ದೊಡ್ಡ ದೊಡ್ಡ ನೋವುಗಳಿಂದ ಕುಸಿದು ಹೋಗಿದ್ದ ಸರ್ಜಾ ಕುಟುಂಬದಲ್ಲಿ ಈ ಪುಟ್ಟ ಪುಟ್ಟ ಖುಷಿಗಳು ಕಾಲೂರತೊಡಗಿದೆ. ಧ್ರುವ ಸರ್ಜಾ (Dhruva Sarja) ಮತ್ತು ಮೇಘನಾ ರಾಜ್ ಸರ್ಜಾ (Meghana Raj Sarja) ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಗೆದ್ದಿದ್ದು ಒಂದೆಡೆಯಾದರೇ ಮನೆಯಲ್ಲಿ ಪುಟ್ಟ ಪುಟ್ಟ ಮಕ್ಕಳ ಕಲರವ ಇನ್ನೊಂದೆಡೆ. ಸದ್ಯ ಧ್ರುವ ಸರ್ಜಾ ಮೊದಲ ಮಗಳ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿದೆ.
ದೊಡ್ಡಮ್ಮ ಹಾಗೂ ನಟಿ ಮೇಘನಾ ಮಗನ ಜೊತೆ ಮನೆಮಗಳಿಗೆ ಪ್ರೀತಿಯಿಂದ ಆಶೀರ್ವಾದ ಮಾಡಿದ್ದಾರೆ. ಮೇಘನಾ ಸರ್ಜಾ ಧ್ರುವ ಸರ್ಜಾ ಮೊದಲು ಮಗಳು ಕಣ್ಮಣಿ ಜೊತೆ ಮುದ್ದಾದ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಟಿ ಮೇಘನಾ ರಾಜ್ ಸರ್ಜಾ ತಮ್ಮ ಮೈದುನ ಧ್ರುವ ಸರ್ಜಾ ಮಗಳು ಕಣ್ಮಣಿಯನ್ನು ತಮ್ಮ ಮಡಿಲಲ್ಲಿ ಕೂರಿಸಿಕೊಂಡಿದ್ದಾರೆ.

ಈ ಮಗುವಿನೊಂದಿಗೆ ಅಂದ್ರೇ ತಂಗಿಯೊಂದಿಗೆ ಮೇಘನಾ ಹಾಗೂ ಚಿರು ಪುತ್ರ ರಾಯನ್ ರಾಜ್ ಸರ್ಜಾ (Rayan Raj Sarja) ಪ್ರೀತಿಯಿಂದ ಆಟವಾಡಿದ್ದಾನೆ. ಪುಟ್ಟ ಬೊಂಬೆ ಯಂತಿರೋ ಧ್ರುವ ಸರ್ಜಾ ಮಗುವಿನೊಂದಿಗೆ ರಾಯನ್ ಸರ್ಜಾ ತನ್ನ ಮುದ್ದು ಮುದ್ದು ಭಾಷೆಯಲ್ಲಿ ಸಂವಾದ ನಡೆಸಿದ್ದು, ಆಕೆಯ ಪುಟ್ಟ ಕೈಗಳನ್ನು ಹಿಡಿದು ತಲೆಸವರಿ ಮುತ್ತಿಕ್ಕಿ ಸಹೋದರ ಪ್ರೀತಿ ತೋರಿದ್ದಾನೆ.
ಇದನ್ನೂ ಓದಿ : ಸುಪ್ರಜಾ ರಾಮ ಸಿನಿಮಾ ನಟ ನಾಗಭೂಷಣ್ ಅವಾಂತರ: ಕಾರು ಅಪಘಾತಕ್ಕೆ ಮಹಿಳೆ ಸಾವು
ನೀನು ಪಾಪುಗೆ ಏನಂತ ಕರೀತಿಯಾ ಅಂದಿದ್ದಕ್ಕೆ ತಂಗಮ್ಮಾ, ತಂಗ್ಯವ್ವಾ ಎಂದು ಹೇಳಿದ್ದಾನೆ.ಬಳಿಕ ಅಮ್ಮನ ಜೊತೆ ತಂಗಿಯನ್ನು ಮನೆಗೆ ಕರೆದುಕೊಂಡು ಹೋಗೋಣ ಅಂತ ಒತ್ತಾಯಿಸಿದ್ದಾನೆ.ಈ ವೇಳೆ ಅಲ್ಲಿಯೇ ಇದ್ದ ಧ್ರುವ್ ಸರ್ಜಾ ತಮ್ಮ ಅಣ್ಣನ ಮಗ ರಾಯನ್ ರಾಜ್ ಸರ್ಜಾರನ್ನು ಎತ್ತಿ ಮುದ್ದಾಡಿದ್ದಾನೆ.

ಈ ವಿಡಿಯೋವನ್ನು ನಟಿ ಮೇಘನಾ ಸರ್ಜಾ ಸೋಷಿಯಲ್ ಮೀಡಿಯಾ ದಲ್ಲಿ ಶೇರ್ ಮಾಡಿದ್ದು, Happy Birthday Kanmani From Doddappa, Doddamma, Rayan Anna Loves U ಎಂದು ಪೋಸ್ಟ್ ಹಾಕಿದ್ದಾರೆ. ಧ್ರುವ ಸರ್ಜಾ ದಂಪತಿಗೆ ಕಳೆದ ಅಕ್ಟೋಬರ್ 2 ರಂದು ಮುದ್ದಾದ ಹೆಣ್ಣುಮಗು ಜನಿಸಿತ್ತು. ಇಂದು ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿಯ ಮೊದಲ ಮಗಳು ಕಣ್ಮಣಿಗೆ ಒಂದನೇ ವರ್ಷದ ಹುಟ್ಟುಹಬ್ಬ ಸಂಭ್ರಮ.
https://www.instagram.com/p/Cx43ny9PJdq/
ಇದನ್ನೂ ಓದಿ : ಅದ್ದೂರಿ ಹುಟ್ಟುಹಬ್ಬ ಬೇಡ: ನೀವಿದ್ದಲ್ಲೇ ಹಾರೈಸಿ: ಅಭಿಮಾನಿಗಳಿಗೆ ಅಭಿಷೇಕ್ ಅಂಬರೀಶ್ ಮನವಿ
ಈ ಮಧ್ಯೆ ಸಪ್ಟೆಂಬರ್ 18 ಗೌರಿ ಗಣೇಶ್ ಹಬ್ಬದಂದು ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ. ಅದರಲ್ಲೂ ಧ್ರುವ ಸರ್ಜಾ ಕುಟುಂಬಕ್ಕೆ ಅಕ್ಟೋಬರ್ ತಿಂಗಳು ತುಂಬಾ ಸ್ಪೆಶಲ್ ಮಂತ್. ಯಾಕೆಂದರೇ ಚಿರಂಜೀವಿ ಸರ್ಜಾ ಜನಿಸಿದ್ದು ಅಕ್ಟೋಬರ್ 17 ರಂದು. ಚಿರು ಹಾಗೂ ಮೇಘನಾ ದಂಪತಿಯ ಪುತ್ರ ರಾಯನ್ ರಾಜ್ ಸರ್ಜಾ ಜನಿಸಿದ್ದು ಅಕ್ಟೋಬರ್ 22 ರಂದು.

ಧ್ರುವ ಸರ್ಜಾ ಮೊದಲ ಮಗಳು ಜನಿಸಿದ್ದು ಅಕ್ಟೋಬರ್ 2 ರಂದು. ಹೀಗಾಗಿ ಸರ್ಜಾ ಕುಟುಂಬಕ್ಕೂ ಅಕ್ಟೋಬರ್ ತಿಂಗಳಿಗೂ ವಿಶೇಷ ನಂಟಿದೆ ಎಂದೇ ಹೇಳಬಹುದು. ಅದರಲ್ಲೂ ಈ ಭಾರಿ ಅಕ್ಟೋಬರ್ ನಲ್ಲಿ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರ ರಾಜಾ ಮಾರ್ತಾಂಡ ಕೂಡ ಕಾಕತಾಳಿಯ ಎಂಬಂತೆ ಅಕ್ಟೋಬರ್ 6 ರಂದೇ ತೆರೆಗೆ ಬರ್ತಿದೆ.
ಇದನ್ನೂ ಓದಿ : ಮಗನ ಜೊತೆ ಪ್ರಪಂಚ ಸುತ್ತುವಾಸೆ: ರಾಯನ್ ರಾಜ್ ಸರ್ಜಾ ಬಗ್ಗೆ ನಟಿ ಮೇಘನಾ ರಾಜ್ ಮಾತು
ಚಿರು ನಿಧನದ ವೇಳೆ ಈ ಸಿನಿಮಾ ಶೂಟಿಂಗ್ ಮುಗಿಸಿ ಡಬ್ಬಿಂಗ ಹಂತದಲ್ಲಿತ್ತು. ಈ ವೇಳೆ ಚಿರು ಹಠಾತ್ ನಿಧನರಾಗಿದ್ದರಿಂದ ಚಿತ್ರದ ಕೆಲಸ ಸ್ಥಗಿತ ಗೊಂಡಿತ್ತು. ಆದರೆ ಧ್ರುವ ಸರ್ಜಾ ಮುತುವರ್ಜಿ ವಹಿಸಿ ಚಿರು ಸರ್ಜಾ ಸಿನಿಮಾದ ಚಿರು ಕ್ಯಾರೆಕ್ಟರ್ ನ ಸಂಪೂರ್ಣ ಡಬ್ಬಿಂಗ್ ಮಾಡಿ ಕೊಟ್ಟಿದ್ದರು.

ಇದರಿಂದ ಈಗ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಅದರೊಂದಿಗೆ ಸರ್ಜಾ ಕುಟುಂಬದಲ್ಲಿ ಸಾಲು ಸಾಲು ಸೆಲೆಬ್ರೇಶನ್ ಗೂ ಚಾಲನೆ ಸಿಕ್ಕಂತಾಗಿದೆ.
Dhruva Sarja Daughter Birthday Rayan Raj Sarja Wish Meghana Raj Share Video