KGF Babu Dream : ಕೋಟಿ ಒಡೆಯನಿಗೆ ಸೋಲು ಕಟ್ಟಿ ಕೊಟ್ಟ ಬಿಜೆಪಿ : ಕನಸಾಗೇ ಉಳಿತು ಕೆಜಿಎಫ್ ಬಾಬು ಪರಿಷತ್ ಕನಸು

ಬೆಂಗಳೂರು : ವಿಧಾನ ಪರಿಷತ್ ಅನ್ನೋದು ಬುದ್ಧಿವಂತರ, ರಾಜಕೀಯ ತಜ್ಞರ ಮನೆ ಅನ್ನೋ ಮಾತಿತ್ತು. ಆದರೆ ಕಾಲ‌ಬದಲಾದಂತೆ ವಿಧಾನಪರಿಷತ್ ( MLC Election ) ವ್ಯಾಖ್ಯಾನವೂ ಬದಲಾಗಿದೆ. ಅದರಲ್ಲೂ ಈ ಭಾರಿ ವಿಧಾನ ಪರಿಷತ್ ಬೆಂಗಳೂರು ನಗರ ಕ್ಷೇತ್ರದ ಟಿಕೇಟ್ ಹಂಚಿಕೆ ಬಳಿಕವಂತೂ ಕಾಂಗ್ರೆಸ್ ಟಿಕೆಟ್ ಪಡೆದ ಅಭ್ಯರ್ಥಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಆದರೆ ಕೊನೆಗೂ ಕಾಂಗ್ರೆಸ್ ಹಣಬಲ ಹಾಗೂ ಬಿಜೆಪಿ ಪಕ್ಷ ನಿಷ್ಠೆ ನಡುವಿನ ಫೈಟ್ ನಲ್ಲಿ ಬಿಜೆಪಿ ಗೆದ್ದಿದ್ದು ಕೋಟಿ ಒಡೆಯ ಕೆಜಿಎಫ್ ಬಾಬು (KGF Babu Dream) ಸೋತು ಸುಣ್ಣವಾಗಿದ್ದಾರೆ.

ಬೆಂಗಳೂರು ನಗರ ಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ ಕೆಜಿಎಫ್ ಬಾಬು ಅಲಿಯಾಸ್ ಯುಶೂಫ್ ಶರೀಫ್ ಗೆ ಟಿಕೆಟ್ ನೀಡಿತ್ತು. ಕೆಜಿಎಫ್ ಬಾಬು ಅಧಿಕೃತವಾಗಿಯೇ 1743 ಕೋಟಿ ರೂಪಾಯಿ ಆಸ್ತಿ ಘೋಷಣೆ ಮಾಡಿಕೊಂಡಿದ್ದರು.‌ಮಾತ್ರವಲ್ಲ ಹಣಬಲದಿಂದಲೇ ಮತವನ್ನು ಖರೀದಿಸುವ ಮಾತನ್ನಾಡಿದ್ದರು.

ಆದರೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಕೆಜಿಎಫ್ ಬಾಬು ಹಾಗೂ ಬಿಜೆಪಿಯ ಎಚ್.ಎಸ್.ಗೋಫಿನಾಥ್ ನಡುವೆ ನೇರ ಹಣಾಹಣಿ ನಡೆದಿತ್ತು.‌ಕೊನೆಗೂ ಕೆಜಿಎಫ್ ಬಾಬು ಸೋತು ಸೊರಗಿದ್ದಾರೆ. ದುಬಾರಿ ಕಾರಿನಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದ ಕೆಜಿಎಫ್ ಬಾಬು ಕೊನೆಗೆ‌ ಮತ ಏಣಿಕೆ ಕ್ಷೇತ್ರದಿಂದ ಅಟೋದಲ್ಲಿ ತೆರಳಿದ್ದಾರೆ. ಕೆಜಿಎಫ್ ಬಾಬು ಹಿನ್ನೆಲೆ ಇಟ್ಟುಕೊಂಡು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿತ್ತು. ಅದರಲ್ಲೂ ಸಚಿವ ಎಸ್.ಟಿ.ಸೋಮಶೇಖರ್ ಮಗಳ ಮೇಲೆ ಅತ್ಯಾಚಾರದ ಆರೋಪ ಹೊತ್ತಿರುವ ಕೆಜಿಎಫ್ ಬಾಬುಗೆ ಕಾಂಗ್ರೆಸ್ ಟಿಕೇಟ್ ನೀಡಿದೆ ಎಂದು ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದರು.

ಈ ವಿಚಾರದಿಂದ ಕಾಂಗ್ರೆಸ್ ಗೆ ತೀವ್ರ ಹಿನ್ನಡೆಯಾಗಿತ್ತು. ಅಲ್ಲದೇ ಈ ಅಭ್ಯರ್ಥಿ ಬಗ್ಗೆ ಅಸಮಧಾನ ಹೊಂದಿದ್ದ ಮಾಜಿಸಿಎಂ ಸಿದ್ಧ ರಾಮಯ್ಯ ಕೂಡ ಪ್ರಚಾರಕ್ಕೆ ಬಂದಿರಲಿಲ್ಲ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ್ದ ಕೆಜಿಎಫ್ ಬಾಬು ತಮ್ಮ‌ಮೇಲೆ ಬಂದಿದ್ದ ಆರೋಪಗಳಿಗೆ ಸ್ಪಷ್ಟನೆ ನೀಡಿ ಕಣ್ಣೀರು ಹಾಕಿದ್ದರು. ಆದರೆ ಕಾಂಗ್ರೆಸ್ ನ ಈ ಪ್ರಯತ್ನಗಳೆಲ್ಲ ಕೈಕೊಟ್ಟಿದೆ. ಹಣಬಲದಿಂದ ಚುನಾವಣೆ ಗೆಲ್ಲಲು ಹೊರಟಿದ್ದ ಕೆಜಿಎಫ್ ಬಾಬು ಒಂದೆಡೆಯಾದರೇ ಇನ್ನೊಂದೆಡೆ ನಿಷ್ಟೆಯಿಂದ ಪಕ್ಷಕ್ಕಾಗಿ‌ ದುಡಿದಿದ್ದ ಎಚ್.ಎಸ್.ಗೋಫಿನಾಥ್ ಕಣದಲ್ಲಿದ್ದರು.

ಬಿಜೆಪಿ ಕಾರ್ಯಕರ್ತರ ಸಂಘಟಿತ ಪ್ರಯತ್ನ ಹಾಗೂ ಕೆಜಿಎಫ್ ಬಾಬು ನಡುವಿನ ಫೈಟ್ ನಲ್ಲಿ ಕೊನೆಗೂ ಕಮಲ ಪಾಳಯದವರು ಗೆದ್ದಿದ್ದು ಕೋಟಿ ಬಾಬು ಗೆ ಬಿಜೆಪಿ ಸೋಲುಣಿಸಿದೆ. ಮಾತ್ರವಲ್ಲ ಕೋಟಿ ಒಡೆಯನ ಪರಿಷತ್ ಕನಸಿಗೆ ಬಿಜೆಪಿ ತಣ್ಣೀರೆರಚಿದೆ.

ಇದನ್ನೂ ಓದಿ : Kota – Bhandary : ವಿಧಾನ ಪರಿಷತ್‌ ಚುನಾವಣೆ : ಕೋಟ ಶ್ರೀನಿವಾಸ ಪೂಜಾರಿ, ಮಂಜುನಾಥ್‌ ಭಂಡಾರಿಗೆ ಭರ್ಜರಿ ಗೆಲುವು

ಇದನ್ನೂ ಓದಿ : Monkey Viral Video : ಕೋತಿಮರಿ ಉಳಿಸಲು ಬಾಯಿಗೆ ಬಾಯಿಟ್ಟು ಗಾಳಿ ಊದಿದ ಕಾರು ಚಾಲಕ; ಮಾನವೀಯತೆಗೆ ಪ್ರಶಂಸೆ ವ್ಯಕ್ತಪಡಿಸಿದ ನಟ ಸೂರ್ಯ

( KGF Babu Dream Not fulfill in MLC Election)

Comments are closed.