪ್ರಯೋಜನ ಪಡೆದುಕೊಂಡಿದ್ದೀರಾ ಎನ್ನುವುದನ್ನು ಗಮನಿಸಬೇಕಾಗಿದೆ. ನೀವು ಬೇರೆ ಯಾವುದೇ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದರೆ, ಈ ಯೋಜನೆಯ ಮೊತ್ತ ಕಡಿಮೆಯಾಗುತ್ತದೆ. ಉದಾಹರಣೆಗೆ ಯಾವುದೇ ಯೋಜನೆ ಅಡಿಯಲ್ಲಿ ರೂ.10000 ಪಡೆದರೆ ಸರಕಾರ ಈ ಯೋಜನೆಯ ಒಟ್ಟು (250000-10000=240000) ಮೊತ್ತದಲ್ಲಿ ಹತ್ತು ಸಾವಿರವನ್ನು ಕಡಿಮೆ ನೀಡುತ್ತದೆ.

ಇದನ್ನೂ ಓದಿ : Metro AG – Reliance Retail Ventures : 2,850 ಕೋಟಿ ರೂ.ಗೆ ಮೆಟ್ರೋ ಎಜಿಯನ್ನು ಸ್ವಾಧೀನಪಡಿಸಿಕೊಂಡ ರಿಲಯನ್ಸ್ ರಿಟೇಲ್ ವೆಂಚರ್ಸ್

ಇದನ್ನೂ ಓದಿ : Bank Holidays January 2023 : ಬ್ಯಾಂಕ್‌ ಗ್ರಾಹಕರೇ ಗಮನಿಸಿ : ಜನವರಿ ತಿಂಗಳಲ್ಲಿ 14 ದಿನ ಬ್ಯಾಂಕ್‌ ರಜೆ

ಇದನ್ನೂ ಓದಿ : Metro AG : 19 ವರ್ಷದ ಬಳಿಕ ಭಾರತದ ಮಾರುಕಟ್ಟೆ ತೊರೆಯಲಿದೆ ಮೆಟ್ರೋ ಎಜಿ : ಕಾರಣವೇನು ಗೊತ್ತಾ ?

ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ :

  • ಹೊಸದಾಗಿ ಮದುವೆಯುಆದ ದಂಪತಿಗಳು ಈ ಅರ್ಜಿಯೊಂದಿಗೆ ತಮ್ಮ ಜಾತಿ ಪ್ರಮಾಣಪತ್ರವನ್ನು ಲಗತ್ತಿಸಬೇಕು.
  • ಅರ್ಜಿಯೊಂದಿಗೆ ವಿವಾಹ ಪ್ರಮಾಣಪತ್ರವನ್ನು ಸಲ್ಲಿಸಬೇಕು.
  • ನೀವು ಮದುವೆಯಾಗಿದ್ದೀರಿ ಎಂದು ತಿಳಿಸಲು ಅಫಿಡವಿಟ್‌ ಕೂಡ ನಿಮಗೆ ಬೇಕಾಗುತ್ತದೆ.
  • ಈ ಮದುವೆ ನಿಮ್ಮ ಮೊದಲ ಮದುವೆ ಎಂದು ನೀವು ಸಾಭಿತುಪಡಿಸಬೇಕು.
  • ಗಂಡ ಮತ್ತು ಹೆಂಡತಿ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಬೇಕು.
  • ಜಂಟಿ ಬ್ಯಾಂಕ್‌ ಖಾತೆಗೆ ಜಮಾ ಮಾಡಿ, ನಂತರ ಹಣವನ್ನು ನಿಮಗೆ ವರ್ಗಾಯಿಸಲಾಗುತ್ತದೆ.
  • ಅರ್ಜಿಯನ್ನು ಸಲ್ಲಿಸಿದ ನಂತರ, ಅದನ್ನು ಪರಿಶೀಲಿಸಲಾಗುತ್ತದೆ. ಕೆಲವು ದಿನಗಳ ನಂತರ ಪತಿ ಮತ್ತು ಪತ್ನಿಯ ಬ್ಯಾಂಕ್‌ ಖಾತೆಗೆ ಅವರ ಪರವಾಗಿ 1.5ಲಕ್ಷ ರೂ. ಉಳಿದ ಒಂದು ಲಕ್ಷ ರೂ.ಯನ್ನು ನಿಮಗೆ ಎಫ್‌ಡಿಯಾಗಿ ನೀಡಲಾಗುತ್ತದೆ.

Newly Married Couple: Sweet news for the newlyweds: 2.50 lakh rupees from the central government. Free financial assistance

Comments are closed.