ಸ್ಯಾಂಡಲ್‌ವುಡ್ ನಲ್ಲಿ ನಿರ್ದೇಶಕ ಜೋಗಿ ಪ್ರೇಮ್ ಅಡ್ಡಾದಲ್ಲಿ ಸದಾ ಒಂದಿಲ್ಲೊಂದು ಸ್ಪೆಶಲ್ ಹಾಗೂ ಡಿಫ್ರೆಂಟ್ ಕಾನ್ಸೆಪ್ಟ್ ಸಿನಿಮಾಗಳು ಸದ್ದು ಮಾಡುತ್ತವೆ. ಇದೀಗ ಅಂತಹುದೇ ಡೆಡ್ಲಿ ಕಾಮಿನೇಶನ್ ಜೊತೆ ಪ್ರೇಮ್ ಅಭಿಮಾನಿಗಳ ಮುಂದೇ ಬರಲು ಸಿದ್ಧವಾಗಿದ್ದಾರೆ. ನಿರ್ದೇಶಕ ಪ್ರೇಮ್ ( Jogi Prem ) ತಮ್ಮ 9 ನೇ ಸಿನಿಮಾಗೆ ಅದ್ದೂರಿ ಹುಡುಗ, ಪೊಗರಿನ ನಾಯಕ ಧ್ರುವ ಅವರನ್ನು (Druva Sarja Sanjay Dutt ) ಆಯ್ಕೆ ಮಾಡಿಕೊಂಡಿದ್ದಾರೆ. ಆಕ್ಷ್ಯನ್ ಪ್ರಿನ್ಸ್ ಧ್ರುವ ಸರ್ಜಾ ಆರನೇ ಸಿನಿಮಾ ಪ್ರೇಮ್ ಜೊತೆ ಅನ್ನೋದು ಈಗಾಗಲೇ ಅನೌನ್ಸ್ ಆಗಿದೆ.
ಎಲ್ಲ ಮೂರು ಅಕ್ಷರಗಳ ಸಿನಿಮಾದಲ್ಲೇ ಮಿಂಚಿರೋ ನಾಯಕ ಧ್ರುವ್ ಸರ್ಜಾ ಪ್ರೇಮ್ ನಿರ್ದೇಶನದಲ್ಲಿ ಯಾವ ಟೈಟಲ್ ನಲ್ಲಿ ತೆರೆಗೆ ಬರ್ತಾರೆ ಅನ್ನೋದು ಇನ್ನು ರಿವೀಲ್ ಆಗಿಲ್ಲ. ಆದರೆ ನಿರ್ದೇಶಕ ಪ್ರೇಮ್ ಧ್ರುವ್ ಗಾಗಿ ಯೂನಿಕ್ ಟೈಟಲ್ ವೊಂದನ್ನು ಹುಡುಕಿಟ್ಟಿರೋದಂತು ಸತ್ಯ. ಧರ್ನುಮಾಸದ ಬಳಿಕ ಸಂಕ್ರಾತಿ ವೇಳೆಗೆ ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಮಿನೇಶನ್ ಸಿನಿಮಾ ಸೆಟ್ಟೇರಲಿದೆ. ಸದ್ಯ ಧ್ರುವ್ ಸರ್ಜಾ ಮಾರ್ಟಿನ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಮಾರ್ಟಿನ್ ಕೂಡ ಧ್ರುವ ಸರ್ಜಾ ನಟನೆಯ ಬಹುನೀರಿಕ್ಷಿತ ಚಿತ್ರವಾಗಿದೆ. ಈ ಸಿನಿಮಾ ಶೂಟಿಂಗ್ ಇನ್ನೊಂದು ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ.
ಈ ಸಿನಿಮಾ ಪೂರ್ಣಗೊಂಡ ಮೇಲೆ ಧ್ರುವ್ ಸರ್ಜಾ ಪ್ರೇಮ್ ಅಡ್ಡಾಕ್ಕೆ ಎಂಟ್ರಿಕೊಡಲಿದ್ದಾರೆ. ಯಾಕಂದರೇ ಪ್ರೇಮ್ ತಮ್ಮ ಸಿನಿಮಾದಲ್ಲಿ ಧ್ರುವಸರ್ಜಾ ಗ್ಯಾಂಗ್ ಸ್ಟರ್ ರೀತಿ ತೋರಿಸಲಿದ್ದು ಇದಕ್ಕಾಗಿ ಧ್ರುವ ಸರ್ಜಾ ಲುಕ್ ಕೂಡ ಬದಲಾಗಲಿದೆಯಂತೆ. ಇನ್ನೊಂದೆಡೆ ಈ ಸಿನಿಮಾದ ಮೂಲಕ ಮತ್ತಷ್ಟು ಹೊಸ ದಾಖಲೆ ಬರೆಯಲು ಹೊರಟಿರೋ ನಿರ್ದೇಶಕ ಪ್ರೇಮ್ ವಿಲನ್ ಪಾತ್ರಕ್ಕೆ ಕೆಜಿಎಫ್ ಅಧೀರನ ಮೇಲೆ ಕಣ್ಣಿಟ್ಟಿದ್ದಾರಂತೆ.
ಕೆಜಿಎಫ್ ನಲ್ಲಿ ಮಿಂಚಿದ ಅಧೀರನ ಪಾತ್ರಧಾರಿ ಸಂಜಯ್ ದತ್ ರನ್ನು ಧ್ರುವ ಸರ್ಜಾ ಎದುರು ವಿಲನ್ ಮಾಡಿ ತೆರೆಗೆ ತರೋದು ಪ್ರೇಮ್ ಉದ್ದೇಶ.ಇದಕ್ಕಾಗಿ ಈಗಾಗಲೇ ಸಂಜಯ್ ದತ್ ಜೊತೆ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆ ಎನ್ನಲಾಗಿದೆ. ಸದ್ಯ ಪ್ರೇಮ್ ತಮ್ಮ ಬಾಮೈದ ರಾಣಾನ ಏಕ್ ಲವ್ ಯಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಜನವರಿ ಬಳಿಕ ಧ್ರುವ ಸರ್ಜಾ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಲಿದೆ.
ವಿಭಿನ್ನವಾದ ವಿಲನ್ ಪಾತ್ರ ಸೃಷ್ಟಿಸೋಕೆ ಹೊರಟ ನಿರ್ದೇಶಕ ಪ್ರೇಮ್ ಇದಕ್ಕಾಗಿ ಬಾಲಿವುಡ್ ನಟ ಅಜಯ್ ದೇವಗನ್ ರನ್ನು ಸಂಪರ್ಕಿಸಿದ್ದರಂತೆ. ಆದರೆ ಡೇಟ್ಸ್ ಸಮಸ್ಯೆಯಿಂದ ಅಜಯ್ ಈ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲವಂತೆ ಹೀಗಾಗಿ ಈ ಅಧೀರ್ ಪಾತ್ರದ ಮೂಲಕ ಮೋಡಿ ಮಾಡಿದ ಸಂಜಯ್ ದತ್ ರನ್ನು ಸಿನಿಮಾದಲ್ಲಿ ಅಬ್ಬರಿಸುವಂತೆ ಮಾಡಲು ಪ್ರೇಮ್ ಪ್ಲ್ಯಾನ್ ಮಾಡಿದಂತಿದೆ.
ಇದನ್ನೂ ಓದಿ : Laka Laka Lamborghini : ಲ್ಯಾಂಬೋರ್ಗಿನಿಯಲ್ಲಿ ಗುಳಿಕೆನ್ನೆ ಬೆಡಗಿ: ರ್ಯಾಪರ್ ಗೆ ಜೊತೆಯಾದ ರಚಿತಾರಾಮ್
ಇದನ್ನೂ ಓದಿ : Oo Antava Pushpa Songs : ಐಕಾನ್ ಸ್ಟಾರ್ ಜೊತೆ ಸಮಂತಾ ರೋಮಾನ್ಸ್ : ದಾಖಲೆ ಬರೆದ ಐಟಂ ಸಾಂಗ್
( Druva Sarja Sanjay Dutt will join Jogi Prem in the new movie)