Dhruva Sarja : ಅಜ್ಜಿ,ಅಣ್ಣನ ಅಗಲಿಕೆ ಕಾಡ್ತಿದೆ: ಅದ್ದೂರಿ ಬರ್ತಡೇ ಬೇಡ ಎಂದ ಧ್ರುವ ಸರ್ಜಾ

Dhruva Sarja birthday : ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಗಳ ಬರ್ತಡೆಗೆ ವಿಶೇಷವಾದ ಆಕರ್ಷಣೆಯಿದೆ. ಅಭಿಮಾನಿಗಳು ತಮ್ಮ ಇಷ್ಟದ ನಾಯಕನ ನಾಯಕಿಯರ ಬರ್ತಡೇಯನ್ನು ಸೆಲಿಬ್ರೇಟ್ ಮಾಡೋದನ್ನು ನೋಡೋದೇ ಒಂದು ಚೆಂದ. ಆದರೆ ಕೊರೋನಾದಿಂದಾಗಿ ಸ್ಯಾಂಡಲ್ ವುಡ್ ಗೆ ಕವಿದಿದ್ದ ಕಾಮೋರ್ಡ ಇನ್ನು ಸರಿದಿಲ್ಲ. ಹೀಗಾಗಿ ಸ್ಟಾರ್ ಗಳು ಅದ್ದೂರಿ ಹುಟ್ಟುಹಬ್ಬದಿಂದ ಹಿಂದೆ ಸರಿಯುತ್ತಿದ್ದಾರೆ. ಈಗ ಈ ಸಾಲಿಗೆ ನಟ (Dhruva Sarja)ಧ್ರುವ್ ಸರ್ಜಾ ಕೂಡ ಸೇರಿದ್ದಾರೆ. ಈ ವರ್ಷ ನೀವಿದ್ದಲ್ಲಿಂದಲೇ ಹರಸಿ ಎಂದು ಮನವಿ ಮಾಡಿದ್ದಾರೆ.

ಸ್ಯಾಂಡಲ್ ವುಡ್ ನ ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾ (Dhruva Sarja)ಮನೆಯಲ್ಲಿಗ ಸುಖ ಮತ್ತು ದುಃಖದ ಮಿಕ್ಸ್ ಎಮೋಶನ್ ತುಂಬಿದೆ. ಒಂದೆಡೆ ಧ್ರುವ್ ಸರ್ಜಾ ಹಾಗೂ ಪ್ರೇರಣಾ ದಂಪತಿ ಪೋಷಕರಾಗಿ ಭಡ್ತಿ ಪಡೆದಿದ್ದು ಈ ದಂಪತಿಗಳಿಗೆ ಮುದ್ದಾದ ಮಗಳು ಜನಿಸಿದ್ದಾಳೆ. ಆದರೆ ಅಗಲಿದ ಚಿರು ಸರ್ಜಾ ಹಾಗೂ ಧ್ರುವ್ ಅಜ್ಜಿ ಲಕ್ಷ್ಮೀದೇವಮ್ಮ ನೆನಪು ಧ್ರುವ್ ಸರ್ಜಾ ಕುಟುಂಬವನ್ನು ಕಾಡುತ್ತಲೇ ಇದೆ. ಹೀಗಾಗಿ ಧ್ರುವ್ ಸರ್ಜಾ ಈ ವರ್ಷ ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರಾಕರಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಧ್ರುವ್ ಸರ್ಜಾ, ನಾನು ತುಂಬಾ ಖುಷಿಯಾಗಿದ್ದೇನೆ. ಯಾಕೆಂದರೇ ನಮ್ಮ ಮನೆಗೆ ಮಹಾಲಕ್ಷ್ಮಿ ಬಂದಿದ್ದಾಳೆ. ಅದರಲ್ಲೂ ನನ್ನ ಆಸೆಯಂತೆ ಹೆಣ್ಣು ಮಗು ಜನಿಸಿದೆ. ಆದರೆ ಈ ಖುಷಿಯಲ್ಲೂ ನನಗೆ ಅಣ್ಣನ ಅಗಲಿಕೆ‌ ಮತ್ತು ಅಜ್ಜಿಯ ಸಾವಿನ ನೋವು ಕಾಡುತ್ತಿದೆ. ಹೀಗಾಗಿ ಅಭಿಮಾನಿಗಳಿಗೆ ನಾನು ವಿನಂತಿ ‌ಮಾಡ್ತಿನಿ ಈ ವರ್ಷ ನನ್ನ ಹುಟ್ಟುಹಬ್ಬದ ಆಚರಣೆ ಬೇಡ. ನೀವು ಇದ್ದಲ್ಲಿಂದಲೇ ನನ್ನನ್ನು ಹರಸಿ ಹಾರೈಸಿ,ನಿಮ್ಮ ಸನಿಹದಲ್ಲೇ ಇರುವ ಅಗತ್ಯ ಉಳ್ಳವರಿಗೆ ಸಹಾಯ ಮಾಡಿ. ಆದರೆ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳೋದಿಲ್ಲ.

ಇದನ್ನೂ ಓದಿ : ಮೊದಲು ಸ್ಕೂಲ್, ಆಮೇಲೆ‌ ನಟನೆ: ಮಗ ರಾಯನ್ ಸರ್ಜಾ ಬಗ್ಗೆ ತಮ್ಮ ಕನಸು ಹಂಚಿಕೊಂಡ ನಟಿ ಮೇಘನಾ ರಾಜ್ ಸರ್ಜಾ

ಇದನ್ನೂ ಓದಿ : Sarja family : ಸರ್ಜಾ ಫ್ಯಾಮಿಲಿಗೂ ಅಕ್ಟೋಬರ್ ಗೂ ಇದೆ ವಿಶೇಷ ನಂಟು ; ಇದು ಸರ್ಜಾ ಕುಟುಂಬದ ಸ್ಪೆಶಲ್ ಸ್ಟೋರಿ

ಸದ್ಯದಲ್ಲೇ ಅಣ್ಣನ ಬರ್ತಡೇ ಇದೆ‌. ನಾವಿಬ್ಬರು ಅಣ್ಣ ತಮ್ಮ ಒಂದೇ ತಿಂಗಳಿನಲ್ಲಿ ಹುಟ್ಟಿದ್ವಿ. ಈಗ ನನ್ನ ಮಗಳು ಮತ್ತು ಅಣ್ಣನ ಮಗನೂ ಒಂದೇ ತಿಂಗಳಿನಲ್ಲಿ ಹುಟ್ಟಿದ್ದಾರೆ. ಇದು ಸರ್ಜಾ ಕುಟುಂಬದ ಬಾಂಡಿಂಗ್ ಹಾಗೂ ವಿಶೇಷತೆ ಎಂದಿದ್ದಾರೆ. ಅಲ್ಲದೇ ಸದ್ಯದಲ್ಲೇ ನನ್ನ ಪಾಲಿಗೆ ವಿಐಪಿಗಳಾದ ಅಭಿಮಾನಿಗಳಿಗೆ ನನ್ನ ಮಗಳ ದರ್ಶನ ಮಾಡಿಸುತ್ತೇನೆ ಎಂದು ಧ್ರುವ್ ಸರ್ಜಾ ಹೇಳಿದ್ದಾರೆ. ಸದ್ಯ ಧ್ರುವ್ ಸರ್ಜಾ ಮಗಳ ಆರೈಕೆಗಾಗಿ ಶೂಟಿಂಗ್ ನಿಂದ ಬಿಡುವು ಪಡೆದುಕೊಂಡಿದ್ದಾರೆ. ಅಂದಹಾಗೇ ಅಕ್ಟೋಬರ್ 6 ರಂದು ಧ್ರುವ್ ಸರ್ಜಾ ಹುಟ್ಟುಹಬ್ಬವಿದೆ.

Grandmother and brother’s separation is bitter: Dhruva Sarja says no lavish birthday

Comments are closed.