ಹೊಸವರ್ಷ, ಕ್ರಿಸ್ಮಸ್, ದೀಪಾವಳಿ, ಗೌರಿಗಣೇಶ ಹಬ್ಬ ಹೀಗೆ ಸಂದರ್ಭ ಯಾವುದೇ ಇರಲಿ ಸೆಲೆಬ್ರೆಟಿಗಳಿಗೆ ನೆನಪಾಗೋದು ಟ್ರಿಪ್. ವರ್ಷಾಂತ್ಯದಲ್ಲಂತೂ ಸಮುದ್ರ ತೀರದಲ್ಲಿ, ರೆಸಾರ್ಟ್ ಗಳಲ್ಲಿ ಬೀಡು ಬಿಟ್ಟು ಹೊಸ ವರ್ಷವನ್ನು ಸ್ವಾಗತಿಸೋದು ಕಾಮನ್ ಸಂಗತಿ. ಅದರಲ್ಲೂ ಕೆಲನಟಿಯರಂತೂ ಸಿನಿಮಾಗಿಂತ ಜಾಸ್ತಿ ಟ್ರಿಪ್ ಹಾಗೂ ಟ್ರಿಪ್ ನ ಪೋಟೋ ಗಳಿಂದಲೇ ಹೆಸರು ಗಳಿಸುತ್ತಾರೆ. ಈಗ ದಿಶಾ ಪಟಾನಿ ಕೂಡಾ ಅಂತಹುದೇ ಮಾದಕ ಪೋಟೋದ (disha patani bikini Photoshoot) ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ.
ನೀಳಕಾಯದ, ಮಾದಕ ಕಣ್ಣಿನ ದಿಶಾ ಪಟಾನಿ ಸದಾ ಪ್ರವಾಸ ಪ್ರಿಯೆ. ಅದರಲ್ಲೂ ಸಮುದ್ರ ತೀರಗಳು ದಿಶಾ ಪಟಾನಿ ಫೆವರಿಟ್ ಪ್ಲೇಸ್. ಸಮುದ್ರ ತೀರದಲ್ಲಿ ಬಿಕನಿ ತೊಟ್ಟು ಮರಳಿನ ಮೇಲೆ ಮೈಚೆಲ್ಲಿ ವಿರಮಿಸೋ ಪೋಟೋಗಳನ್ನು ದಿಶಾ ಸದಾ ಹಂಚಿಕೊಳ್ಳುತ್ತಾರೆ. ಈ ವರ್ಷಾಂತ್ಯಕ್ಕೂ ದಿಶಾ ಪಟಾನಿ ವಿದೇಶಕ್ಕೆ ಹಾರಿದ್ದಾರೆ. ಸಂಜೆ ಮುಳುಗೋ ಸೂರ್ಯನ ನೋಡುತ್ತಾ ಹೊಸ ವರ್ಷಾಚರಣೆ ಸಂಭ್ರಮದಲ್ಲಿದ್ದಾರೆ. ಮಾತ್ರವಲ್ಲ ತಮ್ಮ ಅಭಿಮಾನಿಗಳಿಗಾಗಿ ಬಿಕನಿ ಪೋಟೋವೊಂದನ್ನು ಶೇರ್ ಮಾಡಿದ್ದಾರೆ.

ಬೀಚ್ ಮತ್ತು ಬಿಕನಿ ಅನ್ನೋದು ದಿಶಾ ಪಟಾನಿ ಇಷ್ಟದ ಟ್ಯಾಗ್ ಲೈನ್. ಎಲ್ಲ ಟ್ರಿಪ್ ಗಳಂತೆ ದಿಶಾ ಈ ಭಾರಿಯೂ ಸಮುದ್ರ ತೀರಕ್ಕೆ ಪ್ರವಾಸ ಹೋಗಿದ್ದು ಜೊತೆಗೆ ಬಾಯ್ ಪ್ರೆಂಡ್ ಟೈಗರ್ ಶ್ರಾಫ್ ಕೂಡ ಇದ್ದಾರೆ ಎನ್ನಲಾಗಿದೆ. 48.3 ಮಿಲಿಯನ್ ಫಾಲೋವರ್ಸ್ ಹೊಂದಿರೋ ದಿಶಾ ಪಟಾನಿ ಶೇರ್ ಮಾಡಿದ ಹಾಟ್ ಫೊಟೋಗೆ ಬರೋಬ್ವರಿ 5 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ಅಷ್ಟೇ ಅಲ್ಲ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಸದ್ದು ಮಾಡಿದೆ.

ದಿಶಾ ಅಧಿಕೃತವಾಗಿ ಬಾಯ್ ಪ್ರೆಂಡ್ ಟೈಗರ್ ಶ್ರಾಫ್ ಜೊತೆ ಪೋಟೋ ಶೇರ್ ಮಾಡಿಲ್ಲ. ಆದರೆ ದಿಶಾ ಸಮುದ್ರ ತೀರದಲ್ಲಿ ಬಿಕನಿ ಪೋಟೋ ಶೇರ್ ಮಾಡಿದಂತೆ ಟೈಗರ್ ಶ್ರಾಫ್ ಕೂಡಾ ಬೀಚ್ ಮದ್ಯೆ ಎಂಜಾಯ್ ಮಾಡ್ತಿರೋ ಪೋಟೋ ಹಾಕಿಕೊಂಡಿದ್ದಾರೆ.
ಆ ಮೂಲಕ ದಿಶಾ ಪಟಾನಿಗೆ ಟೈಗರ್ ಶ್ರಾಫ್ ಕೂಡ ಸಾಥ್ ಕೊಟ್ಟಿದ್ದಾರೆ ಎನ್ನಲಾಗಿದೆ. ದಿಶಾ ಬಿಕನಿ ಪೋಸ್ ಗಳ ರಾಶಿ ರಾಶಿ ಪೋಟೋಗಳಂತೆ ಈ ಪೋಟೋಗೂ ಲಕ್ಷಾಂತರ ಲೈಕ್ಸ್ ಬಂದಿದೆ. ಎಂಎಸ್ ದೋನಿ ದ್ ಅನ್ ಟೋಲ್ಡ್ ಸ್ಟೋರಿ ಸಿನಿಮಾದ ಮೂಲಕ ಬಾಲಿವುಡ್ ಗೆ ಬಂದ ದಿಶಾ ಪಟಾನಿ, ಭಾರತ್ ಹಾಗೂ ಬಿ2 ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ : Samantha in Goa : ಗೋವಾದಲ್ಲಿ ಸಮಂತಾ: ಊ ಅಂಟಾವಾ ಬೆಡಗಿ ಬೋಲ್ಡ್ ಪೋಟೋಗೆ ಫ್ಯಾನ್ಸ್ ಫಿದಾ
ಇದನ್ನೂ ಓದಿ : Badava Rascal Movie Promotion : ಹಾಸನ, ಚಿಕ್ಕಮಗಳೂರಲ್ಲಿ ಡಾಲಿ ಹವಾ : ಅಭಿಮಾನಕ್ಕೆ ಚಿರ ಋಣಿ ಎಂದ ನಟ
(disha patani bikini Photoshoot with Boyfriend)