ಸ್ಯಾಂಡಲ್‌ವುಡ್ ನಟಿ ರಮ್ಯಾ (Ramya ) ನಿಧನರಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದೆ. ಆದ್ರೆ ಈ ಸುದ್ದಿ ರಮ್ಯಾ ಅಭಿಮಾನಿಗಳನ್ನು ಆತಂಕ ಒಳಗಾಗುವಂತೆ ಮಾಡಿತ್ತು. ಸಾವಿರಾರು ಮಂದಿ ಗಲಿಬಿಲಿಗೊಂಡಿದ್ದಾರೆ. ಆದ್ರೀಗ ರಮ್ಯಾ ಸಾವಿನ ನಕಲಿ ಸುದ್ದಿಯ ಕುರಿತು ಸ್ಪಷ್ಟನೆ ಸಿಕ್ಕಿದ್ದು, ರಮ್ಯಾ ಆರೋಗ್ಯವಾಗಿದ್ದಾರೆಂಬ ಮಾಹಿತಿ ಹೊರಬಿದ್ದಿದೆ.
ಸಿನಿಮಾ ರಂಗದಿಂದ ಸ್ವಲ್ಪ ದೂರವೇ ಉಳಿದುಕೊಂಡಿರುವ ನಟಿ ರಮ್ಯಾ ಸದ್ಯ ವಿದೇಶ ಪ್ರವಾಸದಲ್ಲಿದ್ದಾರೆ. ಅಲ್ಲದೇ ಅವರು ಆರೋಗ್ಯವಾಗಿದ್ದಾರೆ. ಸದ್ಯ ರಮ್ಯಾ ಯುರೋಪ್‌ನ ಪುರುಗ್ವೆಯಲ್ಲಿದ್ದಾರೆ. ಹೀಗಂತ ರಮ್ಯಾ ಸ್ನೇಹಿತೆ ಸುನಯನಾ ಟ್ವಟ್ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಇಂತಹ ಸುಳ್ಳು ಸುದ್ದಿಯನ್ನು ಹರಡಿಸುವುದು ಬೇಡಾ ಅಂತಾ ಮನವಿ ಮಾಡಿಕೊಂಡಿದ್ದಾರೆ.
ತಮಿಳುನಾಡು ಮೂಲಕ ಕೆಲವು ವೆಬ್‌ಸೈಟ್‌ಗಳು ರಮ್ಯಾ ಸಾವಿನ ಕುರಿತು ಸುದ್ದಿಯನ್ನು ಪ್ರಕಟಿಸಿದ್ದವು. ಕಾರ್ಡಿಕ್ ಅರೆಸ್ಟ್‌ನಿಂದಾಗಿ ಅವರು ಮೃತಪಟ್ಟಿದ್ದಾರೆ ಎಂಬ ಸದ್ದಿ ಡಿಜಿಟಲ್ ಮೀಡಿಯಾಗಳಲ್ಲಿ ಹರಿದಾಡಿತ್ತು. ಈ ಕುರಿತು ವಾಟ್ಸಾಪ್ ಸ್ಕ್ರೀನ್ ಶಾಟ್‌ಗಳು ಹರಿದಾಡಿದ್ದವು. ನಟಿ ರಮ್ಯ ಅವರನ್ನಾಗಲಿ, ಅವರ ಆಪ್ತರನ್ನಾಗಲಿ ಸಂಪರ್ಕಿಸದೇ ಸುದ್ದಿ ಪ್ರಕಟಿಸಿದ್ದೇ ಇಷ್ಟೆಲ್ಲಾ ರಾದ್ದಾಂತಗಳಿಗೆ ಕಾರಣವಾಗಿದೆ.
ಇದನ್ನೂ ಓದಿ : ಕೇರಳ ಸ್ಟೋರಿಯ ಬಳಿಕ ಅದಾ ಶರ್ಮ ಫುಲ್ ಮಿಂಚಿಂಗ್ : ಸಿನಿ ಮ್ಯಾಗಜಿನ್ ಸಖತ್ ಪೋಸ್ ಕೊಟ್ಟ ಅದಾ
ಸ್ಯಾಂಡಲ್‌ವುಡ್‌ನ ಖ್ಯಾತ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಸಾವನ್ನಪ್ಪಿದ್ದರು. ವಿದೇಶ ಪ್ರವಾಸದಲ್ಲಿದ್ದ ವೇಳೆಯಲ್ಲಿ ಸ್ಪಂದನಾ ವಿಜಯ್ ರಾಘವೇಂದ್ರ (Spandana Vijaya Raghavendra) ಅವರು ಕಾರ್ಡಿಕ್ ಅರೆಸ್ಟ್‌ಗೆ ಒಳಗಾಗಿ ಸಾವನ್ನಪ್ಪಿದ್ದರು. ಸ್ಪಂದನಾ ಸಾವನ್ನು ಕೆಲವು ತಮಿಳು ಮಾಧ್ಯಮಗಳು ತಪ್ಪಾಗಿ ಅರ್ಥೈಸಿ ಸುಳ್ಳು ಸುದ್ದಿ ಪ್ರಕಟಿಸಿವೆ ಎನ್ನಲಾಗುತ್ತಿದೆ. ಸದ್ಯ ಸುಳ್ಳು ಸುದ್ದಿ ಹರಿಬಿಟ್ಟಿರುವ ಮಾಧ್ಯಮಗಳ ವಿರುದ್ದ ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ನಟಿ ರಮ್ಯ ಮೂಲ ಹೆಸರು ದಿವ್ಯ ಸ್ಪಂದನಾ (Divya Spandana). ಸಿನಿಮಾ ರಂಗಕ್ಕೆ ಎಂಟ್ರಿಯಾದ ನಂತರ ತಮ್ಮ ಹೆಸರನ್ನು ರಮ್ಯ ಎಂದು ಇರಿಸಿಕೊಂಡಿದ್ದರು. ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ನ ನಂ 1 ನಟಿಯಾಗಿ ಗುರುತಿಸಿ ಕೊಂಡಿದ್ದ ರಮ್ಯ ಕೆಲವು ವರ್ಷಗಳಿಂದ ಸಿನಿಮಾ ರಂಗದಿಂದ ದೂರವಾಗಿ ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆದ್ರೀಗ ಮತ್ತೆ ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿ ಬಣ್ಣಹಚ್ಚುತ್ತಾರೆ ಅನ್ನೋ ಸುದ್ದಿಗಳು ಹರಿದಾಡಿದ್ದವು.
ಇದನ್ನೂ ಓದಿ : ಕಾವಾಲಯ್ಯ ಬೆಡಗಿಯ ಕಾವೇರಿಸುವ ಫೋಟೋ: ಇಲ್ಲಿದೆ ಮಿಲ್ಕಿ ಬ್ಯೂಟಿ ನಟಿ ತಮನ್ನಾ ಎಕ್ಸಕ್ಲೂಸಿವ್ ಪೋಟೋಶೂಟ್
ಸಿನಿಮಾ ರಂಗದಿಂದ ದೂರ ಉಳಿದಿದ್ದರೂ ಕೂಡ ರಮ್ಯಾ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ರಮ್ಯ ಮತ್ತೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವಂತೆ ಅಭಿಮಾನಿಗಳು ಆಗ್ರಹಿಸುತ್ತಲೇ ಇದ್ದಾರೆ. ಅಭಿ ಸಿನಿಮಾದ ಮೂಲದ ಚಿತ್ರರಂಗಕ್ಕೆ ಎಂಟ್ರಿ ಕೊಟ್ದಿದ್ದ ರಮ್ಯ ಎಕ್ಸ್ ಕ್ಯೂಸ್ ಮಿ, ರಂಗ ಎಸ್‌ಎಸ್‌ಎಲ್ ಸಿ, ಕಂಠಿ, ಆದಿ, ಆಕಾಶ್, ಅಮೃತಧಾರೆ, ಸೇವಂತಿ ಸೇವಂತಿ, ಜೊತೆ ಜೊತೆಯಲಿ, ಅರಸು, ಮುಸ್ಸಂಜೆ ಮಾತು, ಜಸ್ಟ್ ಮಾತ್ ಮಾತಲ್ಲಿ, ಜೊತೆಗಾರ, ಕಿಚ್ಚ ಹುಚ್ಚ, ಸಂಜು ವೆಡ್ಸ್ ಗೀತಾ, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್, ಲಕ್ಕಿ, ಆರ್ಯನ್ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು.
Divya Spandana Ramays Death Fake News Spreads in Social Media Platforms