Ek Love Ya Rachita Ram : ಪ್ರೇಮ್ ಅಡ್ಡಾದಲ್ಲಿ ಗುಳಿಕೆನ್ನೆ ಚೆಲುವೆ ಫುಲ್ ಡ್ಯಾನ್ಸ್: ಸಾಂಗ್ ನಲ್ಲೇ ಮದುವೆ ಗುಟ್ಟುಬಿಟ್ಟುಕೊಟ್ಟ ರಚಿತಾರಾಮ್

ಸ್ಯಾಂಡಲ್ ವುಡ್ ನಲ್ಲಿ ನಿರ್ದೇಶಕ‌ ಜೋಗಿ ಖ್ಯಾತಿಯ ಪ್ರೇಮ್ ಗೆ ತಮ್ಮದೇ ಆದ ವಿಶಿಷ್ಟ ಸ್ಥಾನವಿದೆ. ಮತ್ತೊಮ್ಮೆ ಪ್ರೇಮ್ ಅಂತಹುದೇ ವಿಶಿಷ್ಠತೆಯೊಂದಿಗೆ ಮ್ಯೂಸಿಕ್ ಹಿಟ್ ಸಿನಿಮಾವೊಂದನ್ನು (Ek Love Ya Rachita Ram) ತೆರೆಗೆ ತರಲು ಸಜ್ಜಾಗುತ್ತಿದ್ದು, ಮೊನ್ನೆ ಮೊನ್ನೇ ರಿಲೀಸ್ ಆದ ಎಣ್ಣೆ ಸಾಂಗ್ ಹಲವು ದಾಖಲೆ ಬರೆಯುತ್ತಿರುವ ಬೆನ್ನಲ್ಲೇ, ಈಗ ಮತ್ತೊಂದು ಲವ್ಲಿ, ಮಾಸ್ ಸಾಂಗ್ ರಿಲೀಸ್ ಗೆ ಸಿದ್ಧವಾಗಿದ್ದು, ಗುಳಿಕೆನ್ನೆಯ ಬೆಡಗಿ ರಚಿತಾ ರಾಮ್ ಈ ಸಾಂಗ್ (Meet Madona Song ) ಮೂಲಕ ಡೇಟ್ ಮಾಡೋಕೆ ಪ್ರೇಕ್ಷಕರ ಅನುಮತಿ ಕೋರಿದ್ದಾರೆ.

ಏಕ್ ಲವ್ ಯಾ ಸ್ಯಾಂಡಲ್ ವುಡ್ ನಲ್ಲಿ ನೀರಿಕ್ಷೆ ಮೂಡಿಸಿರುವ ಸಿನಿಮಾ. ನಿರ್ದೇಶಕ ಜೋಗಿ ಪ್ರೇಮ್ ತಮ್ಮ ಬಾಮೈದ್ ನಟಿ ರಕ್ಷಿತಾ ಸಹೋದರ ರಾಣಾಗಾಗಿ ನಿರ್ಮಿಸಿರುವ ಈ ಸಿನಿಮಾದ ಸಾಂಗ್ ಗಳು ಈಗಾಗಲೇ ಮೋಡಿ ಮಾಡಿದೆ. ಈಗಾಗಲೇ ರಿಲೀಸ್ ಆಗಿರೋ ರಚಿತಾ ರಾಮ್ ಇದೇ ಮೊದಲ ಬಾರಿಗೆ ಎಣ್ಣೆ ಬಾಟಲಿಯೊಂದಿಗೆ ಕಾಣಿಸಿಕೊಂಡಿರುವ ಹೆಣ್ಣೆಗೂ ಎಣ್ಣಿಗೂ ಲಿಂಕ್ ಇಟ್ಟೇ ಭಗವಂತ ಹಾಡು ಸಖತ್ ಹಿಟ್ ಆಗಿದೆ.

ಈ ಮಧ್ಯೆ ಡಿಸೆಂಬರ್ 24 ರಂದು ಮತ್ತೊಂದು ಸಾಂಗ್ ರಿಲೀಸ್ ಆಗಲಿದೆ. ಅಪ್ಪ ಮದುವೆಯಾಗು ವಯಸ್ಸಾಯ್ತು ಅಂತಾರೇ, ಅಜ್ಜಿ ಸಾಯೋಕು ಮುಂಚೇ ಮೊಮ್ಮಗು ನೋಡಬೇಕು ಅಂತಾರೆ ಎಂಬ ಕ್ಯಾಚಿ ಲೈನ್ಸ್ ಜೊತೆ ಆರಂಭವಾಗೋ ಹಾಡು ಮೀಟ್ ಮಾಡೋಣಾ ಇಲ್ಲಾ ಡೇಟ್ ಮಾಡೋಣ್ವಾ ಎಂಬ ಲೈನ್ಸ್ ಜೊತೆ ಸಖತ್ ಮಾಸ್ ಎಂಟರ್ನೈನಿಂಗ್ ಆಗಿದೆ.

Ek Love Ya Rachita Ram Acting Movie meet Madona Song Release Today 1

ಶಿವಮೊಗ್ಗದಲ್ಲಿ ಸಾಂಗ್ ರಿಲೀಸ್ ಅದ್ದೂರಿ ಕಾರ್ಯಕ್ರಮ ನಡೆಯಲಿದೆ. ಈ ಮಾಸ್ ಹಾಡಿನಲ್ಲಿ ರಚಿತಾ ರಾಮ್ ಸಖತ್ ಬೋಲ್ಡ್ ಸ್ಪೆಪ್ ಹಾಕಿ‌ ಕುಣಿದಿದ್ದಾರೆ. ಕೇವಲ ಈ ಹಾಡು ಮಾತ್ರವಲ್ಲ ಇದಕ್ಕೂ ಮೊದಲೇ ರಿಲೀಸ್ ಆಗಿರೋ ಹೆಣ್ಣೆಗೂ ಎಣ್ಣೆಗೂ ಹೆಂಗೋ ಲಿಂಕಿಟ್ಟೆ ಭಗವಂತ ಹಾಡಿನಲ್ಲಿ ಎಣ್ಣೆ ಬಾಟಲಿ ಜೊತೆ ನಶೆಯಲ್ಲಿ ಕುಣಿದಿದ್ದಾರೆ.

ಏಕ್ ಲವ್ ಯಾ ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟಿರೋ ರಾಬರ್ಟ್ ಕಣ್ಣೇ ಅದಿರಿಂದಿ ಖ್ಯಾತಿಯ ಗಾಯಕಿ ಮಂಗ್ಲಿ ಈ ಹಾಡನ್ನು ಮಾದಕ ಧ್ವನಿಯಲ್ಲಿ ಹಾಡಿದ್ದು ಹೊಸ ವರ್ಷದ ಪಾರ್ಟಿಗಳಿಗೆ ಈ ಹಾಡು ಜೀವ ತುಂಬುವಂತಿದೆ. ಈಗಾಗಲೇ ಏಕ್ ಲವ್ ಯಾ ಸಿನಿಮಾದ ನಾಲ್ಕು ಹಾಡುಗಳು ರಿಲೀಸ್ ಆಗಿ ಗಮನ ಸೆಳೆದಿದ್ದರೇ ಐದನೇ ಹಾಡು ರಿಲೀಸ್ ಗೂ‌ ಮುನ್ನವೇ ಬಂದಿರೋ ಬಿಟ್ ನಲ್ಲೇ ಸಖತ್ ಗಮನ ಸೆಳೆದಿದ್ದು ಅಭಿಮಾನಿಗಳು ಕುತೂಹಲದಿಂದ ಫುಲ್ ಸಾಂಗ್ ರಿಲೀಸ್ ಗೆ ಕಾಯ್ತಿದ್ದಾರೆ.

ಇದನ್ನೂ ಓದಿ : ಸಮಂತಾ ಬೋಲ್ಡ್ ಲುಕ್ ಗೆ ಸಖತ್ ಟ್ರೋಲ್: ಸೋಷಿಯಲ್ ಮೀಡಿಯಾದಲ್ಲಿ ನಟಿ ಬೋಲ್ಡ್ ಆನ್ಸರ್

ಇದನ್ನೂ ಓದಿ : ಮೇಘನಾ ರಾಜ್ ಮನೆಯಲ್ಲಿ ಸಂಭ್ರಮ : ರಾಯನ್‌ರಾಜ್‌ ಸರ್ಜಾ ಜೊತೆ ಖುಷಿಗೆ ಕಾರಣ ಹಂಚಿಕೊಂಡ ಕುಟ್ಟಿಮಾ

(Ek Love Ya Rachita Ram Acting Movie meet Madona Song Release Today )

Comments are closed.