ಸೋಮವಾರ, ಏಪ್ರಿಲ್ 28, 2025
HomeCinemaRashmika Mandanna : ನೆಗೆಟಿವಿಟಿಗೆ ತಲೆಕೆಡಿಸಿಕೊಳ್ಳಬೇಡಿ: ಟ್ರೋಲರ್ ಗಳಿಗೆ ಟಾಂಟ್ ಕೊಟ್ಟ ರಶ್ಮಿಕಾ ಮಂದಣ್ಣ

Rashmika Mandanna : ನೆಗೆಟಿವಿಟಿಗೆ ತಲೆಕೆಡಿಸಿಕೊಳ್ಳಬೇಡಿ: ಟ್ರೋಲರ್ ಗಳಿಗೆ ಟಾಂಟ್ ಕೊಟ್ಟ ರಶ್ಮಿಕಾ ಮಂದಣ್ಣ

- Advertisement -

ಸ್ಯಾಂಡಲ್ ವುಡ್ ನಿಂದ ಸಿನಿ‌ಜರ್ನಿ ಆರಂಭಿಸಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಬಹುಭಾಷಾ ನಟಿ. ತೆಲುಗು, ತಮಿಳು ಹೀಗೆ ಹಲವು ಭಾಷೆಯಲ್ಲಿ ನಟಿಸ್ತಿರೋ ರಶ್ಮಿಕಾ ಸದ್ಯ ಬಾಲಿವುಡ್ ನಲ್ಲೂ ಬ್ಯುಸಿಯಾಗಿದ್ದಾರೆ‌‌. ಈ ಮಧ್ಯೆ ತಮ್ಮನ್ನು ಸದಾ ಕಾಡುವ ಗಾಸಿಪ್ ಹಾಗೂ ಟೀಕೆಗಳಿಗೆ ರಶ್ಮಿಕಾ ಸೋಷಿಯಲ್ ಮೀಡಿಯಾ ಸ್ಟೇಟಸ್ ಮೂಲಕವೇ ಉತ್ತರ ನೀಡಿದ್ದಾರೆ.

ಮೊದಲ ಸಿನಿಮಾ ಕಿರಿಕ್ ಪಾರ್ಟಿ ಯಿಂದ ಆರಂಭಿಸಿ ಇಲ್ಲಿಯವರೆಗೂ ನಟಿಸಿದ ಸಿನಿಮಾಗಳಿಗಿಂತ ವಿವಾದಗಳಿಂದಲೇ ಸುದ್ದಿ ಯಾದವರು ನಟಿ ರಶ್ಮಿಕಾ. ಹಾಕೋ ಬಟ್ಟೆಯಿಂದ ಆರಂಭಿಸಿ ಆಡಿದ ಪ್ರತಿ ಮಾತಿಗೂ ರಶ್ಮಿಕಾ ಟ್ರೋಲ್ ,ಟೀಕೆ ಎದುರಿಸಿದ್ದಾರೆ. ಹೀಗಾಗಿ ವಿವಾದ ಎಂದ್ರೇ ರಶ್ಮಿಕಾಗೆ ಅಚ್ಚುಮೆಚ್ಚು ಎಂಬಂತಾಗಿದೆ. ಆದರೆ ಈ ವಿವಾದಗಳಿಂದ ರಶ್ಮಿಕಾ ಎಂದಿಗೂ ವಿಚಲಿತರಾಗಿಲ್ಲ. ಬದಲಾಗಿ ತಮ್ಮನ್ನು ತಾವು ಮೋಟಿವೇಟ್ ಮಾಡಿಕೊಂಡು ಮುನ್ನಡೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಈಗ ರಶ್ಮಿಕಾ ಸಖತ್ ಸ್ಟೈಲಿಶ್ ಪೋಟೋ ಜೊತೆ ಪಾಸಿಟಿವ್ ಕೋಟ್ ಶೇರ್ ಮಾಡಿದ್ದಾರೆ.

ಖುಷಿಯಾಗಿರಿ ಸ್ನೇಹಿತರೇ, ಎಂದಿರುವ ರಶ್ಮಿಕಾ, ಎಂದಿಗೂ ಆಶಾವಾದ ಬಿಡಬೇಡಿ. ನಿಮ್ಮ ಖುಷಿ ಹಾಗೂ ಮನಃಶಾಂತಿ ಎಲ್ಲದಕ್ಕಿಂತಲೂ ಮುಖ್ಯ. ನೆಗೆಟಿವ್ ವಿಚಾರ ಹಾಗೂ ಸಂಗತಿಗಳಿಗೆ ಗಮನ ಕೊಡುವಷ್ಟು ಬದುಕು ದೊಡ್ಡದಾಗಿಲ್ಲ. ಬದುಕು ತುಂಬ ಚಿಕ್ಕದು ಎಂದಿದ್ದಾರೆ. ಇನ್ನು ರಶ್ಮಿಕಾ ಹಂಚಿಕೊಂಡಿರೋ ಈ ಬೋಲ್ಡ್ ಪೋಟೋ ಹಾಗೂ ಸ್ಟೇಟಸ್ ಗೆ ಸಖತ್ ಕಮೆಂಟ್ ಹರಿದು ಬಂದಿದ್ದು, ಸಾವಿರಾರು ಜನರು ರಶ್ಮಿಕಾ ಹೇಳಿಕೆಯನ್ನು ಮೆಚ್ಚಿದ್ದಾರೆ.

ಮೊನ್ನೆ ಮೊನ್ನೆ ರಶ್ಮಿಕಾ ಕಾಂತಾರ ಸಿನಿಮಾ ನೋಡುವ ವಿಚಾರಕ್ಕೆ ಸುದ್ದಿಯಾಗಿದ್ದರು. ಸಿನಿಮಾ ನೋಡಲು ಸಮಯವಿಲ್ಲ ಎಂದಿದ್ದು, ತಮ್ಮನ್ನು ಲಾಂಚ್ ಮಾಡಿದ ರಿಶಬ್ ಶೆಟ್ಟಿ ಬ್ಯಾನರ್ ಬಗ್ಗೆ ಮಾತನಾಡಲು ಹಿಂಜರಿದಿದ್ದು ಎಲ್ಲವೂ ಕೂಡ ವಿವಾದಕ್ಕೆ ಕಾರಣವಾಗಿತ್ತು. ಈ ಹಿಂದೆಯೂ ಪುನೀತ್ ನಿಧನದ ವೇಳೆಯಲ್ಲಿ ರಶ್ಮಿಕಾ ಟ್ವೀಟ್ ಅಥವಾ ಪುನೀತ್ ಅಂತಿಮ ದರ್ಶನಕ್ಕೆ ಬರದೇ ಇರೋದು ಹೀಗೆ ಎಲ್ಲವೂ ಕೂಡ ರಶ್ಮಿಕಾ ಮೇಲೆ ಕನ್ನಡಿಗರು ಮುನಿಸಿಕೊಳ್ಳುವಂತೆ ಮಾಡಿತ್ತು.

ಸದ್ಯ ಮಿಶನ್ ಮಜ್ನು ಹಾಗೂ ಗುಡ್ ಬೈ ಎರಡು ಬಾಲಿವುಡ್‌ ಸಿನಿಮಾ ಮುಗಿಸಿರೋ ರಶ್ಮಿಕಾ ಸಾಕಷ್ಟು ಭಾಷೆಯ ಸಿನಿಮಾಗಳ ಜೊತೆ ಬ್ಯುಸಿಯಾಗಿದ್ದಾರೆ. ಮಾತ್ರವಲ್ಲ ತಮ್ಮದೇ ಯೂ ಟ್ಯೂಬ್ ಚಾನೆಲ್ ಮೂಲಕವೂ ಅಭಿಮಾನಿಗಳ ಮನಮುಟ್ಟುತ್ತಿದ್ದಾರೆ.

ಇದನ್ನೂ ಓದಿ : Raveena Tandon : “ಚೂರು ಬಟ್ಟೆ ಹರಿಯದೇ ಬಲತ್ಕಾರದ ಸನ್ನಿವೇಶದಲ್ಲಿ ನಟಿಸಿದವಳು ನಾನೊಬ್ಳೆ”: ರವೀನಾ ಟಂಡನ್

ಇದನ್ನೂ ಓದಿ : ಬಾಲಿವುಡ್‌ ನವದಂಪತಿಗಳಾದ ಸಿದ್ಧಾರ್ಥ್,ಕಿಯಾರಾ ಜೋಡಿ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ

English News Click Here

Don’t mind the negativity Actress Rashmika Mandanna taunts trollers

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular