Director Pradeep Sarkar: ಬಾಲಿವುಡ್‌ ನಿರ್ದೇಶಕ ಪ್ರದೀಪ್‌ ಸರ್ಕಾರ್‌ ನಿಧನ

ಮುಂಬೈ : (Director Pradeep Sarkar) ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್‌ ನಿರ್ದೇಶಕ ಪ್ರದೀಪ್‌ ಸರ್ಕಾರ್‌ ಅವರು ಇಂದು ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ೬೭ ವರ್ಷ ವಯಸ್ಸಿನ ಪ್ರದೀಪ್‌ ಸರ್ಕಾರ್‌ ಅವರ ಸಾವಿಗೆ ಅಜಯ್‌ ದೇವಗನ್‌ , ಮನೋಜ್‌ ಬಾಜ್‌ ಪಾಯಿ ಸೇರಿದಂತೆ ಅನೇಕ ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ.

ಪ್ರದೀಪ್ ಸರ್ಕಾರ್ ಅವರು ದೀರ್ಘಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಮಾರ್ಚ್ 23 ರಾತ್ರಿ ಅವರ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮುಂಜಾನೆ 3.30 ಸುಮಾರಿಗೆ ಅವರು ಕೊನೆಯುಸಿರು ಎಳೆದಿದ್ದಾರೆ.

ಹಲವು ಚಿತ್ರಗಳನ್ನು ನಿರ್ದೇಶಿಸಿ ಖ್ಯಾತಿಯನ್ನು ಪಡೆದ ಇವರು ಸಿನಿಮಾ ಮಾತ್ರವಲ್ಲದೇ ವೆಬ್‌ ಸೀರಿಸ್‌ಗಳನ್ನು ನಿರ್ದೇಶಿಸಿ ಖ್ಯಾತಿ ಪಡೆದಿದ್ದಾರೆ. ಖ್ಯಾತ ನಿರ್ದೇಶಕ ರಾಜ್​ಕುಮಾರ್ ಹಿರಾನಿ ಜೊತೆ ಕೆಲಸ ಮಾಡುವ ಮೂಲಕ ವೃತ್ತಿ ಜೀವನ ಆರಂಭಿಸಿದ ಇವರು ವಿದ್ಯಾ ಬಾಲನ್, ಸೈಫ್ ಅಲಿ ಖಾನ್ ಹಾಗೂ ಸಂಜಯ್ ದತ್ ಅಭಿನಯದ ‘ಪರಿಣೀತಾ’ ಚಿತ್ರವನ್ನು ನಿರ್ದೇಶನ ಮಾಡಿ ಡೈರೆಕ್ಟರ್ ಕ್ಯಾಪ್ ತೊಟ್ಟರು. ‘ಮರ್ದಾನಿ’, ‘ಹೆಲಿಕಾಪ್ಟರ್ ಇಲಾ’ ಮೊದಲಾದ ಚಿತ್ರಗಳನ್ನು ಪ್ರದೀಪ್ ನಿರ್ದೇಶನ ಮಾಡಿದ್ದರು. ಇತ್ತೀಚೆಗೆ ಜೀ5ನಲ್ಲಿ ಬಂದ ‘ದುರಂಗಾ’ ವೆಬ್ ಸೀರಿಸ್​ಗೆ ಇವರ ನಿರ್ದೇಶನ ಇತ್ತು.

ಪ್ರದೀಪ್ ಸರ್ಕಾರ್ ಅವರು ಹೊಸ ಸಿನಿಮಾ ನಿರ್ದೇಶನ ಮಾಡಬೇಕಿತ್ತು. ಇದರಲ್ಲಿ ಕಂಗನಾ ರಣಾವತ್ ಅವರು ಮುಖ್ಯಭೂಮಿಕೆ ಮಾಡಬೇಕಿತ್ತು. ಈ ಸಿನಿಮಾ ಕೆಲಸಗಳು ಆರಂಭ ಆಗುವ ಮೊದಲೇ ಪ್ರದೀಪ್‌ ಅವರು ನಿಧನ ಹೊಂದಿದ್ದು, ಚಿತ್ರರಂಗಕ್ಕೆ ಭಾರೀ ಆಘಾತವಾಗಿದೆ. “ನಮಗೆಲ್ಲ ದಾದಾ ಆಗಿದ್ದ ಪ್ರದೀಪ್ ಸರ್ಕಾರ ಸಾವಿನ ಸುದ್ದಿ ಅರಗಿಸಿಕೊಳ್ಳೋದು ಕಷ್ಟ. ನಿಮಗೆ ನನ್ನ ಸಂತಾಪ. ಕುಟುಂಬದವರಿಗಾಗಿ ನನ್ನ ಪ್ರಾರ್ಥನೆ’ ಎಂದು ಅಜಯ್ ದೇವಗನ್ ಟ್ವೀಟ್ ಮಾಡಿದ್ದಾರೆ. ಪ್ರದೀಪ್ ಸರ್ಕಾರ್ ಸಾವಿಗೆ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ : ಕೋವಿಡ್‌ 19 ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಎಂದ ನಟಿ ಧನ್ಯಾ ರಾಮ್‌ಕುಮಾರ್‌

ಇದನ್ನೂ ಓದಿ : ಜನಪ್ರಿಯ ಕಿರುತೆರೆ ಶೋದಲ್ಲಿ ಭಾಗಿಯಾದ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ

Bollywood director Pradeep Sarkar passed away

Comments are closed.