Darshan Thoogudeepa New Movies Katera: ನಟ ದರ್ಶನ ಬಹುನೀರಿಕ್ಷಿತ ಚಿತ್ರ ಕಾಟೇರಾ ತೆರೆಗೆ ಬಂದಿದೆ. ತರುಣ್ ಸುಧೀರ್ ಜೊತೆ ದರ್ಶನ್ ತೂಗುದೀಪ್ ಕಾಮಿನೇಶನ್ ನ ಈ ಸಿನಿಮಾ ಮತ್ತೊಮ್ಮೆ ದರ್ಶನ ಗೆಲುವಿನ ಯುಗಾರಂಭ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದೆಲ್ಲದರ ಮಧ್ಯೆ ದರ್ಶನ್ ಸಿನಿಮಾ ತೆರೆಗೂ ಮುನ್ನ ಇಬ್ಬರು ಸ್ಪೆಶಲ್ ಪರ್ಸನ್ ಗಳು ಮುಕ್ತವಾಗಿ ವಿಶ್ ಮಾಡಿದ್ದಾರೆ.ಅದ್ಯಾರು ಅನ್ನೋ ಕುತೂಹಲನಾ ? ಸ್ಟೋರಿ ಓದಿ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದಾ ವಿವಾದಗಳ ಸುತ್ತವೇ ಗುರುತಿಸಿಕೊಳ್ಳೋ ನಟ. ಅವರು ಬೇಡವೆಂದರೂ ಒಂದಿಲ್ಲೊಂದು ವಿವಾದಗಳು ಸದಾ ಅವರ ಸುತ್ತ ಸುತ್ತುತ್ತಲೇ ಇರೋದು ಕಾಮನ್. ಕೇವಲ ಸಿನಿಮಾಗಳ ಜೊತೆಗೆ ವೈಯಕ್ತಿಕ ಬದುಕಿನಿಂದಲೂ ಸಾಕಷ್ಟು ಭಾರಿ ಸುದ್ದಿಯಾಗಿದ್ದು ಇದೆ. ಸದ್ಯ ಸತತ ಸೋಲುಗಳಿಂದ ಕಂಗೆಟ್ಟು ಮತ್ತೊಂದು ಸಾರಥಿಯಂತಹ ಬ್ರೇಕ್ ಗೆ ಕಾದಿರೋ ದರ್ಶನ್ ಪಾಲಿಗೆ ಕಾಟೇರಾ ಅತ್ಯಂತ ಮಹತ್ವದ ಸಿನಿಮಾ.

ರಾಬರ್ಟ್ ಬಳಿಕ ಮತ್ತೊಮ್ಮೆ ದರ್ಶನ್ ಗೆಲ್ಲಿಸಲು ತರುಣ್ ಸುಧೀರ್ ಈ ಸಿನಿಮಾದ ಜೊತೆಗೆ ಒಂದಾಗಿದ್ದಾರೆ. ಅದರಲ್ಲೂ ರಾಕ್ ಲೈನ್ ವೆಂಕಟೇಶ್ ಸಿನಿಮಾ ನಿರ್ಮಾಣ ಮಾಡಿರೋದು ಇನ್ನೊಂದು ವಿಶೇಷತೆ. ಈ ಮಧ್ಯೆ ಕಾಟೇರಾ ಸಿನಿಮಾ ಕೇವಲ ದರ್ಶನ್ ಗೆ ಮಾತ್ರವಲ್ಲ ಒಂದು ಕಾಲದ ಸ್ಯಾಂಡಲ್ ವುಡ್ ನ ಸೂಪರ್ ಸ್ಟಾರ್ ಖ್ಯಾತಿಯ ಮಾಲಾಶ್ರೀಗೂ ತುಂಬ ಮಹತ್ವದ್ದು.
ಇದನ್ನೂ ಓದಿ : ಶೂಟಿಂಗ್ ಮುಗಿಸಿದ ‘ಝೀಬ್ರಾ : ಶೀಘ್ರದಲ್ಲೇ ತೆರೆಗೆ ಡಾಲಿ-ಸತ್ಯದೇವ್ ಕಾಂಬಿಷೇನ್ ಸಿನಿಮಾ
ಯಾಕೆಂದರೇ ನಟಿ ಮಾಲಾಶ್ರೀ ಹಾಗೂ ನಿರ್ಮಾಪಕ ರಾಮು ಪುತ್ರಿ ರಾಧನಾ ಅಲಿಯಾಸ್ ಆರಾಧನಾ ಕಾಟೇರಾ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ರಾಮುಗೆ ತಮ್ಮ ಪುತ್ರಿಯನ್ನು ಚಿತ್ರರಂಗಕ್ಕೆ ಪರಿಚಯಿಸೋ ಕನಸಿತ್ತಂತೆ. ಆದರೆ ಅವರು ಅಕಾಲಿಕವಾಗಿ ನಿಧನರಾದರು. ಹೀಗಾಗಿ ಈಗ ದರ್ಶನ್ ಸಿನಿಮಾ ಕಾಟೇರಾದ ಮೂಲಕ ಮಾಲಾಶ್ರೀ ಕನಸು ನನಸಾಗುತ್ತಿದೆ.
ಇದೆಲ್ಲ ಸಿನಿಮಾದ ವಿಶೇಷತೆಗಳಾದ್ರೇ ಸಿನಿಮಾ ರಿಲೀಸ್ ಗೂ ಮುನ್ನವೇ ದರ್ಶನ್ ಗೆ ಇಬ್ಬರು ಸ್ಪೆಶಲ್ ವಿಶ್ ದಕ್ಕಿದೆ. ಮಾತ್ರವಲ್ಲ ದರ್ಶನ್ ಗೆ ಈ ಇಬ್ಬರೂ ವಿಶ್ ಮಾಡಿರೋದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ದರ್ಶನ್ ಬದುಕಿನ ಬಹುದೊಡ್ಡ ವಿವಾದ ದರ್ಶನ್ ಪತ್ನಿ ಮೇಲೆ ಕೈಮಾಡಿದ್ದು. ಪತ್ನಿ ಮೇಲೆ ಹಲ್ಲೆ ಮಾಡಿದ್ದಕ್ಕೆ ದರ್ಶನ್ ಜೈಲು ಸೇರಿದ್ದು. ಈ ಘಟನೆಗೆ ಕಾರಣವಾಗಿದ್ದ ಪತ್ನಿ ವಿಜಯಲಕ್ಷ್ಮಿ ಈಗ ಸಂಸಾರದಲ್ಲಿ ಸರಿಗಮ ಮೂಡಿಸುವಂತೆ ಒಂದಾಗಿದ್ದಾರೆ.
ಇದನ್ನೂ ಓದಿ : ರಾಜ್ ಕಪ್- 6 ಜರ್ಸಿ ಬಿಡುಗಡೆಗೊಳಿಸಿದ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್
ಸದಾ ದರ್ಶನ್ ಜೊತೆ ಕಾಣಿಸಿಕೊಳ್ಳೋ ಮೂಲಕ ವಿಜಯಲಕ್ಷ್ಮೀ ಎಲ್ಲವೂ ಸರಿ ಇದೆ ಎಂಬುದಕ್ಕೆ ಸಾಕ್ಷಿ ಒದಗಿಸಿದ್ದಾರೆ. ಅಷ್ಟೇ ಅಲ್ಲ ಸಿನಿಮಾ ರಿಲೀಸ್ ಗೆ ಸುಂದರವಾದ ಪೋಸ್ಟ್ ಹಾಕೋ ಮೂಲಕ ಶುಭಕೋರಿದ್ದಾರೆ. ಸಿನಿಮಾದ ಎಷ್ಟೋ ದೃಶ್ಯಗಳನ್ನು ಶೂಟ್ ಮಾಡುವ ವೇಳೆ ನನ್ನ ಕಣ್ಣುಗಳಲ್ಲೇ ನೀರುತುಂಬಿ ಬಂದಿತ್ತು.

ಈ ಸಿನಿಮಾಕ್ಕಾಗಿ ನೀವು ಎಷ್ಟು ಹಾರ್ಡ್ ವರ್ಕ್ ಮಾಡಿದ್ದೀರಾ ಎಂಬುದು ನಮಗೆ ಗೊತ್ತಿದೆ. ಇದು ಅತ್ಯಂತ ಅಪರೂಪದ ನಿಮ್ಮ ಸಿನಿಮಾ ಅನ್ನೋದ್ರಲ್ಲಿ ಅನುಮಾನವೇ ಇಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ಅಗ್ರೆಸ್ಸಿವ್ ಪೋಸ್ ನಲ್ಲಿರೋ ದರ್ಶನ್ ಪೋಟೋ ಕೂಡಶೇರ್ ಮಾಡಿದ್ದಾರೆ. ಇದರ ಬೆನ್ನಲ್ಲೇ ನಟಿ ಹಾಗೂ ರೆಡ್ ಕಾರ್ಪೇಟ್ ಬೂಟಿಕ್ ನ ಮಾಲೀಕೆಯಾಗಿರೋ ನಟಿ ಪವಿತ್ರ ಗೌಡ ಕೂಡ ದರ್ಶನ್ ಗೆ ಶುಭಹಾರೈಸಿದ್ದಾರೆ.
ಇದನ್ನೂ ಓದಿ : ಚಿರು ಸರ್ಜಾ – ರಾಯನ್ ರಾಜ್ ಸರ್ಜಾ ಪ್ರೀತಿಯ ಕುಟ್ಟಿಮಾ : ನಟಿ ಮೇಘನಾ ರಾಜ್ ಕ್ರಿಸ್ಮಸ್ ಸ್ಪೆಶಲ್ ಸೆಲಿಬ್ರೇಶನ್
ದರ್ಶನ್ ಬ್ಲೂಶರ್ಟ್ ನಲ್ಲಿರೋ ಸಖತ್ ರಗಡ್ ಪೋಟೋವೊಂದನ್ನು ಶೇರ್ ಮಾಡಿರೋ ಪವಿತ್ರ All The Best ಎಂದಿದ್ದಾರೆ. ಪವಿತ್ರ ಹಾಕಿರೋ ಪೋಟೋ ಮತ್ತು ಪೋಸ್ಟರ್ ಸಖತ್ ಸದ್ದು ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತ್ತೀಚೆಗಷ್ಟೇ ನಟಿ ಪವಿತ್ರ ಗೌಡ ಪುತ್ರಿ ಬರ್ತಡೇ ಪಾರ್ಟಿಯಲ್ಲಿ ದರ್ಶನ್ ಪಾಲ್ಗೊಂಡು ಸಖತ್ ಡ್ಯಾನ್ಸ್ ಮಾಡಿದ್ದರು. ಈ ಹಿಂದೇ ಇದೇ ಪವಿತ್ರ ಗೌಡ ಜೊತೆಗೆ ದರ್ಶನಗೆ ಇದೆ ಎನ್ನಲಾದ ಬಾಂಧವ್ಯ ಸಾಕಷ್ಟು ವಿವಾದ ಹಾಗೂ ಚರ್ಚೆಗೆ ಗ್ರಾಸವಾಗಿತ್ತು.
Darshan Thoogudeepa New Movies Katera Special Wish to wife Vijaya Lakshmi and Pavithra Gowda