Dhruva Sarja : ಪ್ರಥಮ್ ಮೂಲಕ ಹರ್ಷ ಕುಟುಂಬಕ್ಕೆ 5 ಲಕ್ಷ ನೆರವು ನೀಡಿದ ಧ್ರುವ ಸರ್ಜಾ

ಶಿವಮೊಗ್ಗದಲ್ಲಿ ಹತ್ಯೆಯಾದ ಹಿಂದೂಪರ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ರಾಜಕೀಯ ನಾಯಕರಿಂದ, ಮಠಾಧೀಶರಿಂದ ಸಾಂತ್ವನ ಹಾಗೂ ಧನ ಸಹಾಯ ದೊರೆತಿದೆ. ಮನೆ ಮಗನ ಅಗಲಿಕೆಯಿಂದ ಚೇತರಿಸಿಕೊಳ್ಳುತ್ತಿರುವ ಕುಟುಂಬಕ್ಕೆ ಪ್ರತಿನಿತ್ಯ ಹಲವು ಗಣ್ಯರು ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ. ಈ‌ ಮಧ್ಯೆ ನೊಂದ ಹರ್ಷನ ಕುಟುಂಬವನ್ನು ನಟ ಭಯಂಕರ ಪ್ರಥಮ್ ಭೇಟಿ ನೀಡಿದ್ದು ನಟ ಆಕ್ಷ್ಯನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ನೀಡಿದ ಸಹಾಯದ ಮೊತ್ತವನ್ನು ನೀಡಿ ಸಾಂತ್ವನ ಹೇಳಿದ್ದಾರೆ.

ಹರ್ಷ ಕುಟುಂಬಸ್ಥರು ಭೇಟಿ ಮಾಡಿದ ಪ್ರಥಮ್ ಅವರಿಗೆ ಸಾಂತ್ವನ ಹೇಳಿದ್ದಾರೆ. ಹರ್ಷ ಅವರ ತಾಯಿಯನ್ನು ಸಂತೈಸಿದ್ದಾರೆ. ಅಷ್ಟೇ ಅಲ್ಲ ಹರ್ಷ ನಿವಾಸದ ಸುತ್ತಮುತ್ತಲಿನ ಜನರ ಜೊತೆ ಪ್ರಥಮ್ ಲವಲವಿಕೆಯಿಂದ ಮಾತನಾಡಿದ್ದಾರೆ. ಹರ್ಷ ಕುಟುಂಬದ ಭೇಟಿ ಬಳಿಕ ಮಾತನಾಡಿದ ಪ್ರಥಮ್, ಹರ್ಷ ಕೊಲೆ ಪ್ರಕರಣ ನನಗೆ ತಿಳಿದಿದ್ದೇ ಲೇಟಾಗಿ. ಆದರೆ ಘಟನೆ ನೋಡಿ ಮನಸ್ಸಿಗೆ ತುಂಬ ಬೇಸರವಾಗಿತು. ಈ ರೀತಿಯ ಘಟನೆಗಳು ನಡೆಯಬಾರದು.ಈ ರೀತಿಯ ಘಟನೆ ನಡೆದಾಗ ನೊಂದ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸವನ್ನು ಸಮಾಜ ಮಾಡಬೇಕು.

ನನ್ನ ಭೇಟಿಯ ಹಿಂದೆ ಯಾವುದೇ ಉದ್ದೇಶಗಳಿಲ್ಲ. ನಾನು ಯಾವುದೇ ರಾಜಕೀಯ ಉದ್ದೇಶ ಅಥವಾ ಚಿತ್ರನಟನಾಗಿ ಇಲ್ಲಿಗೆ ಭೇಟಿ ನೀಡಿಲ್ಲ. ಬದಲಾಗಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ನಾನು ಇಲ್ಲಿಗೆ ಭೇಟಿ ನೀಡಿದ್ದೇನೆ ಎಂದಿದ್ದಾರೆ. ಇನ್ನೂ ಇದೇ ವೇಳೆ ಹರ್ಷ ಕುಟುಂಬಕ್ಕೆ ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾ ಮಾಡಿರೋ ಸಹಾಯವನ್ನು ಪ್ರಥಮ್ ಬಹಿರಂಗಪಡಿಸಿದ್ದಾರೆ. ಸಹೋದರನನ್ನು ಕಳೆದುಕೊಂಡ ದುಃಖದಲ್ಲೂ ಹರ್ಷ ಕುಟುಂಬದ ನೋವಿಗೆ ಸ್ಪಂದಿಸಿದ್ದಾರಂತೆ ಧ್ರುವ ಸರ್ಜಾ (Dhruva Sarja).

ಪ್ರಥಮ್ ಹರ್ಷ ನಿವಾಸಕ್ಕೆ ಭೇಟಿ ನೀಡೋ ವಿಚಾರ ತಿಳಿದ ಧ್ರುವ ಸರ್ಜಾ (Dhruva Sarja), ತಮ್ಮ ಕಡೆಯಿಂದ ಹರ್ಷ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಸಹಾಯಧನ ನೀಡಿದ್ದಾರಂತೆ. ಅಲ್ಲದೇ ಆ ಕುಟುಂಬಕ್ಕೆ ನನ್ನಿಂದ ಏನಾದ್ರೂ ಸಹಾಯವಾಗಬೇಕಿದ್ದರೇ ತಿಳಿಸುವಂತೆ ಹೇಳಿದ್ದಾರೆ ಎಂದರು. ಆದರೆ ಸ್ವತಃ ಪ್ರಥಮ್ ಕೂಡ ಹರ್ಷ ಕುಟುಂಬಕ್ಕೆ ನೆರವಾಗಿದ್ದು, ತಾವು ನೀಡಿದ ಸಹಾಯವನ್ನು ರಿವೀಲ್‌ಮಾಡೋಕೆ ಪ್ರಥಮ್ ಒಪ್ಪಿಲ್ಲ.

ಇನ್ನೊಂದೆಡೆ ನಟ ಪ್ರಥಮ್ ಈ ಮೊದಲೇ ಹತ್ಯೆಯಾಗಿದ್ದ ವಿಶ್ವನಾಥ್ ಶೆಟ್ಟಿ ನಿವಾಸಕ್ಕೂ ಭೇಟಿ ನೀಡಿದ್ದು ವಿಶ್ವನಾಥ ಶೆಟ್ಟಿ ಪುತ್ರನ ವಿದ್ಯಾಭ್ಯಾಸಕ್ಕಾಗಿ 50 ಸಾವಿರ ರೂಪಾಯಿಗಳ ಚೆಕ್ ನೀಡಿದ್ದಾರೆ. ಇಂಥ ಸಂದರ್ಭದಲ್ಲಿ ನಾವೆಲ್ಲರೂ ಕುಟುಂಬಸ್ಥರಿಗೆ ಧೈರ್ಯ ತುಂಬಬೇಕು ಎಂದು ಪ್ರಥಮ್ ಮನವಿ‌ಮಾಡಿದ್ದಾರೆ. ಇನ್ನು ಹರ್ಷ ಕೊಲೆಯಾದಾಗಿನಿಂದ ಸ್ಥಗಿತಗೊಂಡಿದ್ದ ಶಾಲಾ ಕಾಲೇಜುಗಳು ಸೋಮವಾರದಿಂದ ಪುನರಾರಂಭಗೊಳ್ಳಲಿದೆ.

ಇದನ್ನೂ ಓದಿ : ಹರ್ಷ ಹತ್ಯೆ ಪ್ರಕರಣ, ಸಹಜ ಸ್ಥಿತಿಗೆ ಮರಳಿದ ಶಿವಮೊಗ್ಗ : ನಾಳೆಯಿಂದ ಶಾಲೆ, ಕಾಲೇಜು ಆರಂಭ

ಇದನ್ನೂ ಓದಿ : ಮಗನನ್ನು ಕಳೆದುಕೊಂಡ ನೋವಲ್ಲೂ ಗಾಯಾಳುಗಳಿಗೆ ಆರ್ಥಿಕ ನೆರವು ನೀಡಿದ ಹರ್ಷ ಕುಟುಂಬ

(Dhruva Sarja who donated Rs 5 lakh to the Harsha family through Pratham)

Comments are closed.