ಸೋಮವಾರ, ಏಪ್ರಿಲ್ 28, 2025
HomeCinemaMeghanaraj Sarja : ಸೆಟ್ ನಲ್ಲಿ ಮೇಘನಾ ರಾಜ್‌ ಸರ್ಜಾ ನೋಡಿ ಭಾವುಕರಾದ ನಿರ್ದೇಶಕ :...

Meghanaraj Sarja : ಸೆಟ್ ನಲ್ಲಿ ಮೇಘನಾ ರಾಜ್‌ ಸರ್ಜಾ ನೋಡಿ ಭಾವುಕರಾದ ನಿರ್ದೇಶಕ : ಶಬ್ದ ಸಿನಿಮಾದಲ್ಲಿ ಅಂತಹದ್ದೇನಾಯ್ತು ಗೊತ್ತಾ !

- Advertisement -

ನಟಿ ಮೇಘನಾ ರಾಜ್ ( Meghanaraj Sarja ) ಸಿಗ್ನ್ದ ಸೌಂದರ್ಯ ಹಾಗೂ ಮುದ್ದಾದ ನಗುವಿನ ಒಡತಿ. ತಮ್ಮದೇ ವಿಶಿಷ್ಟ ಮ್ಯಾನರಿಸಂಗಳಿಂದ ಮಲೆಯಾಳಂ ಹಾಗೂ ಕನ್ನಡದಲ್ಲಿ ಮನೆಮಾತಾದ ಮೇಘನಾ ರಾಜ್ ಬದುಕಿನಲ್ಲಿ ಮಾತ್ರ ನರಕಸದೃಶ ದಿನಗಳನ್ನು ಎದುರಿಸಿದರು. ಆದರೆ ಎಲ್ಲವನ್ನು ಛಲದಿಂದ ಎದುರಿಸಿದ ಮೇಘನಾ ಈಗ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಮಾತ್ರವಲ್ಲ ಹಿಂದೆಂದೂ ನಟಿಸಿರದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನಟಿ ಮೇಘನಾ ರಾಜ್ ಚಿರು ಅಗಲಿಕೆಯ ನೋವಲ್ಲೂ ತಾವು ನಟನೆಗೆ ಮತ್ತೆ ಮರಳುವುದಾಗಿ ಹೇಳಿಕೊಂಡಿದ್ದರು. ಕೊಟ್ಟ ಮಾತಿನಂತೆ ಮಗನ ಪಾಲನೆಯ ಜೊತೆಯಲ್ಲೇ ಮೇಘನಾ ರಾಜ್ ಮತ್ತೆ ಬಣ್ಣ ಹಚ್ಚಿದ್ದಾರೆ. ಜಾಹೀರಾತು ರಿಯಾಲಿಟಿ ಶೋದಲ್ಲಿ ಬ್ಯುಸಿಯಾಗಿದ್ದ ಮೇಘನಾರಾಜ್ ಈಗ ತಮ್ಮ ಹಳೇ ಟೀಂ ಜೊತೆ ಸೇರಿದ್ದಾರೆ. ಹೌದು ಇರುವುದೆಲ್ಲವ ಬಿಟ್ಟು ಸಿನಿಮಾ ತಂಡದ ಜೊತೆ ಶಬ್ದ ಎಂಬ ಸಿನಿಮಾದಲ್ಲಿ ನಟಿಸಲು ಮೇಘನಾರಾಜ್ ಮತ್ತೆ ಸೆಟ್ ಗೆ ಮರಳಿದ್ದಾರೆ.

ಇನ್ನು ಈ ಸಿನಿಮಾವನ್ನು ನಿರ್ದೇಶಿಸುತ್ತಿರುವ ನಿರ್ದೇಶಕ ಕಾಂತ್ ಕನ್ನಳ್ಳಿ ಮೇಘನಾ ನಟನೆಯ ಬಗ್ಗೆ ಅಪ್ಡೇಟ್ ನೀಡಿದ್ದು, ಹಿಂದೆಂದೂ ಕಾಣಿಸಿರದ ವಿಭಿನ್ನ ಪಾತ್ರದಲ್ಲಿ ಮೇಘನಾ ನಟಿಸುತ್ತಿದ್ದಾರೆ ಎಂದಿದ್ದಾರೆ. ಕ್ರೈಂ, ಥ್ರಿಲ್ಲರ್ ಸಸ್ಪೆನ್ಸ್ ಕಥಾನಕವನ್ನು ಹೊಂದಿರುವ ಈ ಸಿನಿಮಾದಲ್ಲಿ ಮೇಘನಾ ಮೂರು ವಿಭಿನ್ನ ಶೇಡ್ ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಮಾತ್ರವಲ್ಲ ಮೂರು ಪಾತ್ರಗಳಲ್ಲೂ ವಿಭಿನ್ನ ಗೆಟಪ್ ಕೂಡ ಇರಲಿದೆಯಂತೆ.

ಈಗಾಗಲೇ ಸಿನಿಮಾದ ಒಂದು ಹಂತದ ಚಿತ್ರೀಕರಣ ಮುಗಿದಿದ್ದು, ಬೆಂಗಳೂರು ಹೊರವಲಯದಲ್ಲೇ ಸಿನಿಮಾ ಚಿತ್ರೀಕರಣ ನಡೆದಿದೆ. ಇಡಿ ಕತೆಯನ್ನು ಮೇಘನಾ ಸುತ್ತವೇ ಹೆಣೆಯ ಲಾಗಿದ್ದು ಕತೆ ಕೇಳಿಯೇ ಮೇಘನಾ ಈ ಸಿನಿಮಾ ಒಪ್ಪಿಕೊಂಡಿದ್ದಾರಂತೆ. ಇನ್ನು ತಮ್ಮ ಹಾಗೂ ಮೇಘನಾ ಒಡನಾಟವನ್ನು ನೆನಪಿಸಿಕೊಂಡಿರೋ ನಿರ್ದೇಶಕ ಕಾಂತ್ ಕನ್ನಳ್ಳಿ, ಮೊದಲ ದಿನ ಮೇಘನಾ ಶೂಟಿಂಗ್ ಬಂದಾಗ ನಾನು ತುಂಬ ಭಾವುಕನಾದೇ. ಅವರಿಗೆ ಮುಖ ಕೊಟ್ಟು ಮಾತನಾಡುವುದು ನನಗೆ ಕಷ್ಟವೆನಿಸಿತು.

ಇರುವುದೆಲ್ಲ ಬಿಟ್ಟು ಸಿನಿಮ ಸಂದರ್ಭದಲ್ಲಿ ನೋಡಿದ ಮೇಘನಾಗೂ ಈಗ ನೋಡಿದ ಮೇಘನಾಗೂ ಅಜಗಜಾಂತರ ವ್ಯತ್ಯಾಸವಿದೆ. ಆದರೂ ನಾನು ಮೇಘನಾ ಧೈರ್ಯವನ್ನು, ಸ್ಥೈರ್ಯ ವನ್ನು ಮೆಚ್ಚಿಕೊಂಡು ಪ್ರೋತ್ಸಾಹಿಸಿದ್ದೇನೆ ಎಂದರು. ಸದ್ಯ ಶಬ್ದ ಸಿನಿಮಾದ ಜೊತೆಗೆ ಮೇಘನಾ ತಮ್ಮ ಪ್ರೆಂಡ್ಸ್ ಗ್ಯಾಂಗ್ ನ ಪನ್ನಗಾಭರಣ ನಟನೆಯ ಸಿನಿಮಾವೊಂದಲ್ಲೂ ನಟಿಸುತ್ತಿದ್ದಾರೆ.

ಇದನ್ನೂ ಓದಿ : ಕಿರುತೆರೆ ರಿಯಾಲಿಟಿ ಶೋದಲ್ಲಿ ರಚಿತಾರಾಮ್

ಇದನ್ನೂ ಓದಿ : ಬಾಲಿವುಡ್ ಗೆ ಕಿಂಗ್ ಖಾನ್ ಪುತ್ರ : ಹೀರೋ ಆಗ್ತಿದ್ದಾರಾ ಆರ್ಯನ್ ಖಾನ್

(director Kantha Kannalli Crying for Meghanaraj Sarja Acting Shbadha Movie)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular