ಸೋಮವಾರ, ಏಪ್ರಿಲ್ 28, 2025
HomeCinema'ಸ್ವಾತಿ ಮುತ್ತಿನ ಮಳೆ ಹನಿಯೇ' ಬಿಡುಗಡೆ ಮೊದಲು 'ಬಿಗ್ ಬಜೆಟ್' ಸಿನಿಮಾದ 90% ಶೂಟಿಂಗ್‌ ಮುಗಿಸಿದ...

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಬಿಡುಗಡೆ ಮೊದಲು ‘ಬಿಗ್ ಬಜೆಟ್’ ಸಿನಿಮಾದ 90% ಶೂಟಿಂಗ್‌ ಮುಗಿಸಿದ ರಾಜ್‌ ಬಿ ಶೆಟ್ಟಿ

- Advertisement -

ಸ್ಯಾಂಡಲ್‌ವುಡ್‌ನ ಸೆನ್ಸೇಷನಲ್ ಡೈರೆಕ್ಟರ್ ರಾಜ್ ಬಿ ಶೆಟ್ಟಿ (Director Raj B Shetty). ಕೆಲವು ತಿಂಗಳ ಹಿಂದಷ್ಟೇ ರಿಲೀಸ್ ಆಗಿದ್ದ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಭಾರತದಾದ್ಯಂತ ಸಿನಿಪ್ರಿಯರ ಮನಗೆದ್ದಿತ್ತು. ಬಾಲಿವುಡ್ ಫಿಲ್ಮ್ ಮೇಕರ್‌ಗಳು ಕೂಡ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ರಾಜ್‌ ಬಿ ಶೆಟ್ಟಿ ಹೊಸ ಸಿನಿಮಾ ಅನೌನ್ಸ್ ಮಾಡಿದ್ದರು. ಅದುವೇ ‘ಸ್ವಾತಿ ಮುತ್ತಿನ ಮಳೆ ಹನಿಯೇ’. ಈ ಸಿನಿಮಾ ರಾಜ್‌ ಬಿ ಶೆಟ್ಟಿ ಹಾಗೂ ರಮ್ಯಾ ಕಾಂಬಿನೇಷನ್‌ನಲ್ಲಿ ಬರಬೇಕಿತ್ತು. ಕೊನೆಯ ಕ್ಷಣದಲ್ಲಿ ರಮ್ಯಾ ಹಿಂದೆ ಸರಿದು, ಕೇವಲ ನಿರ್ಮಾಪಕಿಯಾಗಿಯೇ ಉಳಿದುಕೊಂಡಿದ್ದರು. ಈಗಾಗಲೇ ಈ ಸಿನಿಮಾದ ಶೂಟಿಂಗ್ ಕೂಡ ಮುಗಿಸಿದ್ದಾರೆ.

ಆದರೆ, ಸದ್ಯ ಸಿನಿಮಾ ಚಿತ್ರೀಕರಣ ಮುಗಿದಿದ್ದು, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ್ದಲ್ಲವೇ ಅಲ್ಲ. ಈ ಗ್ಯಾಪ್‌ನಲ್ಲೇ ಹೊಸ ಬಿಗ್ ಬಜೆಟ್ ಸಿನಿಮಾವೊಂದಕ್ಕೆ ಕೈ ಹಾಕಿದ್ದಾರಂತೆ. ವಿಶೇಷ ಅಂದ್ರೆ, ಆ ಸಿನಿಮಾ ಶೇ.90ರಷ್ಟು ಶೂಟಿಂಗ್ ಕೂಡ ಮುಗಿದಿದೆಯಂತೆ. ಅಸಲಿಗೆ ಆ ಸಿನಿಮಾ ಯಾವುದು? ವಿಶೇಷತೆ ಏನು? ಅನ್ನುವುದರ ಬಗ್ಗೆ ಎಲ್ಲರಿಗೂ ಕುತೂಹಲ ಹುಟ್ಟಿದೆ. ರಾಜ್‌ ಬಿ ಶೆಟ್ಟಿ ಯಾವಾಗ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಶೂಟಿಂಗ್ ಮುಗಿಸಿದ್ರು ಅನ್ನೋದು ಗೊತಾಗಿಲ್ಲ. ಅಷ್ಟು ಬೇಗ ಸಿನಿಮಾ ಕಂಪ್ಲೀಟ್ ಆಗಿತ್ತು. ಈ ವಿಷಯ ಬಹಿರಂಗ ಆಗುತ್ತಿದ್ದಂತೆ ಹಲವು ಮಂದಿ ಸೋಶಿಯಲ್ ಮೀಡಿಯಾದಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದರು.

ಆದ್ರೀಗ ರಾಜ್ ಬಿ ಶೆಟ್ಟಿ ಸಿನಿಪ್ರಿಯರಿಗೆ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ರಿಲೀಸ್‌ಗೂ ಮುನ್ನವೇ ಮತ್ತೊಂದು ಸಿನಿಮಾ ಶೂಟಿಂಗ್ ಶೇ.90ರಷ್ಟು ಮುಗಿಸಿದ್ದಾರಂತೆ. ಅಷ್ಟಕ್ಕೂ ಈ ಸಿನಿಮಾ ಯಾವಾಗ ಶುರು ಮಾಡಿದ್ರು? ಅನ್ನೋದೇ ಯಾರಿಗೂ ಗೊತ್ತಿಲ್ಲ. ಎಲ್ಲರೂ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಬಗ್ಗೆ ಮಾತಾಡುತ್ತಿರುವಾಗಲೇ ಶೆಟ್ಟರು ತಮ್ಮ ಕರಿಯರ್‌ನ ಬಿಗ್ ಬಜೆಟ್ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿಸಿ ಕೂತಿದ್ದಾರೆ. ಈಗಾಗಲೇ ಸಿನಿಮಾವನ್ನು ಮಂಗಳೂರು, ಉಡುಪಿ ಸೇರಿದಂತೆ ಹಲವೆಡೆ ಶೂಟಿಂಗ್ ಮಾಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ರಾಜ್‌ ಬಿ ಶೆಟ್ಟಿ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರೋದು ಕೂಡ ಅಷ್ಟೇ ವಿಶೇಷ ಆಗಿದೆ.

ರಾಜ್ ಬಿ ಶೆಟ್ಟಿಯ ಬಿಗ್ ಬಜೆಟ್ ಸಿನಿಮಾಗೆ ಇಬ್ಬರು ನಾಯಕಿಯರು ಇದ್ದಾರಂತೆ. ಆದರೆ, ಇದು ರೊಮ್ಯಾಂಟಿಕ್ ಸಿನಿಮಾ ಅಲ್ಲವಂತೆ. ಮೊದಲೇ ವಿಭಿನ್ನ ಕಾನ್ಸೆಪ್ಟ್‌ಗಳನ್ನು ತೆರೆಮೇಲೆ ತರೋ ರಾಜ್, ಈ ಬಾರಿ ಅದೆಂತಹ ಸಿನಿಮಾ ಮಾಡಿದ್ದಾರೆ ಅನ್ನೋ ಕುತೂಹಲವಿದೆ. ಅಂದ್ಹಾಗೆ, ಇಬ್ಬರು ನಾಯಕಿಯರಲ್ಲಿ ಒಬ್ಬರು ಸಂಯುಕ್ತ ಹೊರನಾಡು. ಮತ್ತೊಬ್ಬರು ಯಾರು ಅನ್ನೋದು ಇನ್ನೂ ರಿವೀಲ್ ಮಾಡಿಲ್ಲ. ಎರಡು ತಿಂಗಳ ಹಿಂದಷ್ಟೇ ರಾಜ್ ಕಾಸ್ಟಿಂಗ್ ಕಾಲ್ ಮಾಡಿದ್ದರು.

ಇದನ್ನೂ ಓದಿ : Saaniya Iyer Controversy : ಪುತ್ತೂರು ಕಂಬಳದಲ್ಲಿ ಸಾನಿಯಾ ಅಯ್ಯರ್‌ ವಿವಾದ : ದೇವರ ಬಳಿ ದೂರು ನೀಡಿದ ಕಂಬಳ ಸಮಿತಿ

ಇದನ್ನೂ ಓದಿ : ರಿಲೀಸ್‌ಗೂ ಮುನ್ನ ಕ್ರಾಂತಿ ಬಗ್ಗೆ ಸಾಲು ಸಾಲು ಪೋಸ್ಟ್ ಹಾಕ್ತಿದ್ದ ದರ್ಶನ್ ನಂತರ ಸೈಲೆಂಟ್‌ ಆಗಿದ್ದು ಯಾಕೆ ಗೊತ್ತಾ ?

ಇದನ್ನೂ ಓದಿ : ವೆಬ್ ಸಿರೀಸ್ ಆಗಿ ಬಿಡುಗಡೆಯಾಲಿದೆ ಹನ್ಸಿಕಾ ಮೊಟ್ವಾನಿ ವಿವಾಹ

ರಾಜ್ ಬಿ ಶೆಟ್ಟಿ ಸಿನಿಮಾಗಳಿಗೆ ರಮ್ಯಾ ಫಿದಾ ಆಗಿದ್ದರು. ಹೀಗಾಗಿ ಇವರ ಸಿನಿಮಾದಿಂದಲೇ ಕಮ್‌ ಬ್ಯಾಕ್ ಮಾಡುವುದಕ್ಕೆ ನಿರ್ಧರಿಸಿದ್ದರು. ಆದರೆ, ಮಧ್ಯೆದಲ್ಲಿ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾಕ್ಕೆ ನಿರ್ಮಾಪಕಿಯಾಗಿ ಮಾತ್ರ ಉಳಿದುಕೊಳ್ಳಲು ನಿರ್ಧರಿಸಿದ್ದರು. ಇದು ರಾಜ್ ಬಿ ಶೆಟ್ಟಿಗೆ ಬೇಸರ ತರಿಸಿತ್ತು ಅನ್ನೋ ಸುದ್ದಿ ಆ ಹರಿದಾಡಿತ್ತು. ಆದರೆ, ಅಂದುಕೊಂಡಿದ್ದಕ್ಕಿಂತ ಬೇಗನೇ ಸಿನಿಮಾ ಮುಗಿಸಿಕೊಟ್ಟಿದ್ದಾರೆ. ಈಗ ರಾಜ್‌ ಬಿ ಶೆಟ್ಟಿಯ ಹೊಸ ಬಿಗ್ ಬಜೆಟ್ ಸಿನಿಮಾ ಮಾಡುತ್ತಿರುವ ಬಗ್ಗೆ ಚರ್ಚೆಯಾಗುತ್ತಿದೆ. ಹಾಗಿದರೆ, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಕಥೆಯೇನು? ಯಾವಾಗ ರಿಲೀಸ್ ಮಾಡುತ್ತಾರೆ? ಅನ್ನೋದು ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

Director Raj B Shetty completed 90% shooting of ‘Big Budget’ movie before the release of ‘Swathi Mutthina Male Haniye’.

RELATED ARTICLES

Most Popular