raja – rani : ಮತ್ತೆ ಶುರುವಾಗ್ತಿದೆ ರಾಜಾ-ರಾಣಿ ರಿಯಾಲಿಟಿ ಶೋ: ಸ್ಪರ್ಧಿಗಳು ಯಾರು, ಈ ಸೀಸನ್​ನ ವಿಶೇಷತೆಯೇನು ಇಲ್ಲಿದೆ ಮಾಹಿತಿ

raja – rani : ಎಂಟರ್​ಟೈನ್​ಮೆಂಟ್​ ಚಾನೆಲ್​ಗಳಲ್ಲಿ ಪ್ರಸಾರವಾಗುವ ಧಾರವಾಹಿಗಳು ಅಭಿಮಾನಿಗಳ ಮನಗೆಲ್ಲುವಲ್ಲಿ ಎಷ್ಟು ಯಶಸ್ವಿಯಾಗುತ್ತದೆಯೋ ಅದೇ ರೀತಿ ರಿಯಾಲಿಟಿ ಶೋಗಳಿಗೂ ಸಹ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಇದರಲ್ಲಿ ಕಲರ್ಸ್​ ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಬಳಿಕ ಸಾಲು ಸಾಲು ರಿಯಾಲಿಟಿ ಶೋಗಳನ್ನು ಹೊತ್ತುಕೊಂಡು ಪ್ರೇಕ್ಷಕರ ಮುಂದೆ ಬರುತ್ತಲೇ ಇದೆ. ಬಿಗ್​​ ಬಾಸ್​ ಸೀಸನ್​ 9ಕ್ಕಾಗಿ ಕಾಯುತ್ತಿರುವ ಪ್ರೇಕ್ಷಕರಿಗೆ ಕಲರ್ಸ್ ಕನ್ನಡ ಅದಕ್ಕೂ ಮುನ್ನ ಇನ್ನಷ್ಟು ರಿಯಾಲಿಟಿ ಶೋಗಳ ಮೂಲಕ ರಂಜಿಸುವ ಕೆಲಸವನ್ನು ಮಾಡುತ್ತಿದೆ.


ಕಲರ್ಸ್​ ಕನ್ನಡ ವಾಹಿನಿಯಲ್ಲಿ ಕೆಲವು ತಿಂಗಳ ಹಿಂದೆಯಷ್ಟೇ ರಾಜಾ ರಾಣಿ ಎಂಬ ಪ್ರೋಗ್ರಾಂ ಟೆಲಿಕಾಸ್ಟ್​ ಆಗುತ್ತಿತ್ತು. ಇದೀಗ ಇದೇ ಕಾರ್ಯಕ್ರಮದ ಸೀಕ್ವೆಲ್​ ಅಂದರೆ ರಾಜಾ ರಾಣಿ 2 ರಿಯಾಲಿಟಿ ಶೋ ಆರಂಭಗೊಳ್ಳಲಿದೆ. ಜೂನ್​ 11 ರಿಂದ ಶನಿವಾರ ಹಾಗೂ ಭಾನುವಾರ ಸಂಜೆ 7.30ರಿಂದ ಈ ಕಾರ್ಯಕ್ರಮ ಆರಂಭಗೊಳ್ಳಲಿದೆ. ರಾಜಾ ರಾಣಿ ಸೀಸನ್​ 1ರಲ್ಲಿ ಕಿರುತೆರೆಯ ತಾರೆಯರು ತಮ್ಮ ನಿಜ ಜೀವನದ ಸಂಗಾತಿಯ ಜೊತೆಯಲ್ಲಿ ಈ ಶೋನಲ್ಲಿ ಕಾಣಿಸಿಕೊಂಡಿದ್ದರು.


ನೇಹಾ ಗೌಡ – ಚಂದನ್​ , ಇಶಿತಾ – ಮುರುಗ, ಚಂದನ್​ ಶೆಟ್ಟಿ – ನಿವೇದಿತಾ ಗೌಡ. ಶ್ರೀಕಾಂತ್​ – ಹರಿಣಿ ಸೇರಿದಂತೆ ಸಾಕಷ್ಟು ಜೋಡಿಗಳು ರಾಜಾ ರಾಣಿ ಸೀಸನ್​ 1ರಲ್ಲಿ ಕಾಣಿಸಿಕೊಂಡಿದ್ದರು. ಈ ಬಾರಿಯ ಸೀಸನ್​ನಲ್ಲಿಯೂ ಸೆಲೆಬ್ರಿಟಿಗಳೇ ಇರುತ್ತಾರಾ..? ಅಥವಾ ಈ ಬಾರಿ ಸಾಮಾನ್ಯ ಜನತೆಗೆ ಅವಕಾಶ ನೀಡಲಾಗುತ್ತದೆಯಾ ಎಂಬ ಗುಟ್ಟನ್ನು ಕಲರ್ಸ್ ಕನ್ನಡ ವಾಹಿನಿ ಇನ್ನೂ ಬಿಟ್ಟುಕೊಟ್ಟಿಲ್ಲ.


ಕಳೆದ ಬಾರಿಯಂತೆ ಈ ಬಾರಿ ಕೂಡ ಈ ಸೀಸನ್​ನ ನಿರ್ಣಾಯಕರ ಜವಾಬ್ದಾರಿಯನ್ನು ಸೃಜನ್​ ಲೋಕೇಶ್​ ಹಾಗೂ ತಾರಾ ಅನುರಾಧ ವಹಿಸಲಿದ್ದಾರೆ. ರಾಜಾ – ರಾಣಿ ಸೀಸನ್​2 ಅಧಿಕೃತ ಪ್ರೋಮೋ ಈಗಾಗಲೇ ವೈರಲ್​ ಆಗಿದೆ. ಕಳೆದ ಬಾರಿ ಅನುಪಮಾ ಗೌಡ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಈ ಬಾರಿ ರಾಜಾ ರಾಣಿ ಶೋವನ್ನೂ ಅನುಪಮಾ ಗೌಡ ನಡೆಸಿಕೊಡ್ತಾರೆ ಎಂದು ಹೇಳಲಾಗ್ತಿದೆ .

ಇದನ್ನು ಓದಿ : BCCI : ಐಪಿಎಲ್ 2022ರ ಫೈನಲ್‌ಗೆ ಮುನ್ನ ಮಹತ್ವದ ಘೋಷಣೆ ಮಾಡಿದ ಬಿಸಿಸಿಐ : ಆಟಗಾರರು ಪುಲ್‌ ಖಷ್

ಇದನ್ನೂ ಓದಿ : Danger Panu Puri : ಜಾತ್ರೆಯಲ್ಲಿ ಪಾನಿಪೂರಿ ತಿಂದು 97 ಮಕ್ಕಳು ಅಸ್ವಸ್ಥ

colors kannada again starting raja – rani reality show

Comments are closed.