Ranji Trophy : ಕರ್ನಾಟಕಕ್ಕೆ ಮೊದಲ ಜಯ, 3ನೇ ದಿನಗಳಲ್ಲಿ ಗೆದ್ದು ಬೀಗಿದ ಮಯಾಂಕ್ ಬಾಯ್ಸ್

ಬೆಂಗಳೂರು : ಪ್ರಸಕ್ತ ಸಾಲಿನ ರಣಜಿ ಟ್ರೋಫಿಯಲ್ಲಿ (Ranji Trophy 2022-23) 8 ಬಾರಿಯ ಚಾಂಪಿಯನ್ಸ್ ಕರ್ನಾಟಕ ತಂಡ (Ranji Karnataka) ಮೊದಲ ಜಯ ದಾಖಲಿಸಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಅಂತ್ಯಗೊಂಡ ಪಾಂಡಿಚೇರಿ ವಿರುದ್ಧದ ಪಂದ್ಯವನ್ನು ಕರ್ನಾಟಕ ತಂಡ ಮೂರೇ ದಿನಗಳಲ್ಲಿ ಇನ್ನಿಂಗ್ಸ್ ಹಾಗೂ 7 ರನ್’ಗಳಿಂದ ಗೆದ್ದುಕೊಂಡಿತು.

ಇದರೊಂದಿಗೆ ಬೋನಸ್ ಪಾಯಿಂಟ್ ಸಹಿತ 7 ಅಂಕ ಸಂಪಾದಿಸಿದ ಮಯಾಂಕ್ ಅಗರ್ವಾಲ್ ಬಳಗ, ಎಲೈಟ್ ’ಸಿ’ ಗುಂಪಿನಲ್ಲಿ ಒಟ್ಟು 10 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆದಿದ್ದ ಸರ್ವಿಸಸ್ ವಿರುದ್ಧದ ಮೊದಲ ಪಂದ್ಯ ಡ್ರಾಗೊಂಡಿತ್ತು.ಪ್ರಥಮ ಇನ್ನಿಂಗ್ಸ್’ನಲ್ಲಿ 134 ರನ್’ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ್ದ ಪಾಂಡಿಚೇರಿ 2ನೇ ದಿನದಂತ್ಯಕ್ಕೆ 58 ರನ್ನಿಗೆ 3 ವಿಕೆಟ್ ಕಳೆದುಕೊಂಡಿತ್ತು. 3ನೇ ದಿನ ಆಟ ಮುಂದುವರಿಸಿದ ಪ್ರವಾಸಿ ಪಡೆ, ಕರ್ನಾಟಕ ಬೌಲರ್’ಗಳ ಮಾರಕ ದಾಳಿಗೆ ತತ್ತರಿಸಿ ಕೇವಲ 127 ರನ್’ಗಳಿಗೆ ಆಲೌಟಾಗಿ ಇನ್ನಿಂಗ್ಸ್ ಅಂತರದಲ್ಲಿ ಆತಿಥೇಯರಿಗೆ ಶರಣಾಯಿತು.

ಕರ್ನಾಟಕ ಪರ ಅಮೋಘ ದಾಳಿ ಸಂಘಟಿಸಿದ ಬಲಗೈ ಮಧ್ಯಮ ವೇಗಿ ರೋನಿತ್ ಮೋರೆ 36 ರನ್ನಿತ್ತು 4 ವಿಕೆಟ್ ಪಡೆದರೆ, ಮತ್ತೊಬ್ಬ ಬಲಗೈ ಯುವ ಮಧ್ಯಮ ವೇಗದ ಬೌಲರ್ ವೈಶಾಕ್ ವಿಜಯ್ ಕುಮಾರ್ 23 ರನ್ನಿತ್ತು 3 ವಿಕೆಟ್ ಕಬಳಿಸಿದರು. ಉಳಿದ ಮೂರು ವಿಕೆಟ್’ಗಳನ್ನು ಬಲಗೈ ಸೀಮರ್ ವಿದ್ವತ್ ಕಾವೇರಪ್ಪ (2/44) ಮತ್ತು ಕೃಷ್ಣಪ್ಪ ಗೌತಮ್ (1/21) ಹಂಚಿಕೊಂಡರು.

ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ಪಾಂಡಿಚೇರಿ ಪ್ರಥಮ ಇನ್ನಿಂಗ್ಸ್’ನಲ್ಲಿ 170 ರನ್’ಗಳಿಗೆ ಆಲೌಟಾದ್ರೆ, ಇದಕ್ಕೆ ಪ್ರತಿಯಾಗಿ ಕರ್ನಾಟಕ ತಂಡ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ 304 ರನ್ ಕಲೆ ಹಾಕಿತ್ತು. ಉಪನಾಯಕ ಆರ್.ಸಮರ್ಥ್ 137, ನಾಯಕ ಮಯಾಂಕ್ ಅಗರ್ವಾಲ್ 51 ಹಾಗೂ ಮಾಜಿ ನಾಯಕ ಮನೀಶ್ ಪಾಂಡೆ 45 ರನ್ ಗಳಿಸಿ ಕರ್ನಾಟಕಕ್ಕೆ ಆಸರೆಯಾಗಿದ್ದರು. ಶತಕವೀರ ಸಮರ್ಥ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಡಿಸೆಂಬರ್ 27ರಂದು ಗೋವಾದ ಪೊರ್ವರಿಮ್’ನಲ್ಲಿ ಆರಂಭವಾಗಲಿರುವ ತನ್ನ 3ನೇ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ, ಆತಿಥೇಯ ಗೋವಾ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : Jaydev Unadkat : 12 ವರ್ಷಗಳ ನಂತರ ಭಾರತ ಪರ ಟೆಸ್ಟ್ ಆಡುವ ಅವಕಾಶ, ಇದು ಸೌರಷ್ಟ್ರದ ಛಲದಂಕಮಲ್ಲನ ಕಥೆ

ಇದನ್ನೂ ಓದಿ : Kuldeep Yadav Dropped : ಕಳೆದ ಪಂದ್ಯದಲ್ಲಿ ‘ಮ್ಯಾನ್ ಆಫ್ ದಿ ಮ್ಯಾಚ್’, ಈ ಪಂದ್ಯದಲ್ಲಿ ತಂಡದಿಂದಲೇ ಔಟ್ : Sorry ಕುಲ್‌ದೀಪ್ ಯಾದವ್

ಇದನ್ನೂ ಓದಿ : IPL 2023 Auction : ನಾಳೆ ಐಪಿಎಲ್ ಆಟಗಾರರ ಹರಾಜು: ಫ್ರಾಂಚೈಸಿಗಳ ಕಣ್ಣು ಯಾರ ಮೇಲೆ..? ಹರಾಜು ಸಮಯ, Live ಟೆಲಿಕಾಸ್ಟ್.. ಇಲ್ಲಿದೆ ಕಂಪ್ಲೀಟ್ ಮಾಹಿತಿ

Ranji Trophy : ರಣಜಿ ಟ್ರೋಫಿ 2022-23: ಕರ್ನಾಟಕದ ಮುಂದಿನ ಪಂದ್ಯಗಳು :

  • ಡಿಸೆಂಬರ್ 27-30 Vs ಗೋವಾ (ಪೊರ್ವರಿಮ್)
  • ಜನವರಿ 03-06 Vs ಛತ್ತೀಸ್’ಗಢ (ರಾಯ್ಪುರ)
  • ಜನವರಿ 10-13 Vs ರಾಜಸ್ಥಾನ (TBC)
  • ಜನವರಿ 17-20 Vs ಕೇರಳ (ತಿರುವನಂತಪುರಂ)
  • ಜನವರಿ 24-27 Vs ಜಾರ್ಖಂಡ್ (ರಾಂಚಿ)

Ranji Trophy : First win for Karnataka, Mayank Boys won in 3 days

Comments are closed.