Ramya and Raj B Shetty : ಸ್ವಾತಿ ಮುತ್ತಿನ ಮಳೆ ಹನಿಯೇ: ರಾಜ್ ಜೊತೆ ರಮ್ಯ ಹೊಸ ಸಿನಿಮಾ ಟೈಟಲ್ ರಿವೀಲ್

(Ramya and Raj B Shetty)ನಟಿಸಿದ ಎಲ್ಲ ಚಿತ್ರಗಳು ಸೂಪರ್ ಹಿಟ್ ಆದ ಬಳಿಕ ಸ್ಯಾಂಡಲ್ ವುಡ್ ಕ್ವೀನ್ ಎನ್ನಿಸಿಕೊಂಡ ನಟಿ ಹಾಗೂ ಮಾಜಿ ಸಂಸದೆ ರಮ್ಯ ಒಂದಿಷ್ಟು ವರ್ಷ ನಟನೆಯಿಂದ ಬ್ರೇಕ್ ಪಡೆದಿದ್ದರು. ಸಂಸದೆಯಾಗಿ ಲೋಕಸಭೆ ಪ್ರವೇಶಿಸಿದ ರಮ್ಯ ಬಹುತೇಕ ಬಣ್ಣದ ಲೋಕವನ್ನು ಮರೆತು ಬಿಟ್ಟಿದ್ದರು. ಆದರೆ ಈಗ ಮತ್ತೆ ರಾಜಕೀಯದಿಂದ ದೂರವುಳಿದು ಬಣ್ಣ ಹಚ್ಚಲು ಸಿದ್ಧವಾಗಿದ್ದಾರೆ.‌ಬಹುವರ್ಷದಿಂದ ರಮ್ಯರನ್ನು ತೆರೆ ಮೇಲೆ‌ನೋಡಲು ಕಾದಿದ್ದ ಅಭಿಮಾನಿಗಳಿಗೆ ವಿಜಯದಶಮಿಯಂದು ಸಿಹಿಸುದ್ದಿ‌ನೀಡಿದ ರಮ್ಯ ತಮ್ಮ ಹೊಸ ಸಿನಿಮಾ ಘೋಷಿಸಿದ್ದಾರೆ.

ಸ್ವಾತಿ ಮುತ್ತಿನ ಮಳೆ ಹನಿಯೇ ಎಂಬ ವಿಭಿನ್ನ ಟೈಟಲ್ ಜೊತೆ ರಮ್ಯ ಹೋಂ ಬ್ಯಾನರ್ ನಲ್ಲಿ ತೆರೆಗೆ ಬರ್ತಿದ್ದಾರೆ. (Ramya and Raj B Shetty)ನಟಿ ರಮ್ಯಗೆ ನಾಯಕ ಯಾರು ಅನ್ನೋ ಕುತೂಹಲಕ್ಕೂ ಉತ್ತರ ಸಿಕ್ಕಿದ್ದು ರಮ್ಯನಿಗೆ ರಾಜ್ ಬಿ ಶೆಟ್ಟಿ ಜೊತೆಯಾಗಲಿದ್ದಾರೆ. ಕೇವಲ ಹೀರೋ ಮಾತ್ರವಲ್ಲ ರಮ್ಯ ಈ ಸಿನಿಮಾಗೆ ರಾಜ್ ಬಿ ಶೆಟ್ಟಿ ಆಕ್ಷ್ಯನ್ ಕಟ್ ಹೇಳಲಿದ್ದಾರೆ. ವಿಜಯ ದಶಮಿಯಂದು ಈ ಸಿಹಿಸುದ್ದಿಯನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಹಿಂದೆಯೇ ರಮ್ಯ ತಾವು ಬಣ್ಣದ ಲೋಕಕ್ಕೆ ಮರಳೋದಾಗಿ ಹೇಳಿಕೊಂಡಿದ್ದರು. ಆದರೆ ಸ್ವತಃ ನಟನೆಗೆ ಬರುತ್ತಾರೋ ಅಥವಾ ಸಿನಿಮಾ ನಿರ್ಮಾಣ ಮಾಡುತ್ತಾರೋ ಎಂಬ ಕುತೂಹಲವಿತ್ತು. ಆದರೆ ಈಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಒಂದಿಷ್ಟು ಕಾಲ ಸಿನಿಮಾ ರಂಗದಿಂದ ದೂರವಿದ್ದ ರಮ್ಯ, ಬಳಿಕ ರಾಜಕೀಯದಲ್ಲಿ ಸಕ್ರಿಯರಾಗಿದ್ದರು‌. ಆದರೆ ಒಂದಿಷ್ಟು ವರ್ಷದ ಬಳಿಕ ಆರೋಗ್ಯ ಸಮಸ್ಯೆಯ ಕಾರಣಕ್ಕೆ ಕಾಂಗ್ರೆಸ್‌ನಿಂದ ದೂರ ಸರಿದ ರಮ್ಯ ಮತ್ತೆ ನಟನೆಗೆ ಒಲವು ತೋರಿದರು.

ಇದನ್ನೂ ಓದಿ : Rana Daggubati : ನಟ ರಾಣಾ ದಗ್ಗುಬಾಟಿ ಕಛೇರಿಯಲ್ಲಿ ಅಪ್ಪು ಪುತ್ಥಳಿ : ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ಪುಲ್‌ಖುಷ್‌

ಇದನ್ನೂ ಓದಿ : Kantara Movie leaks : ಕಾಂತಾರಕ್ಕೂ ಪೈರಸಿ ಕಾಟ: ಸೋಷಿಯಲ್ ಮೀಡಿಯಾದಲ್ಲಿ ಲಿಂಕ್ ವೈರಲ್

ಇದನ್ನೂ ಓದಿ : Ranveer Singh: ದೀಪಿಕಾ -ರಣವೀರ್​ ದಾಂಪತ್ಯ ವಿರಸದ ವದಂತಿಗೆ ತೆರೆ ಎಳೆದ ದೀಪ್​ವೀರ್​ ದಂಪತಿ

ಸಿನಿಮಾ ಕಾರ್ಯಕ್ರಮಗಳು, ಶೋಗಳು ಹಾಗೂ ಚಲನಚಿತ್ರದ ಬೆಳವಣಿಗೆಗಳತ್ತ ಮುಖಮಾಡಿದ ರಮ್ಯ ಸಿನಿಮಾಗಳ ವಿಮರ್ಶೆ, ಟ್ರೇಲರ್ ಲಾಂಚ್, ಆಡಿಯೋ ಲಾಂಚ್ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಕೆಲದಿನದ ಹಿಂದೆ ರಮ್ಯ ಆಪ್ಯಲ್ ಬಾಕ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಆರಂಭಿಸೋದಾಗಿ ಘೋಷಿಸಿದ್ದರು. ಈಗ ಅದೇ ಹೋಂ ಬ್ಯಾನರ್ ನಲ್ಲಿ ಸ್ವಾತಿ‌ಮುತ್ತಿನ ಮಳೆ ಹನಿಯೇ ಸಿನಿಮಾ ಘೋಷಿಸಿದ್ದಾರೆ. ವಿಜಯದಶಮಿಯಂದು ರಮ್ಯ ಸಿನಿಮಾ ಘೋಷಿಸಿರೋದು ರಮ್ಯ ಅಭಿಮಾನಿಗಳಿಗೆ ಮಾತ್ರವಲ್ಲ ಸ್ಯಾಂಡಲ್ ವುಡ್ ನಟ ನಟಿಯರಿಗೂ ಖುಷಿ ತಂದಿದ್ದು ಎಲ್ಲರೂ ಶುಭಾಶಯ ಕೋರುವ ಮೂಲಕ ಸ್ಯಾಂಡಲ್ ವುಡ್ ಪದ್ಮಾವತಿಗೆ ವೆಲ್‌ಕಮ್ ಮಾಡಿದ್ದಾರೆ.

Swati Muthina Verm Haniye: Raj B Shetty and Ramya’s new movie title revealed

Comments are closed.