ಮಗನ ಜೊತೆ ಪ್ರಪಂಚ ಸುತ್ತುವಾಸೆ: ರಾಯನ್ ರಾಜ್‌ ಸರ್ಜಾ ಬಗ್ಗೆ ನಟಿ ಮೇಘನಾ ರಾಜ್‌ ಮಾತು

ತತ್ಸಮ‌ ತದ್ಭವ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡಿರೋ ನಟಿ ಮೇಘನಾ ರಾಜ್ ಸರ್ಜಾ (Meghana Raj) ಮತ್ತೊಂದು ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ. ಮೇಘನಾ ಮಗ ರಾಯನ್‌ ರಾಜ್‌ ಸರ್ಜಾ (Rayan Raj Sarja) ಬಗ್ಗೆ ಕಂಡಿರೋ ಕನಸುಗಳನ್ನು ಹಂಚಿಕೊಂಡಿದ್ದಾರೆ.

ತತ್ಸಮ‌ ತದ್ಭವ (Tatsama Tadbhava) ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡಿರೋ ನಟಿ ಮೇಘನಾ ರಾಜ್ ಸರ್ಜಾ (Meghana Raj) ಮತ್ತೊಂದು ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ. ಇದರ ಜೊತೆ ಕಿರುತೆರೆಯಲ್ಲೂ ಸಕ್ರಿಯರಾಗಿದ್ದಾರೆ. ಆದರೆ ಇದೆಲ್ಲದರ ಮಧ್ಯೆಯೂ ಮೇಘನಾ ಸದಾ‌‌ಮಗನಿಗಾಗಿ ಕನಸುಗಳನ್ನು ಕಟ್ಟುತ್ತಲೇ ಇರುತ್ತಾರೆ. ಸಿನಿಮಾ ಸಕ್ಸಸ್‌ಮಧ್ಯೆ ಮಾತನಾಡಿರೋ ಮೇಘನಾ ಮಗ ರಾಯನ್‌ ರಾಜ್‌ ಸರ್ಜಾ (Rayan Raj Sarja) ಬಗ್ಗೆ ಕಂಡಿರೋ ಕನಸುಗಳನ್ನು ಹಂಚಿಕೊಂಡಿದ್ದಾರೆ.

World tour with Rayan Raj Sarja Actress Meghana Raj Sarja Talks about Dream
Image credit : Meghana Raj Instagram

ಮೇಘನಾ ರಾಜ್ ಸರ್ಜಾ ಕೇವಲ ಯಶಸ್ವಿ ನಟಿ ಮಾತ್ರವಲ್ಲ ಸಿಂಗಲ್ ಪೆರೇಂಟ್. ಅಪ್ಪ ಮತ್ತು ಅಮ್ಮ ಎರಡೂ ಆಗಿ ಮಗನನ್ನು ಬೆಳೆಸ್ತಿರೋ ಮೇಘನಾಗೆ ಮಗನೇ ಪ್ರಪಂಚ. ಸದ್ಯ ಮೂರು ವರ್ಷದ ರಾಯನ್ ರಾಜ್ ಸರ್ಜಾ ಶಾಲೆಗೆ ಪಾದಾರ್ಪಣೆ‌ ಮಾಡಿದ್ದಾರೆ. ಹೀಗಾಗಿ ಒಂದಿಷ್ಟು ಸಮಯವನ್ನು ತಮಗಾಗಿ ಮೀಸಲಿಟ್ಟಿರೋ ಮೇಘನಾ ಮಗನ ಬಗ್ಗೆ ತಾವು ಕಟ್ಟಿರೋ ಕನಸುಗಳನ್ನು ಶೇರ್ ಮಾಡಿಕೊಂಡಿದ್ದಾರೆ.

World tour with Rayan Raj Sarja Actress Meghana Raj Sarja Talks about Dream
Image credit : Meghana Raj Instagram

ಎರಡು ವರ್ಷಗಳ ಕಾಲ ನಾನು ಒಂದು ಪೋನ್ ಕಾಲ್ ಮಾಡಲು ಸಮಯ ಹೊಂದಿಸಲು ಕಷ್ಟಪಡುತ್ತಿದ್ದೆ. ಯಾಕೆಂದರೇ ರಾಯನ್ ಗೆ ನಾನು ಸಮಯ ಕೊಡಬೇಕಿತ್ತು. ಅವನು ಮಲಗಿದಷ್ಟೇ ಹೊತ್ತಿನಲ್ಲಿ ನಾನು ಎಲ್ಲವನ್ನೂ ಮಾಡಿಕೊಳ್ಳಬೇಕಿತ್ತು. ಆದರೆ ಈಗ ರಾಯನ್ ಶಾಲೆಗೆ ಹೋಗ್ತಿರೋದರಿಂದ‌ ನನಗಾಗಿ ಒಂದಿಷ್ಟು ಸಮಯ ಸಿಗ್ತಿದೆ.

World tour with Rayan Raj Sarja Actress Meghana Raj Sarja Talks about Dream
Image credit : Meghana Raj Instagram

ಇದನ್ನೂ ಓದಿ :ರಂಗಿತರಂಗ ಹೀರೋ ಗ್ರ್ಯಾಂಡ್ ‌ರ್ರೀ ಎಂಟ್ರಿ: ದೂದ್‌ ಪೇಡಾ ದಿಗಂತ್ ಗೆ ಜೊತೆಯಾದ ನಿರೂಪ್ ಭಂಡಾರಿ

ಆ ಸಮಯದಲ್ಲಿ ಅಂದ್ರೇ ರಾಯನ್ ಶಾಲೆಗೆ ಹೋದ ಸಂದರ್ಭದಲ್ಲಿ ನಾವು ನಮ್ಮ ಎಲ್ಲ ಕೆಲಸ ಮಾಡಿಕೊಳ್ಳಲು ಆರಂಭಿಸಿದ್ದೇವೆ. ಈಗ ಬದುಕಿಗೆ ಒಂದು ರೂಟಿನ್ ಸೆಟ್ ಆಗಿದೆ ಎಂದಿದ್ದಾರೆ. ನಾನು ಪಾರ್ಲರ್, ಜಿಮ್ ಎಂದೆಲ್ಲ ಓಡಾಡುವಷ್ಟು ಫ್ರೀ ಆಗಿದ್ದೇನೆ. ಇನ್ಮೇಲೆ ಸಿನಿಮಾ ಶೂಟಿಂಗ್ ಆರಂಭವಾಗಲಿದೆ. ಆಗ ಮತ್ತೆ ಮನೆ,ಮಗು ಮತ್ತು ವರ್ಕ್ ಮಧ್ಯೆ ಬ್ಯಾಲೆನ್ಸ್ ಸರ್ಕಸ್ ಆರಂಭವಾಗುತ್ತೆ ಎಂದಿದ್ದಾರೆ.

World tour with Rayan Raj Sarja Actress Meghana Raj Sarja Talks about Dream
Image credit : Meghana Raj Instagram

ಸದ್ಯ ರಾಯನ್ ರಾಜ್ ಸರ್ಜಾ ಶಾಲೆಗೆ ಹೋಗ್ತಿದ್ದಾನೆ. ಅವನ ಬಾಲ್ಯದ ಖುಷಿಗಳನ್ನು ಎಂಜಾಯ್ ಮಾಡ್ತಿದ್ದಾನೆ. ನಾನು ಅವನೊಂದಿಗೆ ಇನ್ನಷ್ಟು ಸಮಯ ಕಳೆಯಬೇಕು ಅನ್ನೋದು ನನ್ನ ಆಸೆ. ರಾಯನ್ ಜೊತೆ ಪ್ರತಿವರ್ಷ ಎರಡೆರಡು ದೇಶದಂತೆ ವರ್ಲ್ಡ್ ಟೂರ್ ಮಾಡಬೇಕೆಂಬುದು ನನ್ನ ಕನಸು.

World tour with Rayan Raj Sarja Actress Meghana Raj Sarja Talks about Dream
Image credit : Meghana Raj Instagram

ಆ ಮೂಲಕ ಅವನ ಕುತೂಹಲವನ್ನು ಹೆಚ್ಚಿಸುವುದು, ಅವನಿಗೆ ಜಗತ್ತಿನ ಎಲ್ಲ ಸಂಸ್ಕೃತಿ,ಆಚಾರ ವಿಚಾರಗಳನ್ನು ಪರಿಚಯ ಮಾಡಿಸೋದು ನನ್ನ ಉದ್ದೇಶ. ಇದುವರೆಗೂ ತುಂಬಾ ದೂರ ಎಲ್ಲಾ ರಾಯನ್ ಜೊತೆ ಪ್ರವಾಸ ಮಾಡೋಕೆ ಸಾಧ್ಯವಾಗಿಲ್ಲ. ಆದರೆ ಇನ್ಮುಂದೇ ಪ್ರತಿವರ್ಷ ಒಂದಿಷ್ಟು ಸಮಯ ಪ್ರವಾಸ ಮಾಡಬೇಕು ಎಂಬುದು ನನ್ನ ಕನಸು ಎಂದಿದ್ದಾರೆ.

ಇದನ್ನೂ ಓದಿ : ಸ್ಯಾಂಡಲ್ ವುಡ್ ನಿಂದ ಹಾಲಿವುಡ್ ಗೆ : ಇದು ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾದ ಗುಡ್ ನ್ಯೂಸ್‌

ಮೊದಲ ಬಾರಿಗೆ ರಾಯನ್ ಆಪ್ಯಲ್ ಗೆ ಲೈನ್ ಒಳಕೆ ಕಲರಿಂಗ್ ಮಾಡಿದ್ದನ್ನು ನಾನು ಖುಷಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದೇನೆ ಯಾಕೆಂದರೇ ರಾಯನ್ ಮಾಡೋ ಚಿಕ್ಕ ಪುಟ್ಟ ಸಂಗತಿಗಳು ನನಗೆ ಸ್ಪೆಶಲ್. ಹೀಗೆ ನಾನು ಮದರವುಡ್ ಎಂಜಾಯ್ ಮಾಡ್ತಿದ್ದೇನೆ ಎಂದು ಮೇಘನಾ ಸರ್ಜಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

World tour with Rayan Raj Sarja Actress Meghana Raj Sarja Talks about Dream
Image credit : Meghana Raj Instagram

ಮೇಘನಾ ಸರ್ಜಾ ಚಿರುರನ್ನು ಪ್ರೀತಿಸಿ ಮದುವೆಯಾಗಿದ್ದು, ಐದು ತಿಂಗಳ ಗರ್ಭಿಣಿಯಾಗಿದ್ದಾಗ ಪತಿಯನ್ನು ಕಳೆದುಕೊಂಡಿದ್ದರು. ಅದಾದ ಬಳಿಕ ಎರಡು ವರ್ಷಗಳ ಕಾಲ ಸಿನಿಮಾ ಸೇರಿದಂತೆ ಸೋಷಿಯಲ್ ಲೈಫ್ ನಿಂದಲೇ ಮೇಘನಾ ಬ್ರೇಕ್ ಪಡೆದಿದ್ದರು. ಇತ್ತೀಚಿಗೆ ಮೇಘನಾ ಮತ್ತೆ ನಟನೆಗೆ ಮರಳಿದ್ದು, ಕಿರುತೆರೆ, ಸಿನಿಮಾ,ರಿಯಾಲಿಟಿ ಶೋ,ಜಾಹೀರಾತು ಸೇರಿದಂತೆ ಹಲವು ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ರಾಯನ್ ರಾಜ್ ಸರ್ಜಾ ಜೊತೆಗೂ ಟೈಂ ಸ್ಪೆಂಟ್ ಮಾಡುತ್ತಾ ಬದುಕಿನ ಖುಷಿಯನ್ನು ಮಗನಲ್ಲಿ ನೋಡ್ತಿದ್ದಾರೆ.

World tour with Rayan Raj Sarja Actress Meghana Raj Sarja Talks about Dream

Comments are closed.