Coronavirus Live Updates : ದೇಶದಲ್ಲಿ ಒಂದೇ ದಿನ ಹೊಸ 13,154 ಕೋವಿಡ್ ಪ್ರಕರಣಗಳು ವರದಿ

Coronavirus Live Updates:ದೇಶದಲ್ಲಿ ಕೊರೊನಾ ವೈರಸ್​ ಸಂಖ್ಯೆಯಲ್ಲಿ ಮತ್ತೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು ಹೊಸ ಆತಂಕ ಸೃಷ್ಟಿಯಾಗಿದೆ. ಕಳೆದ ಒಂದು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಒಂದೇ ದಿನದಲ್ಲಿ 10 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣವು ವರದಿಯಾಗಿದೆ. ಇತ್ತ ಓಮಿಕ್ರಾನ್​ ಪ್ರಕರಣ ಕೂಡ ಏರಿಕೆ ಕಾಣುತ್ತಿರೋದು ಕಳವಳಕ್ಕೆ ದಾರಿ ಮಾಡಿದೆ.

ದೇಶದಲ್ಲಿ ಒಟ್ಟು 961 ಓಮಿಕ್ರಾನ್​ ಪ್ರಕರಣಗಳು ವರದಿಯಾಗಿವೆ. ಓಮಿಕ್ರಾನ್​ ಪ್ರಕರಣಗಳನ್ನು ವರದಿ ಮಾಡಿದ ರಾಜ್ಯಗಳ ಪೈಕಿ ರಾಷ್ಟ್ರ ರಾಜಧಾನಿ ದೆಹಲಿ ಮೊದಲ ಸ್ಥಾನವನ್ನು ಪಡೆದಿದೆ. ದೆಹಲಿಯಲ್ಲಿ ಈವರೆಗೆ 263 ಓಮಿಕ್ರಾನ್​ ಪ್ರಕರಣಗಳು ವರದಿಯಾಗಿವೆ. ನಂತರದ ಸ್ಥಾನದಲ್ಲಿರುವ ಮಹಾರಾಷ್ಟ್ರ 252 ಓಮಿಕ್ರಾನ್​ ಕೇಸುಗಳನ್ನು ಹೊಂದಿದೆ. ಇನ್ನುಳಿದಂತೆ ಗುಜರಾತ್​ನಲ್ಲಿ 97, ರಾಜಸ್ಥಾನದಲ್ಲಿ 69, ಕೇರಳ 65, ತೆಲಂಗಾಣ 62, ತಮಿಳುನಾಡು 45, ಕರ್ನಾಟಕ 34 , ಆಂಧ್ರಪ್ರದೇಶ 16, ಹರಿಯಾಣ 12 ಹಾಗೂ ಪಶ್ಚಿಮ ಬಂಗಾಳದಲ್ಲಿ 11 ಓಮಿಕ್ರಾನ್​ ಪ್ರಕರಣಗಳು ವರದಿಯಾಗಿವೆ. ಈವರೆಗೆ ದೇಶದಲ್ಲಿ ಓಮಿಕ್ರಾನ್​​ನಿಂದ 320 ಮಂದಿ ಚೇತರಿಸಿಕೊಂಡಿದ್ದಾರೆ .

ಇನ್ನು ಕಳೆದ 24 ಗಂಟೆಗಳಲ್ಲಿ 13, 154 ಕೋವಿಡ್​ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆಯು 3,48,22,040 ಆಗಿದೆ. ಒಂದೇ ದಿನದಲ್ಲಿ 268 ಮಂದಿ ಕೋವಿಡ್​ನಿಂದ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಈವರೆಗೆ ಒಟ್ಟು 4,80,860 ಕೋವಿಡ್​ ಸಾವುಗಳು ವರದಿಯಾಗಿವೆ. ಇನ್ನು ಕಳೆದ 24 ಗಂಟೆಗಳಲ್ಲಿ 7486 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಇದರಿಂದ ದೇಶದಲ್ಲಿ ಈವರೆಗೆ ಕೋವಿಡ್​ನಿಂದ ಚೇತರಿಸಿಕೊಂಡವರ ಸಂಖ್ಯೆ 3,42,58,778 ಆಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ.

ಇದನ್ನು ಓದಿ : Omicron Survey : ಬೆಂಗಳೂರಿನಲ್ಲಿ ಸದ್ದಿಲ್ಲದೇ ಏರುತ್ತಿದೆ ಓಮಿಕ್ರಾನ್‌ ಸೋಂಕಿತರ ಸಂಖ್ಯೆ: ಮನೆ ಮನೆ ಸರ್ವೇಗೆ ಆರೋಗ್ಯ ಇಲಾಖೆ ಆದೇಶ

ಇದನ್ನೂ ಓದಿ : Corona Vaccine to Children : ಮಕ್ಕಳಿಗೂ ಸಿಗಲಿದೆ ಲಸಿಕೆ: ವಾಕ್ಸಿನ್ ನೀಡಲು ಬಿಬಿಎಂಪಿ ಮಾಸ್ಟರ್ ಪ್ಲ್ಯಾನ್

Coronavirus Live Updates: 13,154 Fresh COVID-19 Cases In India, 43% Higher Than Yesterday

Comments are closed.