ಮಂಗಳವಾರ, ಏಪ್ರಿಲ್ 29, 2025
HomeCinemaRayan Raj Sarja : ಅಪ್ಪು ಕಂಡು ರಾಯನ್ ರಾಜ್ ಸರ್ಜಾ ಏನಂದ್ರು ಗೊತ್ತಾ? ಇಲ್ಲಿದೆ...

Rayan Raj Sarja : ಅಪ್ಪು ಕಂಡು ರಾಯನ್ ರಾಜ್ ಸರ್ಜಾ ಏನಂದ್ರು ಗೊತ್ತಾ? ಇಲ್ಲಿದೆ ಎಕ್ಸಕ್ಲೂಸಿವ್ ವಿಡಿಯೋ

- Advertisement -

Rayan Raj Sarja Appu : ಹುಟ್ಟುವಾಗಲೇ ನೋವಿನ ನೆರಳೊಂದು ಆ ಮಗುವನ್ನು ಹಿಂಬಾಲಿಸುತ್ತಿತ್ತು. ಆದರೂ ಆತ ಹುಟ್ಟುತ್ತಲೇ ಎಲ್ಲರ ಬಾಳಲ್ಲೂ ನಗು ಮೂಡಿಸಿದ. ಎರಡು ಕುಟುಂಬಗಳ ಪಾಲಿಗೆ ಬದುಕಿನ ಆಶಾಕಿರಣ ಎನ್ನಿಸಿದ. ನೋವು ಮರೆಯಲು ಕಾರಣವಾದ. ಅದು ಮತ್ಯಾರು ಅಲ್ಲ. ದಿವಂಗತ ನಟ ಚಿರು ಹಾಗೂ ನಟಿ ಮೇಘನಾ ಪುತ್ರ(Rayan Raj Sarja) ರಾಯನ್ ರಾಜ್ ಸರ್ಜಾ. ಹುಟ್ಟುತ್ತಲೇ ಸೆಲೆಬ್ರೆಟಿ ಇಮೇಜ್ ಪಡೆದ ರಾಯನ್ ಈಗ ಚಿಕ್ಕ ವಯಸ್ಸಿನಲ್ಲೇ ಪ್ರಬುದ್ಧತೆ ಮೆರೆದು ಎಲ್ಲರನ್ನು ಅಚ್ಚರಿಗೊಳಿಸಿದ್ದಾನೆ.

ಇನ್ನೇನು ಎರಡು ವರ್ಷಕ್ಕೆ ಕಾಲಿಡೋ ಹಂತದಲ್ಲಿರೋ ನಟಿ ಮೇಘನಾ ಪುತ್ರ (Rayan Raj Sarja) ರಾಯನ್ ರಾಜ್ ಸರ್ಜಾ, ಈಗಲೇ ತನ್ನ ಬುದ್ಧಿ ಶಕ್ತಿಯಿಂದ ಎಲ್ಲರನ್ನು ಚಕಿತಗೊಳಿಸಿದ್ದಾನೆ. ಈಗಾಗಲೇ ಹಲವು ಭಾರಿ ಮೇಘನಾ ಬಿಡುಗಡೆ ಮಾಡಿದ್ದ ವೀಡಿಯೋಗಳಲ್ಲಿ ರಾಯನ್ ತಂದೆಯನ್ನು ಪೋಟೋದಲ್ಲಿ ಗುರುತಿಸೋದು, ಅಪ್ಪಾ ಅಪ್ಪಾ ಎಂದು ತೊದಲೋದನ್ನು ನಾವು ನೋಡಿದ್ವಿ.

ಕೆಲವರಂತೂ ಪುಟ್ಟ ಕಂದ ತನ್ನ ತಂದೆಯನ್ನು ಪೋಟೋದಲ್ಲಿ ನೋಡೋದನ್ನು, ಅಲ್ಲಿ ಮಾತನಾಡಿಸೋದನ್ನು ನೋಡಿ ಕಣ್ಣೀರಾಗಿದ್ದರು.‌ ಈಗ ಅದೇ ರಾಯನ್ ರಾಜ್ ಸರ್ಜಾ ಕನ್ನಡ ಚಿತ್ರರಂಗದ ದಿಗ್ಗಜ ನಟರನ್ನು ಗುರುತಿಸುವ ಮೂಲಕ ತನ್ನ ಪ್ರಬುದ್ಧತೆ ಮೆರೆದಿದ್ದಾನೆ. ಅಗಲಿದ ನಟ ಪುನೀತ್ ರಾಜ್ ಕುಮಾರ್ ಪೋಟೋ ನೋಡಿದ ರಾಯನ್ ಅಪ್ಪು ಅಪ್ಪು ಎಂದು ತೊದಲಿದ್ದಾನೆ. ಮಾತ್ರವಲ್ಲ ಪುನೀತ್ ಭುಜದ ಮೇಲೆ ಕುಳಿತ ಪಾರಿವಾಳವನ್ನು ಕಂಡು ವಾವ್ ಎಂದು ಉದ್ಘರಿಸಿದ್ದಾನೆ.

ಅಷ್ಟೇ ಅಲ್ಲ ಅಪ್ಪು ಪಕ್ಕದಲ್ಲೇ ಇರೋ ಅಂಬರೀಶ್ ಪೋಟೋ ತೋರಿಸಿದ ಮೇಘನಾ ಇದ್ಯಾರು ಎಂದು ಪ್ರಶ್ನಿಸಿದಕ್ಕೆ ಅಂಬಿ ಅಂಕಲ್ ಎಂದಿದ್ದಾನೆ. ಅಂಬರೀಶ್ ಪಕ್ಕದಲ್ಲಿ ಇರೋ ವಿಷ್ಣುವರ್ಧನ್ ಪೋಟೋ ತೋರಿಸಿದ ಮೇಘನಾ ಹಾಗೂ ಸುಂದರ ರಾಜ್ ಇದ್ಯಾರು ಎಂದು ಕೇಳಿದ್ದಕ್ಕೆ , ವಿಷ್ಣು ಮಾಮಾ ಎಂದಿದ್ದು ವಿಡಿಯೋ ಸಖತ್ ವೈರಲ್ ಆಗಿದೆ.

ಇಷ್ಟೆಲ್ಲ ಆಗಿರೋದು ಬೆಂಗಳೂರಿನ ಫಿಲ್ಮ್ ಚೆಂಬರ್ ನಲ್ಲಿ. ಇತ್ತೀಚಿಗೆ ಫಿಲ್ಮ್ ಚೆಂಬರ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ನಟಿ ಮೇಘನಾ ರಾಜ್ ಪುತ್ರನ ಸಮೇತ ಆಗಮಿಸಿದ್ದರು. ಈ ವೇಳೆ ರಾಯನ್ ತನ್ನ ಕುಟುಂಬದ ಸದಸ್ಯರ ಜೊತೆ ಜೊತೆ ಸಿನಿರಂಗದ ಗಣ್ಯರನ್ನು ಗುರುತಿಸಿದ್ದು ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಭಿಮಾನಿಗಳು ರಾಯನ್ ಬುದ್ಧಿಶಕ್ತಿ ಕಂಡು ಅಚ್ಚರಿಗೊಂಡಿದ್ದಾರೆ.

ಇದನ್ನೂ ಓದಿ : ಮೊದಲು ಸ್ಕೂಲ್, ಆಮೇಲೆ‌ ನಟನೆ: ಮಗ ರಾಯನ್ ಸರ್ಜಾ ಬಗ್ಗೆ ತಮ್ಮ ಕನಸು ಹಂಚಿಕೊಂಡ ನಟಿ ಮೇಘನಾ ರಾಜ್ ಸರ್ಜಾ

ಇದನ್ನೂ ಓದಿ : Sarja family : ಸರ್ಜಾ ಫ್ಯಾಮಿಲಿಗೂ ಅಕ್ಟೋಬರ್ ಗೂ ಇದೆ ವಿಶೇಷ ನಂಟು ; ಇದು ಸರ್ಜಾ ಕುಟುಂಬದ ಸ್ಪೆಶಲ್ ಸ್ಟೋರಿ

Do you know what Rayan Raj Sarja is when Appu is found? Here is the exclusive video

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular