ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ಟ ಯಶ್ : ರಾಕಿಂಗ್ ಸ್ಟಾರ್ ಮೀಟ್ ಮಾಡಿದ ಅಭಿಮಾನಿಗಳು

ಕೆಜಿಎಫ್ ಮತ್ತು ಕೆಜಿಎಫ್ – 2 ಸಿನಿಮಾದ ಯಶಸ್ಸಿನ ಬಳಿಕ ನಟ ಯಶ್ ಸ್ಯಾಂಡಲ್‌ವುಡ್‌ನಿಂದ ಪ್ಯಾನ್ ಭಡ್ತಿ ಪಡೆದು ಪ್ಯಾನ್ ಇಂಡಿಯಾ ಸ್ಟಾರ್ (Yash Meet Fans ) ಆಗಿದ್ದಾರೆ. ಅಭಿಮಾನಿಗಳಿಗೆ ಇದು ಸಿಹಿಸುದ್ದಿಯಾದ್ರೂ ತಮಗೆ ನಟ ಯಶ್ ನೋಡೋಕು ಸಿಗ್ತಿಲ್ಲ ಅನ್ನೋ ಕೊರಗು ಅವರನ್ನು ಭಾದಿಸುತ್ತಿತ್ತು. ಈಗ ನಟ ಯಶ್ ಅಭಿಮಾನಿಗಳ ಈ ಕೊರಗು ನಿವಾರಿಸಿದ್ದು, ನೂತನ ನಿವಾಸದ ಬಳಿ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ.

ನಟ ಯಶ್ ಅವರನ್ನು ಹತ್ತಿರದಿಂದ ಕಣ್ತುಂಬಿಕೊಳ್ಳೋ ಆಸೆಯಲ್ಲಿದ್ದ ಅಭಿಮಾನಿಗಳಿಗೆ ಇಂದು ಭರ್ಜರಿ ಆಫರ್ ಸಿಕ್ಕಿತ್ತು. ಹೌದು ನಟ ಯಶ್ ಬೆಂಗಳೂರಿನ ಗಾಲ್ಫ್ ಗ್ರೌಂಡ್ ಬಳಿ ಇರೋ ತಮ್ಮ ನೂತನ ಪ್ರೆಸ್ಟಿಜ್ ಅಪಾರ್ಟ್ಮೆಂಟ್ ಬಳಿ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ನಟ ಯಶ್ ಇಂದು ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ ಎಂಬ ಸುದ್ದಿ ಹರಡಿದ್ದರಿಂದ ಸಾವಿರಾರು ಅಭಿಮಾನಿಗಳು ಯಶ್ ನಿವಾಸದ ಬಳಿ ಧಾವಿಸಿದ್ದು, ನೆಚ್ಚಿನ ನಟನ ಜೊತೆ ಪೋಟೋ ತೆಗೆಸಿಕೊಂಡು ಕೈಕುಲಕಿ ಸಂಭ್ರಮಿಸಿದರು. ನಟ ಯಶ್ ತಮ್ಮ ಹೊಸಕೆರೆಹಳ್ಳಿ ಬಳಿಯ ಹಳೆ ಮನೆಯಲ್ಲಿ ಇದ್ದಾಗ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು.

ಆದರೆ ಕೊರೋನಾ ಹಾಗೂ ಕೊರೋನಾ ಬಳಿಕ ಯಶ್ ಬ್ಯುಸಿ ಶೆಡ್ಯೂಲ್ ನಲ್ಲಿ ಇದ್ದಿದ್ದರಿಂದ ಕಳೆದ ಕೆಲ ವರ್ಷಗಳಿಂದ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಈ ವರ್ಷವೂ ನಟ ಯಶ್ ಹುಟ್ಟುಹಬ್ಬದ ವೇಳೆ ವಿದೇಶ ಪ್ರವಾಸದಲ್ಲಿದ್ದರು. ಈ ಎಲ್ಲಾ ಕಾರಣಕ್ಕೆ ನಟ ಯಶ್ ಈಗ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಬಾಗಲಕೋಟೆ, ಬೀದರ, ಬೆಳಗಾವಿ, ಹಾಸನ, ಮಹಾಡ, ಗುಜರಾತ್ ಹಾಗೂ ಯುಪಿಯಿಂದಲೂ ಅಭಿಮಾನಿಗಳು ಯಶ್ ಭೇಟಿಗೆ ಬಂದಿದ್ದು ಕಿಕ್ಕಿರಿದ ಅಭಿಮಾನಿಗಳನ್ನು ಕಂಡ ಯಶ್ ಕೂಡ ಖುಷಿಯಾಗಿದ್ದಾರೆ.

ಇದನ್ನೂ ಓದಿ : Saaniya Iyer Controversy : ಪುತ್ತೂರು ಕಂಬಳದಲ್ಲಿ ಸಾನಿಯಾ ಅಯ್ಯರ್‌ ವಿವಾದ : ದೇವರ ಬಳಿ ದೂರು ನೀಡಿದ ಕಂಬಳ ಸಮಿತಿ

ಇದನ್ನೂ ಓದಿ : ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಬಿಡುಗಡೆ ಮೊದಲು ‘ಬಿಗ್ ಬಜೆಟ್’ ಸಿನಿಮಾದ 90% ಶೂಟಿಂಗ್‌ ಮುಗಿಸಿದ ರಾಜ್‌ ಬಿ ಶೆಟ್ಟಿ

ಇದನ್ನೂ ಓದಿ : ರಿಲೀಸ್‌ಗೂ ಮುನ್ನ ಕ್ರಾಂತಿ ಬಗ್ಗೆ ಸಾಲು ಸಾಲು ಪೋಸ್ಟ್ ಹಾಕ್ತಿದ್ದ ದರ್ಶನ್ ನಂತರ ಸೈಲೆಂಟ್‌ ಆಗಿದ್ದು ಯಾಕೆ ಗೊತ್ತಾ ?

ಇದನ್ನೂ ಓದಿ : ರಿಲೀಸ್‌ಗೂ ಮುನ್ನ ಕ್ರಾಂತಿ ಬಗ್ಗೆ ಸಾಲು ಸಾಲು ಪೋಸ್ಟ್ ಹಾಕ್ತಿದ್ದ ದರ್ಶನ್ ನಂತರ ಸೈಲೆಂಟ್‌ ಆಗಿದ್ದು ಯಾಕೆ ಗೊತ್ತಾ ?

ಯಶ್ ಸದ್ಯ ತಮ್ಮ ಮುಂದಿನ ಬಿಗ್ ಬಜೆಟ್ ಸಿನಿಮಾದ ಸಿದ್ಧತೆಯ ಜೊತೆಗೆ ಜಾಹೀರಾತುಗಳಲ್ಲೂ ಕಾಣಿಸಿಕೊಳ್ತಿದ್ದು, ಯಶ್ ಮುಂದಿನ ಸಿನಿಮಾಕ್ಕೆ ಬೇಡಿಕೆ ಹೆಚ್ಚಿದೆ. ಈ ಮಧ್ಯೆ ಯಶ್ ರನ್ನು ಭೇಟಿ ಮಾಡಿದ ಅಭಿಮಾನಿಗಳು ಯಶ್ ಮುಂದಿನ ಸಿನಿಮಾ ಯಾವುದು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ‌. ಆದರೆ ಅಭಿಮಾನಿಗಳ ಜೊತೆ ಜೊತೆಯಾಗಿ ಬೆರೆತ ನಟ ಯಶ್ ಯಾವ ಕಾರಣಕ್ಕೂ ತಮ್ಮ ಮುಂದಿನ ಸಿನಿಮಾ ಯಾವುದು ಎಂಬ ಗುಟ್ಟು ಬಿಟ್ಟು ಕೊಟ್ಟಿಲ್ಲ. ಬದಲಾಗಿ ಸದ್ಯದಲ್ಲೇ ತಮ್ಮ 19 ನೇ ಸಿನಿಮಾ ಘೋಷಿಸುವುದಾಗಿ ಹೇಳಿದ್ದಾರೆ.

Yash Meet Fans : Yash gave good news to the fans: Rocking star met the fans

Comments are closed.