Dr. Vishnuvardhan Death Anniversary : ಡಾ. ವಿಷ್ಣುವರ್ಧನ್‌ 13ನೇ ವರ್ಷದ ಪುಣ್ಯಸ್ಮರಣೆ : ಸಾಹಸಸಿಂಹನ ಸ್ಮರಣೆಯಲ್ಲಿ ಅಭಿಮಾನಿಗಳು

ಕನ್ನಡ ಸಿನಿರಂಗ ಖ್ಯಾತ ನಟ ಸಾಹಸಸಿಂಹ ಡಾ. ವಿಷ್ಣುವರ್ಧನ್‌ ಅಗಲಿ 13 ವರ್ಷ ಕಳೆದಿದೆ. ದೈಹಿಕವಾಗಿ ವಿಷ್ಣುದಾದ ನಮ್ಮೊಂದಿಗೆ ಇಲ್ಲದೇ ಇದ್ದರೂ ಅಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿದ್ದಾರೆ. ನಟ ವಿಷ್ಣುವರ್ಧನ್ ಪುಣ್ಯಸ್ಮರಣೆ (Dr. Vishnuvardhan Death Anniversary) ಹಿನ್ನಲೆಯಲ್ಲಿ ಸಿನಿರಂಗದ ಕಲಾವಿದರು, ಅಭಿಮಾನಿಗಳು, ರಾಜಕೀಯ ಗಣ್ಯರು ಸ್ಮರಿಸುತ್ತಿದ್ದಾರೆ.

ನಟ ವಿಷ್ಣುವರ್ಧನ್‌ 51 ವರ್ಷದ ಹಿಂದೆ “ವಂಶವೃಕ್ಷ” ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿಮಾಲೋಕಕ್ಕೆ ಕಾಲಿಟ್ಟಿದ್ದಾರೆ. ಮರುವರ್ಷ ತೆರೆಗೆ ಬಂದ ನಾಗರಹಾವು ಸಿನಿಮಾದಲ್ಲಿ ರಾಮಾಚಾರಿ ಆಗಿ ದಾದಾ ಸ್ಟಾರ್‌ ಪಟ್ಟಕ್ಕೆ ಏರಿದ್ದರು. ಅಲ್ಲಿಂದ ಮುಂದೆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ವಿಷ್ಣುವರ್ಧನ್‌ ಅಭಿಮಾನಿಗಳ ಮನಗೆದ್ದಿದ್ದಾರೆ. ಬೂತಯ್ಯನ ಮಗ ಅಯ್ಯು, ಬಂಧನ, ಮುತ್ತಿನ ಹಾರ, ಸಾಹಸಸಿಂಹ, ಯಜಮಾನ, ಆಪ್ತಮಿತ್ರ, ಆಪ್ತರಕ್ಷಕ ಸೇರಿದಂತೆ ಸಾಕಷ್ಟು ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಪುಣ್ಯಸ್ಮರಣೆಯ ಹಿನ್ನಲೆಯಲ್ಲಿ ಅಭಿಮಾನಿಗಳು ಅಭಿಮಾನ್‌ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ರಾಜ್ಯಾದಾದ್ಯಂತ ಅಭಿಮಾನಿಗಳ ದಂಡೆ ಹರಿದು ಬಂದು ಸಮಾಜಮುಖಿ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಂಡಿದ್ದಾರೆ. ಅದರೊಂದಿಗೆ ವಿಷ್ಣು ನಮ್ಮನ್ನಗಲಿ ದಶಕ ಕಳೆದರೂ ಅವರಿಗೆ ಸಿಗಬೇಕಾದ ಗೌರವ, ಸ್ಥಾನಮಾನ ಸಿಗಲೇ ಇಲ್ಲ ಎನ್ನುವುದು ಅಭಿಮಾನಿಗಳ ಆರೋಪ ಆಗಿತ್ತು. ಕೊನೆಗೂ ಮೈಸೂರಿನಲ್ಲಿ ವಿಷ್ಣುವರ್ಧನ್‌ ಭವ್ಯ ಸ್ಮಾರಕ ನಿರ್ಮಾಣವಾಗಿದ್ದು, ಇದೀಗ ಲೋಕಾರ್ಪಣೆಗೆ ಸಿದ್ಧವಾಗಿದೆ.

ಅಭಿಮಾನಿಗಳು ವಿಷ್ಣುವರ್ಧನ್‌ ಸಮಾಧಿಗೆ ಪೂಜೆ ಸಲ್ಲಿಸಿದರೆ ಕುಟುಂಬ ಸದಸ್ಯರು ಮೈಸೂರಿನಲ್ಲಿ ವಿಷ್ಣು ಸ್ಮಾರಕದ ಬಳಿ ಪೂಜೆ ಸಲ್ಲಿಸುತ್ತಿದ್ದಾರೆ. ವಿಷ್ಣುವರ್ಧನ್‌ ಪತ್ನಿ ಭಾರತಿ, ಮಗಳು ಕೀರ್ತಿ, ಅಳಿಯ ಅನಿರುದ್ಧ ಮೈಸೂರಿಗೆ ಹೋಗಿ, ಸ್ಮಾರಕದ ಬಳಿ ವಿಷ್ಣುದಾದಾನ ಪೋಟೋ ಇಟ್ಟು ಪೂಜೆ ಸಲ್ಲಿಸುತ್ತಿದ್ದಾರೆ. ಕಳೆದ ಸುಮಾರು ವರ್ಷಗಳಿಂದ ಕುಟುಂಬ ಸದಸ್ಯರು ಅಭಿಮಾನಿಗಳೊಂದಿಗೆ ಅಲ್ಲೆ ಪೂಜೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ : Pathaan Controversy : ಪಠಾಣ್‌ ಸಿನಿಮಾದ ಕೆಲವು ದೃಶ್ಯ, ಹಾಡಿನಲ್ಲಿ ಬದಲಾವಣೆ ಮಾಡಲು ಸಲಹೆ ನೀಡಿದ ಸೆನ್ಸಾರ್‌ ಮಂಡಳಿ

ಇದನ್ನೂ ಓದಿ : Vallabhaneni Janardhan: ತೆಲುಗು ಚಿತ್ರರಂಗದ ಹಿರಿಯ ಕಲಾವಿದ ವಲ್ಲಭನೇನಿ ಜನಾರ್ಧನ್‌ ಇನ್ನಿಲ್ಲ

ಇದನ್ನೂ ಓದಿ : Kangana Ranaut: ತನ್ನ ಪ್ರೇಮಕಥೆಯಲ್ಲಿ ‘ಪ್ರೀತಿ’ಯೇ ಇರಲಿಲ್ಲ ಅನ್ನೋದನ್ನು ಯಾವ ಹೆಣ್ಣು ಕೂಡಾ ಸಹಿಸಲ್ಲ; ನಟಿ ಕಂಗನಾ ಹೀಗಂದಿದ್ಯಾಕೆ..?

ಕರ್ನಾಟಕದ ಮನೆಮನಗಳಲ್ಲಿ ಸಾಹಸಸಿಂಹ ವಿಷ್ಣುವರ್ಧನ್‌ ಕಲೆ ಸದಾ ಜೀವಂತವಾಗಿರುತ್ತದೆ. ನಟ ವಿಷ್ಣುವರ್ಧನ್‌ ಅವರಿಗೆ ಕನ್ನಡನಾಡಿನ ಮೇಲಿನ ಪ್ರೀತಿ, ಭಾಷಾಭಿಮಾನ ಹಾಗೂ ಅಭಿಮಾನಿಗಳಿಗೆ ಅವರು ನೀಡುತ್ತಿರುವ ಗೌರವ ಎಲ್ಲರಿಗೂ ಪ್ರೇರಣೆ ಆಗಿದೆ. ಹಾಗಾಗಿ ಡಾ.ವಿಷ್ಣುವರ್ಧನ್‌ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ಸಿನಿಗಣ್ಯರು, ರಾಜಕೀಯದವರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಪುಣ್ಯಸ್ಮರಣೆಗೆ ನಮನವನ್ನು ಸಲ್ಲಿಸುತ್ತಿದ್ದಾರೆ.

Dr. Vishnuvardhan Death Anniversary : Dr. Vishnuvardhan 13th Year Commemoration: Fans remember the legendary lion

Comments are closed.