Dhaakad box office collection:ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯದ ಆ್ಯಕ್ಷನ್ ಸಿನಿಮಾ ಧಾಕಡ್ ಭಾನುವಾರದ ವೇಳೆಗೆ ದೇಶಾದ್ಯಂತ ಕೇವಲ 4420 ರೂಪಾಯಿಗಳನ್ನು ಸಂಗ್ರಹಿಸುವ ಹಾಗೂ ಕೇವಲ 20 ಟಿಕೆಟ್ಗಳನ್ನು ಮಾರಾಟ ಮಾಡುವಲ್ಲಿ ಮಾತ್ರ ಯಶಸ್ವಿಯಾಗಿದೆ. ಬಾಲಿವುಡ್ ಹಂಗಾಮಾ ನೀಡಿರುವ ಮಾಹಿತಿಯ ಪ್ರಕಾರ ಧಾಕಡ್ ಸಿನಿಮಾ ಬಾಕ್ಸಾಫೀಸಿನಲ್ಲಿ ಸಂಪೂರ್ಣ ನೆಲಕಚ್ಚಿದ್ದು ಈವರೆಗೆ ಕೇವಲ 3 ಕೋಟಿ ರೂಪಾಯಿಗಳನ್ನು ಗಳಿಸುವಲ್ಲಿ ಮಾತ್ರ ಶಕ್ತವಾಗಿದೆ ಎಂದು ತಿಳಿದುಬಂದಿದೆ.
ಧಾಕಡ್ ಸಿನಿಮಾವನ್ನು ನಿರ್ಮಾಣ ಮಾಡಲು ಚಿತ್ರತಂಡ 80 ರಿಂದ 90 ಕೋಟಿ ರೂಪಾಯಿಗಳವರೆಗೆ ಖರ್ಚು ಮಾಡಿದೆ. ಇದು ಮಾತ್ರವಲ್ಲದೇ ಸಿನಿಮಾ ನಿರ್ಮಾಪಕರು ರಿಲೀಸ್ಗೂ ಮುನ್ನ ಒಪ್ಪಂದಗಳನ್ನು ಭೇದಿಸದ ಕಾರಣ ಸ್ಟ್ರೀಮಿಂಗ್ ವಿತರಣೆಯನ್ನು ಪಡೆದುಕೊಳ್ಳಲು ಹೆಣಗಾಡುತ್ತಿದ್ದಾರೆ.
ರಜನೀಶ್ ಘಾಯ್ ನಿರ್ದೇಶಿಸಿದ, ಧಾಕಡ್‌ನಲ್ಲಿ ಅರ್ಜುನ್ ರಾಂಪಾಲ್, ದಿವ್ಯಾ ದತ್ತಾ ಮತ್ತು ಶಾಶ್ವತ ಚಟರ್ಜಿ ಸಹ ನಟಿಸಿದ್ದಾರೆ. ಧಾಕಡ್ ಸಿನಿಮಾಗೆ ಚಿತ್ರ ವಿಮರ್ಷಕರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಆದರೆ ಸಿನಿಮಾ ವೀಕ್ಷಕರು ಮಾತ್ರ ಧಾಕಡ್ಗೆ ಸಿನಿಮಾ ಥಿಯೇಟರ್ಗಳಿಂದ ಗೇಟ್ಪಾಸ್ ನೀಡಿದ್ದಾರೆ.
ಧಾಕಡ್ ಸಿನಿಮಾದ ಜೊತೆಯಲ್ಲಿ ತೆರೆಕಂಡ ಬಾಲಿವುಡ್ ಮತ್ತೊಂದು ಹಾರರ್ – ಕಾಮಿಡಿ ಸಿನಿಮಾ ಭೂಲ್ ಭುಲೈಯ್ಯಾ 2 ದೊಡ್ಡ ಮಟ್ಟಿಗೆ ಸೌಂಡ್ ಮಾಡ್ತಿದೆ. ಈ ಸಿನಿಮಾ 100 ಕೋಟಿ ರೂಪಾಯಿಗಳನ್ನು ಕಲೆಕ್ಷನ್ ಮಾಡುವುದರಲ್ಲಿದೆ. 2007ರಲ್ಲಿ ತೆರೆ ಕಂಡ ಭೂಲ್ ಭುಲೈಯ್ಯಾ ಸಿನಿಮಾದ ಮುಂದುವರಿದ ಭಾಗವಾಗಿರುವ ಈ ಫಿಲಂಗೆ ಅನೀಸ್ ಬಾಜ್ಮೀ ನಿರ್ದೇಶನ ಮಾಡಿದ್ದು ಕಾರ್ತಿಕ್ ಆರ್ಯನ್, ಟಬು ಹಾಗೂ ಕಿಯಾರಾ ಅಡ್ವಾಣಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಇದನ್ನು ಓದಿ : Aryan Khan : ಪದವಿ ಓದುವಾಗಲೇ ಗಾಂಜಾ ಸೇವಿಸುತ್ತಿದ್ದೇ : ಆರ್ಯನ್ ಖಾನ್ ತಪ್ಪೊಪ್ಪಿಗೆ
ಇದನ್ನೂ ಓದಿ : BCCI : ಐಪಿಎಲ್ 2022ರ ಫೈನಲ್‌ಗೆ ಮುನ್ನ ಮಹತ್ವದ ಘೋಷಣೆ ಮಾಡಿದ ಬಿಸಿಸಿಐ : ಆಟಗಾರರು ಪುಲ್ ಖಷ್
Dhaakad box office collection: Kangana Ranaut’s film sells 20 tickets and collects Rs 4420 on day 8