Ram Rahim : ಪೆರೋಲ್‌ನಲ್ಲಿರುವ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ Z ಪ್ಲಸ್ ಸೆಕ್ಯುರಿಟಿ

ಹರಿಯಾಣ ಜೈಲಿನಿಂದ 21 ದಿನಗಳ ಕಾಲ ಬಿಡುಗಡೆ ಭಾಗ್ಯ ಪಡೆದಿರುವ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ (Ram Rahim Baba) ಅವರಿಗೆ ಝಡ್ ಪ್ಲಸ್ ಭದ್ರತೆಯನ್ನು ಒದಗಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ‘ಖಾಲಿಸ್ತಾನ ಪರ’ ಉಗ್ರರಿಂದ ಜೀವ ಬೆದರಿಕೆ ಇರುವ ಕಾರಣ ಅವರಿಗೆ ಹೆಚ್ಚಿನ ಭದ್ರತೆಯನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಸುನಾರಿಯಾ ಜೈಲಿನಿಂದ 21 ದಿನಗಳ ಕಾಲ ಪೆರೋಲ್‌ನಲ್ಲಿದ್ದಾರೆ. ಅವರಿಗೆ ಸದ್ಯ ನೀಡಲಾಗಿರುವ ಝಡ್ ಪ್ಲಸ್ ಭದ್ರತೆಯಿಂದ 10 ಎನ್‌ಎಸ್‌ಜಿ ಭದ್ರತಾ ಸಿಬ್ಬಂದಿಯನ್ನು ಮತ್ತು ಅವರ ನಿವಾಸದ ಭದ್ರತೆಗಾಗಿ ಎಂಟು ಭದ್ರತಾ ಸಿಬ್ಬಂದಿಯನ್ನು ಪಡೆಯಲಿದ್ದಾರೆ. ಶಿಕ್ಷೆಗೊಳಗಾದ ಪಂಗಡದ ನಾಯಕನಿಗೆ ಉನ್ನತ ಮಟ್ಟದ ಭದ್ರತೆಯನ್ನು ನೀಡಲು ಹರಿಯಾಣ ಸರ್ಕಾರದ ಶಿಫಾರಸಿನ ನಂತರ ಅವರು ಈ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ.

ಹರಿಯಾಣದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಸಿಐಡಿ, ರೋಹ್ಟಕ್ ರೇಂಜ್‌ನ ಕಮಿಷನರ್‌ಗೆ ಬರೆದ ಪತ್ರದ ಪ್ರಕಾರ, ಅಪರಾಧಿ ಎಂದು ಘೋಷಿಸುವ ಮೊದಲು ಅವರು ಗಂಭೀರ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಅಧಿಕೃತ ಪತ್ರದ ಪ್ರಕಾರ, ಖಲಿಸ್ತಾನಿ ಪರ ಕಾರ್ಯಕರ್ತರಿಂದ ರಾಮ್ ರಹೀಮ್ ಸಿಂಗ್‌ಗೆ ಬೆದರಿಕೆ ಬರಲಿವೆ ಎಂದು ಮಾಹಿತಿ ಬಂದಿದೆ ಎನ್ನಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Jeevan Jyoti Bima Yojana: ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ದರದ ಟರ್ಮ್ ಇನ್ಶೂರೆನ್ಸ್ ಯೋಜನೆ ಹೊಂದಿದೆ ಭಾರತ

ಡೇರಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಫೆಬ್ರವರಿ 7 ರಂದು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಅವರು ಹಾರ್ಡ್‌ಕೋರ್ ಕೈದಿಗಳ ವರ್ಗದಲ್ಲಿ ಬರುವುದಿಲ್ಲ ಎಂದು ಹರಿಯಾಣ ಸರ್ಕಾರದ ತೀರ್ಮಾನ ಕೈಗೊಂಡಿತ್ತು ಡೇರಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಪ್ರಸ್ತುತ ಮಾಜಿ ಪತ್ರಕರ್ತ ರಾಮಚಂದ್ರ ಛತ್ರಪತಿ ಹತ್ಯೆ ಮತ್ತು ಇಬ್ಬರು ಡೇರಾ ಶಿಷ್ಯರ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. 2017ರಲ್ಲಿ ಪಂಚಕುಲದ ಸಿಬಿಐ ವಿಶೇಷ ನ್ಯಾಯಾಲಯ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು.

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

(Ram Rahim Dera Sacha Sauda Z Plus Security)

Comments are closed.