ಖ್ಯಾತ ನಟಿಗೆ ಅಶ್ಲೀಲ ಸಂದೇಶ ಕಳುಹಿಸಿದ ನಿರ್ದೇಶಕ ! ದೂರು ದಾಖಲಿಸಿದ ನಟಿ

ಇತ್ತೀಚಿನ ದಿನಗಳಲ್ಲಿ ಸೈಬರ್‌ ಕ್ರೈಮ್‌ ಅಪರಾಧಗಳು ಹೆಚ್ಚುತ್ತಿವೆ. ಆದರೆ ಇಲ್ಲೊಬ್ಬ ನಿರ್ದೇಶಕ ತನ್ನ ಫೇಸ್‌ಬುಕ್‌ ಖಾತೆಯಿಂದ ಖ್ಯಾತ ನಟಿಯೋರ್ವರಿಗೆ ಅಶ್ಲೀಲ ಮೆಸೇಜ್‌ ಕಳುಹಿಸಿದ್ದಾರೆ. ಇದರಿಂದ ಕೆರಳಿರುವ ನಟಿ ಸೈಬರ್‌ ಸೆಲ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ಅಷ್ಟಕ್ಕೂ ಆ ನಟಿಯ ಹೆಸರು ಪಾಯಲ್ ಸರ್ಕಾರ್. ಬಂಗಾಳಿ ಕಿರುತೆರೆಯ ಜನಪ್ರಿಯ ನಟಿಯಾಗಿದ್ದು, ಥಾಪುರ್ ಥಾಪುರ್, ಅಂದರ್ ಮಹಲ್, ಬೆನೆ ಬೋವು, ತುಮಿ ರಾಬೆ ನಿರೊಬಿ ಎಂಬ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Vikranthrona: ಸುದೀಪ್ ಹುಟ್ಟುಹಬ್ಬದಂದು ಫ್ಯಾನ್ಸ್ ಗೆ ಸ್ಪೆಶಲ್ ಧಮಾಕಾ: ವಿಕ್ರಾಂತ್ ರೋಣ ಅಡ್ಡಾದಿಂದ ಸಿಗಲಿದೆ ಭರ್ಜರಿ ಗಿಫ್ಟ್

ಬಂಗಾಳಿಯ ಚಿರಪರಿಚಿತ ನಿರ್ದೇಶಕರೊಬ್ಬರ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನನಗೆ ಫ್ರೆಂಡ್‌ ರಿಕ್ವೆಸ್ಟ್‌ ಬಂದಿತ್ತು. ಅದನ್ನು ಸ್ವೀಕರಿಸಿದಾಗ ಅವರು ನನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದ್ದರು. ಅವರು ಕಳಿಸಿದ ಸಂದೇಶಗಳು ಅಶ್ಲೀಲತನದ ಪರಮಾವಧಿಯಾಗಿತ್ತು. ಕೂಡಲೇ ಇವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿ ಎಂದು ದೂರು ನೀಡಿರುವೆ ಎಂದು ಪಾಯಲ್ ಹೇಳಿದ್ದಾರೆ.

ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರು ‘ಇದೊಂದು ನಕಲಿ ಖಾತೆ. ಆದರೆ ನಿರ್ದೇಶಕರ ಹೆಸರಲ್ಲಿ ಯಾರೋ ಫೇಸ್‌ಬುಕ್‌ ಖಾತೆಯನ್ನು ತೆರೆದು ಮೆಸೇಜ್‌ ಕಳುಹಿಸಿದ್ದಾರೆ. ಎಂದಿದ್ದಾರೆ. ಇನ್ನು ಘಟನೆಯ ಬೆನ್ನಲ್ಲೇ ನಿರ್ದೇಶಕ ಕೂಡ ಪ್ರತಿಕ್ರಿಯಿಸಿದ್ದು, ನಕಲಿ ಖಾತೆಯಿಂದ ಇಷ್ಟೆಲ್ಲಾ ಆಗಿದೆ. ನಕಲಿ ಕಾತೆಯ ವಿರುದ್ದ ಇದೀಗ ನಿರ್ದೇಶಕರು ಕೂಡ ಪ್ರತಿದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: Deepika Padukone: ಕಿರುತೆರೆಯಲ್ಲಿ ಸ್ಪೆಶಲ್ ಧಮಾಕಾ: ಒಂದಾಗಿ ತೆರೆ ಮೇಲೆ ಬರ್ತಿದ್ದಾರೆ ದೀಪಿಕಾ ಪಡುಕೋಣೆ-ಬಿಗ್ ಬಿ

Comments are closed.