Manaohari gold tea : ಬರೋಬ್ಬರಿ 99,999 ರೂಪಾಯಿಗೆ ಮಾರಾಟವಾಯ್ತು ಮನೋಹರಿ ಟೀ ಪುಡಿ..!

ಆಸ್ಸಾಂನ ಪ್ರಸಿದ್ಧ ಮನೋಹರಿ ಗೋಲ್ಡ್​ ಟೀ ಪೌಡರ್​​ (Manaohari gold tea) ಪ್ರತಿಬಾರಿಯಂತೆ ಈ ಬಾರಿ ಕೂಡ ಇತಿಹಾಸವನ್ನು ಸೃಷ್ಟಿಸಿದೆ. ಗುವಾಹಟಿ ಮೂಲದ ವಿಷ್ಣು ಟೀ ಕಂಪನಿಯು 1 ಕೆಜಿ ಮನೋಹರಿ ಚಹ ಪುಡಿಯನ್ನು ಬರೋಬ್ಬರಿ 99,999 ರೂಪಾಯಿಗೆ ಖರೀದಿ ಮಾಡಿದೆ. ಈ ಮೂಲಕ ಮನೋಹರಿ ಗೋಲ್ಡ್​ ಟೀ ಪೌಡರ್​ ತನ್ನ ಹಳೆಯ ದಾಖಲೆಯನ್ನು ಮುರಿದಿದೆ.

ಹರಾಜಿನಲ್ಲಿ ಸೌರವ್​​ ಟೀ ಟ್ರೇಡರ್ಸ್​ ಕಂಪನಿಯು 99999 ರೂಪಾಯಿಗೆ ಚಹ ಪುಡಿಯನ್ನು ಬಿಡ್​ ಮಾಡಿತ್ತು. ಇದನ್ನು ವಿಷ್ಣು ಟೀ ಕಂಪನಿ ಖರೀದಿ ಮಾಡಿದೆ. ಕಳೆದ ವರ್ಷ ಮನೋಹರಿ ಗೋಲ್ಡ್​ ಟೀ ಪುಡಿಯನ್ನು ಕಂಟೆಂಪರೆರಿ ಬ್ರೋಕರ್ಸ್​ ಪ್ರೈವೇಟ್​ ಲಿಮಿಟೆಡ್​​ ಹರಾಜಿಗಿಟ್ಟಿತ್ತು. ಈ ವೇಳೆ 1 ಕೆಜಿ ಚಹಾಪುಡಿ 75 ಸಾವಿರ ರೂಪಾಯಿಗೆ ಮಾರಾಟವಾಗಿತ್ತು. ಇದೀಗ ಈ ದಾಖಲೆಯನ್ನು ಮುರಿದು ಮನೋಹರಿ ಮತ್ತೊಮ್ಮೆ ಹೊಸ ದಾಖಲೆಯನ್ನು ಸೃಷ್ಟಿಸಿದೆ.


ಮನೋಹರಿ ಗೋಲ್ಡ್​ ಟೀ ವಿಶೇಷ ಕಾರಣಗಳಿಂದ ಈ ರೀತಿಯ ಪ್ರಸಿದ್ಧಿಯನ್ನು ಪಡೆದಿದೆ. ಚಹಾ ಗಿಡದ ಕುಡಿಯಿಂದ ಇದನ್ನು ತಯಾರಿಸಲಾಗುತ್ತದೆ. ಮತ್ತೊಂದು ವಿಶೇಷ ಅಂದರೆ ಮುಂಜಾನೆ 4 ರಿಂದ 6 ಗಂಟೆಯವರೆಗೆ ಮಾತ್ರ ಈ ಕುಡಿಯನ್ನು ಕೊಯ್ಯಲಾಗುತ್ತದೆ. ಇದನ್ನು ಭಾರತದ ಅತ್ಯಂತ ದುಬಾರಿ ಚಹ ಪುಡಿ ಎಂದು ಕರೆಯಲಾಗುತ್ತದೆ. ಆಸ್ಸಾಂನ ಮನೋಹರಿ ಚಹಾ ಪುಡಿಗೆ ವಿದೇಶಗಳಲ್ಲೂ ಭಾರೀ ಬೇಡಿಕೆ ಇದೆ .

ಇದನ್ನು ಓದಿ : Mother Killed Baby : ಮಗುವಿನ ಅಳು ಸಹಿಸಲಾರದೇ ಗೋಡೆಗೆ ಜಜ್ಜಿ ಕೊಂದ ಪಾಪಿ ತಾಯಿ..!

ಇದನ್ನೂ ಓದಿ: Corona Mask Test : ಇನ್ಮುಂದೆ ಮಾಸ್ಕ್ ಮೂಲಕವೂ ಕೋವಿಡ್ ಪತ್ತೆಹಚ್ಚಬಹುದು

Manaohari gold tea powder sold rupess 99999 in auction set record

Comments are closed.