ಸೋಮವಾರ, ಏಪ್ರಿಲ್ 28, 2025
HomeCinemaArvind- Divya : 24 ಗಂಟೆ 200 ಕಿ.ಮೀ. ವೇಗದಲ್ಲಿ ಕಾರು ಚಲಾಯಿಸಿದ ಅರವಿಂದ್‌ :...

Arvind- Divya : 24 ಗಂಟೆ 200 ಕಿ.ಮೀ. ವೇಗದಲ್ಲಿ ಕಾರು ಚಲಾಯಿಸಿದ ಅರವಿಂದ್‌ : ಸಹಚಾಲಕಿಯಾದ ದಿವ್ಯ ಉರುಡುಗ

- Advertisement -

ಬಿಗ್‌ಬಾಸ್‌ ಖ್ಯಾತಿಯ ಅರವಿಂದ್‌ ಕೆ.ಪಿ. ಹಾಗೂ ದಿವ್ಯ ಉರುಡುಗ ಜೋಡಿ ಜೋಡಿ ಸಖತ್‌ ಸುದ್ದಿಯಲ್ಲಿದೆ. ಇಷ್ಟು ದಿನ ಬೈಕ್‌ ಹಿಡಿದು ದಾಖಲೆ ನಿರ್ಮಿಸುತ್ತಿದ್ದ ಅರವಿಂದ್‌ ಇದೀಗ ಮಹೀಂದ್ರಾ XUV 700 ಕಾರು ರೇಸ್‌ನಲ್ಲಿ ಪಾಲ್ಗೊಂಡಿದ್ದಾರೆ. 24 ಗಂಟೆಗಳ ಕಾಲ 200 ಕಿ.ಮೀ. ವೇಗದಲ್ಲಿ ಕಾರು ಚಲಾಯಿಸುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾರೆ. ಆದರೆ ಅರವಿಂದ್‌ ಅವರ ಈ ಸಾಧನೆಗೆ ಸಹ ಚಾಲಕಿಯಾಗಿ ಕಾರಲ್ಲಿದ್ದವರು ಭವಿಷ್ಯದ ಪತ್ನಿ ದಿವ್ಯ ಉರುಡುಗ.

ಬಿಗ್‌ಬಾಸ್‌ ಮನೆಯಲ್ಲಿಯೇ ಕ್ಯೂಟ್‌ ಜೋಡಿ ಅಂತಾಯೇ ಕರೆಯಿಸಿಕೊಂಡಿದ್ದ ಅರವಿಂದ್‌ ದಿವ್ಯ ಜೋಡಿ ಮೊನ್ನೆ ಮೊನ್ನೆಯಷ್ಟೇ ಕಲರ್ಸ್‌ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್‌ ಕಾರ್ಯಕ್ರಮದಲ್ಲಿ ಜೊತೆಯಾಗಿ ಹೆಜ್ಜೆ ಹಾಕುವ ಮೂಲಕ ಅಭಿಮಾನಿಗಳಿಗೆ ಮೋಡಿ ಮಾಡಿತ್ತು. ಮಾತ್ರವಲ್ಲ ತಮ್ಮ ಹಲವು ವಿಚಾರಗಳನ್ನೂ ಕ್ಯಾಮರಾ ಮುಂದೆ ಹಂಚಿಕೊಂಡಿದ್ದರು.

ಆದ್ರೀಗ ಯಾರಿಗೂ ಗೊತ್ತೇ ಆಗದಂತೆ ಈ ಜೋಡಿ ಸಿಕ್ಕಾಪಟ್ಟೆ ಸುತ್ತಾಡಿದೆಯಂತೆ. ಅರವಿಂದ್‌ ಅವರು ಇತ್ತೀಚೆಗೆ ಮಹೀಂದ್ರಾ XUV 700 ರಾಷ್ಟ್ರೀಯ ಮಟ್ಟದ ಕಾರ್‌ ರೇಸ್‌ನಲ್ಲಿ ಪಾಲ್ಗೊಂಡಿದ್ದರು. ಈ ರೇಸ್‌ ನಲ್ಲಿ ವಿಶೇಷ ಅನುಮತಿಯನ್ನು ಪಡೆದು ದಿವ್ಯ ಅವರನ್ನು ಸಹ ಚಾಲಕಿಯಾಗಿ ಕಾರಿನಲ್ಲಿ ಕೂರಿಸಿಕೊಂಡಿದ್ದಾರೆ. ಬರೋಬ್ಬರಿ 200 ಕಿ.ಮೀ. ವೇಗದಲ್ಲಿ ಕಾರನ್ನು ಚಲಾಯಿಸುವ ಮೂಲಕ ಅರವಿಂದ ಕೆ.ಪಿ. ವಿಶೇಷವಾದ ಸಾಧನೆಯನ್ನು ಮಾಡಿದ್ದಾರೆ.

ಈ ಕುರಿತು ಪೋಸ್ಟ್‌ ಮಾಡಿರುವ ಅರವಿಂದ್‌ ಕೆ.ಪಿ., ನಾವು ಕಳೆದ ವಾರ ಮಹೀಂದ್ರ XUV 700 ರಾಷ್ಟ್ರೀಯ ಕಾರ್‌ ರೇಸ್‌ನಲ್ಲಿ ಭಾಗಿಯಾಗಿದ್ದೆವು. ನನ್ನ ಹಿಂದೆ ಇದ್ದವರು ಯಾರು ? 24 ಗಂಟೆಗಳ ಕಾಲ 200 ಕಿ.ಮೀ. ವೇಗದ ಚಾಲನೆ ಮಾಡುವುದು ಹೇಗಿತ್ತು. ಈ ಈವೆಂಟ್‌ ಅನ್ನು ಬೃಹತ್‌ ಯಶಸ್ವಿಯಾಗಲು ಕಾರಣವಾಯಿತು ಎಂದು ಬರೆದುಕೊಂಡು, ಮಹೀಂದ್ರ ರೇಸ್‌ನ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದಾರೆ.

ಇನ್ನು ದಿವ್ಯ ಉರುಡುಗ ಕೂಡ ತಮ್ಮ ಅನುಭವವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅರವಿಂದ್‌ ಕೆ.ಪಿ. ಅವರ ಜೊತೆಗಿರುವ ಪೋಟೋವನ್ನು ಹಂಚಿಕೊಂಡಿರುವ ದಿವ್ಯ, ನನ್ನ ಜೀವನದಲ್ಲಿ ಯಾವತ್ತೂ 200 ಕಿಮೀ/ಗಂಟೆ ಮಾಡುತ್ತಿದ್ದ ಕಾರಿನಲ್ಲಿ ಕುಳಿತುಕೊಳ್ಳಲಿಲ್ಲ. ಇದು ಅತ್ಯಂತ ಮೋಜಿನ ಸಂಗತಿಯಾಗಿತ್ತು ಎಂದಿದ್ದಾರೆ.

ಇದನ್ನೂ ಓದಿ : ದಿವ್ಯಾ ಉರುಡುಗ ಮತ್ತು ಅರವಿಂದ್ ಪ್ರೇಮಕ್ಕೆ ಹೆತ್ತವರು ಏನಂದ್ರು ಗೊತ್ತಾ..?!

ಇದನ್ನೂ ಓದಿ : ಬಿಗ್‌‌ಬಾಸ್ ನಲ್ಲಿ ಹೊಸ ದಾಖಲೆ ಬರೆದ ದಿವ್ಯಾ ಉರುಡುಗ

24 hours and 200 km Arvind KP, who drove the Mahindra XUV700 car at speed: Divya Uruduga a companion

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular