monkey pox cases : ಏನಿದು ಮಂಕಿ ಪಾಕ್ಸ್​ ಸೋಂಕು, ಲಕ್ಷಣಗಳೇನು, ಮುಂಜಾಗ್ರತಾ ಕ್ರಮ ಹೇಗಿರಬೇಕು : ಇಲ್ಲಿದೆ ಮಾಹಿತಿ

monkey pox cases : ಕೋವಿಡ್​​ 19 ಆರಂಭಗೊಂಡು 2 ವರ್ಷಗಳೇ ಕಳೆದರೂ ಸಹ ಈಗಲೂ ಈ ಮಾರಕ ಸೋಂಕಿನಿಂದ ಸಾವನ್ನಪ್ಪುವವರಿದ್ದಾರೆ. ಸರ್ಕಾರಗಳು ಕೋವಿಡ್​ ಸೋಂಕು ತಡೆಗಟ್ಟಲು ಲಸಿಕೆಗಳನ್ನು ಪೂರೈಕೆ ಮಾಡುತ್ತಲೇ ಇದೆ ಆದರೂ ಸಹ ಇಂದಿಗೂ ಕೋವಿಡ್​ ಮುಕ್ತ ವಿಶ್ವವನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಪ್ಲೇಗ್​, ಕಾಲರಾದಂತಹ ಮಹಾಮಾರಿ ಜಗತ್ತಿಗೆ ಅಪ್ಪಳಿಸಿತ್ತಾದರೂ ಸಹ ಈಗಿನ ಜನತೆಗೆ ಕೋವಿಡ್ ಮಹಾಮಾರಿ ಬಳಿಕವೇ ಸಾಂಕ್ರಾಮಿಕ ಕಾಯಿಲೆಗಳ ಭೀಕರತೆ ಸ್ಪಷ್ಟವಾಗಿ ಅರ್ಥವಾಗಿದೆ. ಜಗತ್ತಿಗೆ ಇನ್ನೂ ಕೋವಿಡ್​ನ ಭಯ ಇರುವಾಗಲೇ ಇದೀಗ ಮಂಕಿ ಪಾಕ್ಸ್​ ಎಂಬ ಕಾಯಿಲೆಯು ಮುನ್ನೆಲೆಗೆ ಬಂದಿದೆ. ಕೇರಳದಲ್ಲಿ ಈಗಾಗಲೇ ಮಂಕಿಪಾಕ್ಸ್​ ಸೋಂಕು ಪತ್ತೆಯಾಗಿದೆ.


ಏನಿದು ಮಂಕಿಪಾಕ್ಸ್​ ..?

ಹಿಂದೆ ನಿಫಾ ಎಂಬ ಕಾಯಿಲೆಯೊಂದು ಬಂದಿತ್ತು. ಬಾವಲಿಗಳಿಂದ ಈ ಕಾಯಿಲೆ ಮಾನವರಿಗೆ ಹಬ್ಬುತ್ತಿತ್ತು. ಅದೇ ರೀತಿ ಮಂಕಿಪಾಕ್ಸ್​ ಕೂಡ ಪ್ರಾಣಿಗಳಿಂದಲೇ ಮನುಷ್ಯರಿಗೆ ಬರುವ ಕಾಯಿಲೆಯಾಗಿದೆ. ಪಾಕ್ಸ್​ ವೈರಸ್​ಗಳಿಂದ ಹೇಗೆ ಮನುಷ್ನಿಗೆ ಸ್ಮಾಲ್​ ಪಾಕ್ಸ್​ಗಳು ಬರುತ್ತವೆಯೋ ಇದು ಕೂಡ ಅದೇ ರೀತಿಯ ಕಾಯಿಲೆಯಾಗಿದೆ ಇಲಿಗಳಿಂದ ಈ ಕಾಯಿಲೆಯು ಮನುಷ್ಯರಿಗೆ ಬರುತ್ತದೆ. ಮನುಷ್ಯರಲ್ಲಿ ಕಾಣಿಸಿಕೊಳ್ಳುವ ಮಂಕಿಪಾಕ್ಸ್​ ಸೋಂಕು ಸಾಂಕ್ರಾಮಿಕ ರೋಗವಾಗಿದೆ. ಆಫ್ರಿಕಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಈ ಸೋಂಕು ಇದೀಗ ಕೇರಳದವರೆಗೂ ಪಸರಿಸಿದೆ.


ಹೇಗೆ ಹರಡುತ್ತದೆ..?
ಮಂಕಿ ಪಾಕ್ಸ್​​ ಸೋಂಕಿತ ಪ್ರಾಣಿಯ ಸಂಪರ್ಕದಿಂದ ಈ ಕಾಯಿಲೆ ಉಂಟಾಗುತ್ತದೆ. ಮಂಕಿಪಾಕ್ಸ್​ ಸೋಂಕಿತ ಪ್ರಾಣಿಯ ಮೇಲಾದ ಗಾಯದ ನೀರು ಮನುಷ್ಯನ ಚರ್ಮಕ್ಕೆ ಸೋಕಿದರೆ ಅಥವಾ ಸೋಂಕಿತ ಪ್ರಾಣಿಯು ಮನುಷ್ಯನನ್ನು ಕಚ್ಚುವ ಅಥವಾ ಪರಚಿದರೆ ಈ ಸೋಂಕು ಮನುಷ್ಯರಿಗೂ ಹರಡುತ್ತದೆ. ಇದಾದ ಬಳಿಕ ಮನುಷ್ಯನಿಂದ ಮನುಷ್ಯನಿಗೆ ಈ ಕಾಯಿಲೆಯು ಹರಡುತ್ತಾ ಹೋಗುತ್ತದೆ.


ಏನಿದರ ಲಕ್ಷಣ..?
ಒಬ್ಬ ವ್ಯಕ್ತಿಗೆ ಮಂಕಿ ಪಾಕ್ಸ್​ ಸೋಂಕು ತಗುಲಿದಲ್ಲಿ ಲಕ್ಷಣಗಳು ಗೋಚರವಾಗಲು 7 ರಿಂದ 21 ದಿನಗಳನ್ನು ತೆಗೆದುಕೊಳ್ಳುತ್ತದೆ. ಜ್ವರ, ಮೈ ಕೈ ನೋವು, ತಲೆ ನೋವು, ಬೆನ್ನು ನೋವು, ಮೈ ನಡುಗುವುದು, ವಿಪರೀತ ಸುಸ್ತು ಹಾಗೂ ದುಗ್ಧರಸ ಗ್ರಂಥಿಗಳು ಊದಿಕೊಳ್ಳುತ್ತವೆ. ಇದಾದ ಬಳಿಕ ಮೊದಲನೆಯದಾಗಿ ಮುಖಕ್ಕೆ ಹಾಗೂ ಕ್ರಮೇಣ ಮೈ ತುಂಬ ದದ್ದುಗಳು ಉಂಟಾಗುತ್ತದೆ.
ಈ ದದ್ದುಗಳು ಮೊದಲ ಪಾರದರ್ಶಕವಾಗಿರುತ್ತದೆ. ಕ್ರಮಣ ಇವುಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಕೆಲವೊಮ್ಮೆ ಕೀವು ಕೂಡ ಇರುತ್ತದೆ, ಈ ದದ್ದುಗಳು ಗಟ್ಟಿಯಾಗುತ್ತದೆ. ಬಳಿಕ ಒಣಗಿ ಬಿದ್ದು ಹೋಗುತ್ತದೆ. ಎರಡರಿಂದ ನಾಲ್ಕು ವಾರಗಳ ಕಾಲ ಈ ಸೋಂಕು ಇರುತ್ತದೆ .


ಚಿಕಿತ್ಸೆಯೇನು..?
ಇದಕ್ಕೆ ಆಂಟಿ ವೈರಲ್​ ಔಷಧಿಯನ್ನು ಬಿಟ್ಟರೆ ಯಾವುದೇ ನಿರ್ದಿಷ್ಟ ಔಷಧಿಗಳಿಲ್ಲ. ಇದಕ್ಕೆಂದುನೀಡಲಾಗುವ ವ್ಯಾಕ್ಸಿನ್​ ಸೋಂಕಿನ ವಿರುದ್ಧ 85 ಪ್ರತಿಶತ ಪರಿಣಾಮಕಾರಿಯಾಗಿದೆ. 28 ದಿನಗಳ ಅಂತರದಲ್ಲಿ 2 ಡೋಸ್​ಗಳನ್ನು ನೀಡಲಾಗುತ್ತದೆ.


ಮುನ್ನೆಚ್ಚರಿಕಾ ಕ್ರಮ :
ವಿಶ್ವ ಆರೋಗ್ಯ ಸಂಸ್ಥೆಯು ಲೈಂಗಿಕ ಕ್ರಿಯೆಯ ಮೂಲಕವೂ ಮಂಕಿಪಾಕ್ಸ್​ ಸೋಂಕು ಹರಡುತ್ತದೆ ಎಂದು ಹೇಳಿದೆ. ಹೀಗಾಗಿ ಸಾಂಕ್ರಾಮಿಕದ ಸಂದರ್ಭದಲ್ಲಿ ಯಾವೆಲ್ಲ ರೀತಿಯಲ್ಲಿ ಕಾಳಜಿ ಮಾಡುತ್ತೆವೆಯೋ ಅದೇ ರೀತಿಯ ಮುಂಜಾಗ್ರತಾ ಕ್ರಮ ಮಂಕಿಪಾಕ್ಸ್​ ವಿಚಾರದಲ್ಲಿಯೂ ಅಗತ್ಯ, ಮಾಸ್ಕ್​ ಬಳಕೆ, ಸಾಮಾಜಿಕ ಅಂತರ, ನೈರ್ಮಲ್ಯ ಕಾಪಾಡಿಕೊಳ್ಳುವುದು ಇವೆಲ್ಲದರ ಜೊತೆಯಲ್ಲಿ ಪ್ರಾಣಿಗಳ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯವಾಗಿದೆ.

ಇದನ್ನು ಓದಿ : Droupadi Murmu takes oath : ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣ ವಚನ

ಇದನ್ನೂ ಓದಿ : presidents takes oath : ಜುಲೈ 25ರಂದೇ ದೇಶದ ರಾಷ್ಟ್ರಪತಿಗಳು ಪ್ರಮಾಣ ವಚನ ಸ್ವೀಕರಿಸುವುದೇಕೆ : ಇಲ್ಲಿದೆ ಕಾರಣ

monkey pox cases alarming day by day know about the symptoms and treatment first

Comments are closed.