BMTC Electric bus : ವೋಲ್ವೋ ಬಿಟ್ಟು ಎಲೆಕ್ಟ್ರಿಕಲ್ ಬಸ್: ನಷ್ಟ ಸರಿತೂಗಿಸಲು ಬಿಎಂಟಿಸಿ ಪ್ಲ್ಯಾನ್

ಬೆಂಗಳೂರು : (News Next Kannada Desk) ಕೊರೋನಾದ ಬಳಿಕ BMTC ಮುಳುಗುವ ಹಡಗಾಗಿತ್ತು. ಆದರೆ ಇತ್ತೀಚಿಗೆ ಬಿಎಂಟಿಸಿ ಕೊಂಚ ಚೇತರಿಕೆ ಕಾಣಲಾರಂಭಿಸಿತ್ತು. ಆದರೆ ಬಿಎಂಟಿಸಿ ಪಾಲಿಗೆ ವೋಲ್ವೋ ಬಸ್ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ನಿರ್ವಹಣೆ ಸಾದ್ಯವಾಗದ ಕಾರಣಕ್ಕೆ ವೋಲ್ವೋ ಬಸ್ ಖರೀದಿಗೆ ತಿಲಾಂಜಲಿ ಇಡಲು ಬಿಎಂಟಿಸಿ ನಿರ್ಧರಿಸಿದೆ. ಹೌದು ವೋಲ್ವೋ ಬಸ್ ಖರೀದಿಗೆ ತಿಲಾಂಜಲಿ ಇಡಲು ಸಾರಿಗೆ ನಿಗಮ ನಿರ್ಧರಿಸಿದೆ. ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್ (Electric bus) ಗಳಿಗೆ ಹೆಚ್ಚು ಒತ್ತು ನೀಡೋ ಉದ್ದೇಶದಿಂದ ಹಾಗೂ ವೋಲ್ವೋ ಬಸ್ ನ ನಿರ್ವಹಣೆ ವೆಚ್ಚದಿಂದ ತಪ್ಪಿಸಿಕೊಳ್ಳಲು ಇಲಾಖೆ ಈ ತೀರ್ಮಾನಕ್ಕೆ ಬಂದಿದೆ .

ಕೊರೊನಾ ಬಳಿಕ ಬೆಂಗಳೂರಿನಲ್ಲಿ ವೋಲ್ವೋ ಬಸ್ ಗಳಿಗೆ ಬೇಡಿಕೆಯೇ ಇಲ್ಲ. ಸಾಮಾನ್ಯವಾಗಿ ವೋಲ್ವೋ ಬಸ್ ಗಳು ಐಟಿ ಬಿಟಿ ಕಂಪನಿಗಳಿಗೆ ಗುತ್ತಿಗೆ ಆಧಾರದ ಮೇಲೆ ಹಾಗೂ ಐಟಿ ಬಿಟಿ ಕಂಪನಿಗಳು ಇರೋ ಮಾರ್ಗಗಳಲ್ಲಿ ಹೆಚ್ಚು ಸಂಚರಿಸುತ್ತಿತ್ತು.ಆದರೆ ಕೋವಿಡ್ ಬಳಿಕ ಅರ್ದದಷ್ಟು ಬಸ್ ನಿಂತಲ್ಲೆ ನಿಂತು ತುಕ್ಕು ಹಿಡಿಯುತ್ತಿವೆ. ಸದ್ಯ ಕೊರೋನಾ ಭೀತಿ ದೂರವಾಗಿದ್ದರೂ ಬೆಂಗಳೂರಿನ ಬಹುತೇಕ ಕಂಪನಿಗಳು ಇನ್ನೂ ವರ್ಕ್ ಫ್ರಂ ಹೋಂ ಮುಂದುವರೆಸಿವೆ. ಹೀಗಾಗಿ ವೋಲ್ವೋ ಬಸ್ ಗಳು ರಸ್ತೆಗಿಳಿದ್ರೂ ಕೇಳೋರಿಲ್ಲದಂತಾಗಿದೆ.

ಹೀಗಾಗಿ ಸಾರಿಗೆ ಇಲಾಖೆ ವೋಲ್ವೋ ಖರೀದಿಗೆ ಬ್ರೇಕ್ ಹಾಕಿ,ಮೂರು ಫೇಸ್ ನಲ್ಲಿ 921 ಹೊಸ ಎಲೆಕ್ಡ್ರಿಕ್‌ ಬಸ್ ಖರೀದಿಗೆ ಮುಂದಾಗಿದೆ. ಬಿಎಂಟಿಸಿಯಲ್ಲಿ ಒಟ್ಟು 860 ವೋಲ್ವೋ ಬಸ್ ಗಳಿದ್ದು, ಈ ಪೈಕಿ ಸುಮಾರು 70 ಬಿಎಸ್-3ಯ ಬಸ್ ರದ್ದಾಗಿದೆ. ಇದರಲ್ಲಿ 460 ವೋಲ್ವೋ ಬಸ್ಸುಗಳು ಮಾತ್ರ ಕಾರ್ಯನಿರ್ವಹಣೆ ಮಾಡ್ತಿವೆ. ಅಲ್ಲದೇ 125 ವಾಯುವಜ್ರ ಸಹ ಹೊಂದಿವೆ. 330 ವೋಲ್ವೋ ಬಸ್ಸುಗಳು ಇನ್ನೂ ರಸ್ತೆಗಿಳಿದಿಲ್ಲ.

ಕೇವಲ ಪ್ರಯಾಣಿಕರ ಕೊರತೆ ಮಾತ್ರವಲ್ಲ, ವೋಲ್ವೋ ಬಸ್ ಸಾರಿಗೆ ಇಲಾಖೆ ಪಾಲಿಗೆ ಹೊರೆಯಾಗೋದಿಕ್ಕೆ ಇನ್ನೊಂದು ಕಾರಣ ವೋಲ್ವೋ ಬಸ್ ಗಳು ಬೆಂಗಳೂರು ಟ್ರಾಫಿಕ್ ನಲ್ಲಿ ಮೈಲೈಜ್ ಕೊಡ್ತಿಲ್ಲ. ಹೀಗಾಗಿ ವೋಲ್ವೋ ಬಸ್ ನ ಅದಾಯಕ್ಕಿಂತ ಖರ್ಚೆ ಹೆಚ್ಷು ಎಂಬ ಸ್ಥಿತಿ ಇದೆ.ಹೀಗಾಗಿ 330 ಕ್ಕೂ ಅಧಿಕ ಬಸ್ ಗಳನ್ನು ನಿಲ್ಲಿಸಿರೋ ಸಾರಿಗೆ ಇಲಾಖೆ ಪರಿಸರಕ್ಕೆ ಹಾಗೂ ತನ್ನ ಬೊಕ್ಕಸಕ್ಕೆ ಸಹಾಯಕಾರಿಯಾಗಬಲ್ಲ ಎಲೆಕ್ಟ್ರಿಕ್ ಬಸ್ ಗಳ ಮೊರೆ ಹೋಗಿದೆ.

ಇದನ್ನೂ ಓದಿ : Bengaluru Airport Closed : ಬೆಂಗಳೂರು ವಿಮಾನ ನಿಲ್ದಾಣ 10 ದಿನಗಳ ಕಾಲ ಬಂದ್

ಇದನ್ನೂ ಓದಿ : BBMP News Advertisement proposal : ಆದಾಯ ಗಳಿಕೆಗೆ ಬಿಬಿಎಂಪಿ ಮಾಸ್ಟರ್ ಪ್ಲ್ಯಾನ್: ಜಾಹೀರಾತು ಬೈಲಾ ತಿದ್ದುಪಡಿಗೆ ಸಿದ್ಧತೆ

electric bus instead of Volvo buses BMTC plans to recover losses

Comments are closed.