ಕೊನೆಗೂ ಮಗಳ ಮುಖ ರಿವೀಲ್‌ ಮಾಡಿದ ನಟ ಧ್ರುವ ಸರ್ಜಾ : ಮಗು ಎಷ್ಟು ಕ್ಯೂಟ್‌ ಆಗಿದೆ ಗೊತ್ತಾ ?

ನಟ ಧ್ರುವ ಸರ್ಜಾ ಸ್ಯಾಂಡಲ್‌ವುಡ್‌ನ ಬಹುಬೇಡಿಕೆ ನಟರಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ನಟ ಧ್ರುವ ಸರ್ಜಾ ಕೇಡಿ, ಮಾರ್ಟಿನ್‌ ಸಿನಿಮಾ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇನ್ನ ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿ (Dhruva Sarja Daughter Photo) ನಟ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಶಂಕರ್‌ಗೆ ಹೆಣ್ಣು ಮಗು ಆಗಿತ್ತು. ಇಲ್ಲಿಯವರೆಗೂ ತಮ್ಮ ಮಗಳ ಮುಖವನ್ನು ಸಂಪೂರ್ಣವಾಗಿ ಹೊರ ಜಗತ್ತಿಗೆ ಕಾಣಿಸಿರಲಿಲ್ಲ. ಇದೀಗ ತಮ್ಮ ಮಗಳು ಹುಟ್ಟಿ ಏಳು ತಿಂಗಳ ಬಳಿಕ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮುಖ ರಿವೀಲ್‌ ಮಾಡಿದ್ದಾರೆ. ತಮ್ಮ ಮೆಚ್ಚಿನ ನಟನ ಮುದ್ದಿನ ಮಗಳ ಮೊಗವನ್ನು ಕಂಡ ಅಭಿಮಾನಿಗಳು ಸಖತ್‌ ಖುಷಿ ಆಗಿದ್ದಾರೆ.

ನಟ ಧ್ರುವ ಸರ್ಜಾ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ, “ಹಲೋ ಸ್ನೇಹಿತರು ಮತ್ತು ಕುಟುಂಬ! ನಿಮ್ಮೆಲ್ಲರಿಗೂ ಬಹಳಷ್ಟು ಪ್ರೀತಿಯನ್ನು ಕಳುಹಿಸುತ್ತಿದೆ. ನನಗೆ ಇನ್ನೂ ಹೆಸರಿಡಲಾಗಿಲ್ಲ. ನನಗೆ ಈಗ 7 ತಿಂಗಳ ವಯಸ್ಸು ಮತ್ತು ನನ್ನ ಬೆಳೆಯುತ್ತಿರುವ ಪ್ರಯಾಣವನ್ನು ಹಂಚಿಕೊಳ್ಳಲು ತಡೆಹಿಡಿಯಲು ಸಾಧ್ಯವಿಲ್ಲ. ನಾನು ಒಂದು ತಿಂಗಳ ಮಗುವಾಗಿದ್ದಾಗ ಕೆಲವು ಚಿತ್ರಗಳನ್ನು ಹಂಚಿಕೊಳ್ಳಲು ನಾನು ತುಂಬಾ ಉತ್ಸುಕನಾಗಿದ್ದೇನೆ, ಉತ್ಸುಕನಾಗಿದ್ದೇನೆ ಮತ್ತು ಸಂತೋಷಪಡುತ್ತೇನೆ. ನಾನು ಭವಿಷ್ಯದಲ್ಲಿ ನನ್ನ ಹೆಚ್ಚಿನ ಚಿತ್ರಗಳು ಮತ್ತು ನವೀಕರಣಗಳನ್ನು ಹಂಚಿಕೊಳ್ಳುತ್ತೇನೆ. ನಿಮ್ಮ ಆಶೀರ್ವಾದವನ್ನು ಕೋರಿ ಜೈ ಹನುಮಾನ್” ಎಂದು ಪೋಸ್ಟ್‌ ಮಾಡಿದ್ದಾರೆ.

ಸದ್ಯ ಮಗಳ ಲಾಲನೆ, ಪಾಲನೆಯಲ್ಲಿ ಪತ್ನಿ ಪ್ರೇರಣಾ ಶಂಕರ್‌ ಬ್ಯುಸಿಯಾಗಿದ್ದರೆ, ನಟ ಧ್ರುವ ಸರ್ಜಾ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವಲ್ಲೆ ಮಗಳ ಪೋಟೋವನ್ನು ಹಂಚಿಕೊಂಡು ಖುಷಿನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಈ ದಂಪತಿಗಳು ತಮ್ಮ ಮಗಳಿಗೆ ಹೆಸರಿಟ್ಟಿಲ್ಲ. ಅದನ್ನು ಕೂಡ ಸೋಶಿಯಲ್‌ ಮೀಡಿಯಾದಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ತಮ್ಮ ಮಗಳ ಹೆಚ್ಚಿನ ಫೋಟೋಗಳನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

ಸದ್ಯ ನಟ ಧ್ರುವ ಸರ್ಜಾ ಎರಡೆರಡು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದು, ಎರಡು ಸಿನಿಮಾ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ತೆರೆ ಕಾಣಲಿದೆ. ಅದರಲ್ಲಿ “ಕೆಡಿ” ಫ್ಯಾನ್‌ ಇಂಡಿಯಾ ಸಿನಿಮಾವಾಗಿದೆ. ಈ ಸಿನಿಮಾ 5 ಭಾಷೆಗಳಲ್ಲಿ ಏಕಕಾಲಕ್ಕೆ ಬಹಳ ದೊಡ್ಡಮಟ್ಟದಲ್ಲಿ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ರಗಡ್ ಲುಕ್‌ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಇನ್ನು ಈ ಸಿನಿಮಾದಲ್ಲಿ ನಟಿ ರೀಷ್ಮಾ ನಾಯಕಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸಿನಿತಂಡ ಅಧಿಕೃತವಾಗಿ ಹೇಳಿದೆ.

ಇದನ್ನೂ ಓದಿ : ಅಜಾಗ್ರತ ಸಿನಿಮಾಕ್ಕೆ ಬಣ್ಣಹಚ್ಚಿದ ನಟಿ ರಾಧಿಕಾ ಕುಮಾರಸ್ವಾಮಿ

ನಟ ಧ್ರುವ ಸರ್ಜಾ ಅಭಿನಯದ ಇನ್ನೊಂದು ಸಿನಿಮಾವಾದ ಮಾರ್ಟಿನ್‌ ಸಿನಿಮಾ ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿರುವ ನಾಯಕ, ಆ ಪಾತ್ರದ ಸುತ್ತ ಹೆಣೆದಿರುವ ಕಥೆ ಎನ್ನುವುದನ್ನು ಟೀಸರ್‌ನಲ್ಲಿ ಕಾಣಬಹುದಾಗಿದೆ. ಭಾರತಕ್ಕೂ ಮತ್ತು ಪಾಕಿಸ್ತಾನದಲ್ಲಿ ಬಂಧಿಯಾಗಿರುವ ನಾಯಕನಿಗೆ ಕನೆಕ್ಷನ್‌ ಏನಿರಲಿದೆ ಎನ್ನುವುದು ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ. ಒಟ್ಟಾರೆ ಹೇಳುವುದಾದರೇ ಸಿನಿಮಾ ಅದ್ಧೂರಿಯಾಗಿ ಮೂಡಿ ಬಂದಿದೆ. ಇದರಲ್ಲಿ ನಿರ್ದೇಶಕರ ಶ್ರಮ ಎದ್ದು ಕಾಣಿಸುತ್ತಿದ್ದು, ಈ ಸಿನಿಮಾ ಪ್ಯಾನ್‌ ಇಂಡಿಯ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವುದರಿಂದ ಮತ್ತೊಂದು ಕನ್ನಡ ಸಿನಿಮಾ ಭಾರತದಾದ್ಯಂತ ಹವಾ ಸೃಷ್ಟಿ ಮಾಡಲಿದೆ.

Dhruva Sarja Daughter Photo: Actor Dhruva Sarja finally revealed his daughter’s face: Do you know how cute the baby is?

Comments are closed.