ಭಾನುವಾರ, ಏಪ್ರಿಲ್ 27, 2025
HomeCinemaSamantha message : ಗಾಯ ಆರಲು ಏನೋ ಬೇಕೋ ಅದನ್ನು ಮಾಡೋಣ: ಹೊಸ ವರ್ಷಕ್ಕೆ...

Samantha message : ಗಾಯ ಆರಲು ಏನೋ ಬೇಕೋ ಅದನ್ನು ಮಾಡೋಣ: ಹೊಸ ವರ್ಷಕ್ಕೆ ಸಮಂತಾ ಸಂದೇಶ

- Advertisement -

2021 ರಲ್ಲಿ ಸದ್ದು ಮಾಡಿದ ಸಿನಿ ಜಗತ್ತಿನ ಅತಿದೊಡ್ಡ ಸುದ್ದಿ ಸಮಂತಾ ಹಾಗೂ ನಾಗಚೈತನ್ಯ ವಿವಾಹ ವಿಚ್ಚೇಧನ. ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್ ಘೋಷಿಸಿ ಎರಡು ತಿಂಗಳು ಕಳೆದರೂ ಇನ್ನೂ ಸೋಷಿಯಲ್ ಮೀಡಿಯಾದಲ್ಲಿ ಈ ಜೋಡಿಗಳ ಡಿವೋರ್ಸ್ ಗೆ ಕಾರಣ ಏನು ಎಂಬ ಚರ್ಚೆ ನಿಂತಿಲ್ಲ. ಈ‌ ಮಧ್ಯೆ ಮೇಲ್ನೋಟಕ್ಕೆ ಸಮಂತಾ ( Samantha message ) ಈ ನೋವಿನಿಂದ ಹೊರಬಂದಿರುವಂತೆ ಕಂಡರೂ ಒಳಗೊಳಗೆ ಆ ನೋವು ಅವರನ್ನು ಬಿಡದಂತೆ ಕಾಡುತ್ತಿದೆ. ಇದಕ್ಕೆ ಸಾಕ್ಷಿ ಹೊಸವರ್ಷದ ದಿನದಂದು ಸಮಂತಾ ಹಾಕಿರೋ ಪೋಸ್ಟ್.

2022 ರ ಮೊದಲ ದಿನ ತಮ್ಮ ಮುದ್ದಿನ‌ನಾಯಿ‌ಮರಿ ಜೊತೆ ಮಾತನಾಡಿರುವ ಸಮಂತಾ ಹಳೆ ಗಾಯಗಳು ಮಾಯುವುದು ಸುಲಭವಲ್ಲ.ಆದರೂ ನಾವು ಅವುಗಳ ಜೊತೆಯೇ ಬದುಕಬೇಕೆಂಬ ಸಂದೇಶ ನೀಡಿದ್ದಾರೆ. ದಿನವೊಂದನ್ನು ಎದುರಿಸಲು ನಿಮಗೆ ಕಷ್ಟವಾದಾಗ,ಬೆಳಿಗ್ಗೆ ಎಂದು ಸರಳವಾಗಿ ಬದುಕಿಬಿಡಿ.‌ಅದು ಒಂದು ಸೆಲಿಬ್ರೇಶನ್ ಎಂದು ತಿಳಿಯಿರಿ ಎಂದು ಬರೆದಿದ್ದಾರೆ. ಅಲ್ಲದೇ ತಮ್ಮ ನೋವುಗಳನ್ನು ಮರೆಯಲು ಹೊಸ ಹೊಸ ದಾರಿಗಳನ್ನು ಹುಡುಕುತ್ತಿದ್ದೇನೆ ಎಂಬರ್ಥದಲ್ಲಿ ಪೋಸ್ಟ್ ಹಾಕಿರುವ ಸಮಂತಾ, ಗಾಯವೊಂದು ಮಾಸಲು ಬೇಕಾಗಿರುವ ಸಂಗತಿಗಳನ್ನು‌ನೀವು ಹುಡುಕುತ್ತಲೇ ಇರಿ.ನಿಮ್ಮೊಂದಿಗೆ‌ ನೀವು ಜಾಗರೂಕರಾಗಿರಿ.ಸಣ್ಣ ಹೆಜ್ಜೆಯನ್ನು ಮುಂದಿಡುವುದು ಕೂಡ ನೀವು ಏನಾಗುತ್ತೀರಿ ಎಂಬುದನ್ನು ನಿರ್ಧರಿಸುತ್ತದೆ.

2022 ಎಲ್ಲರಿಗೂ ಸಂಭ್ರಮ ಹಾಗೂ ಕರುಣೆಯಿಂದ ಕೂಡಿರಲಿ ಎಂದು ಸಮಂತಾ ಹಾರೈಸಿದ್ದಾರೆ. ಹಲವು ದಿನಗಳ ಗಾಸಿಪ್‌ಹಾಗೂ ರೂಮರ್ಸ್ ಬಳಿಕ ಸಮಂತಾ ಅಧಿಕೃತವಾಗಿ ವಿಚ್ಚೇಧನ ಘೋಷಿಸಿದ್ದರು. .ವಿಚ್ಚೇಧನದ ಬಳಿಕ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರೋ ಸಮಂತಾ ಪುಷ್ಪ ಸಿನಿಮಾದಲ್ಲಿ ಬೋಲ್ಡ್ ಆಗಿ ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು.

ಮಾತ್ರವಲ್ಲ ಇತ್ತೀಚಿಗಷ್ಟೇ ಸಮಂತಾ ಗ್ರ್ಯಾಂಡಾಗಿ ಕ್ರಿಸ್ಮಸ್ ಅಚರಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ಸಮಂತಾ, ತಮ್ಮ ಎಲ್ಲಾ ಅಪ್ಡೇಟ್ ಮಾಹಿತಿಯನ್ನು ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಳ್ಳುತ್ತಾರೆ. ಫಿಟನೆಸ್ ಮರೆಯಬೇಡಿ ಎಂಬ ಸಂದೇಶದೊಂದಿಗೆ ವರ್ಕೌಟ್ ಆರಂಭಿಸಿದ್ದ ಸಮಂತಾ, ಮೊನ್ನೆ ತಮ್ಮ ಸ್ನೇಹಿತೆಯರ ಜೊತೆಗೆ ಗೋವಾ ಟ್ರಿಪ್ ಗೆ ತೆರಳಿದ್ದರು ಮಾತ್ರವಲ್ಲ ಅಲ್ಲಿನ ಫಾಲ್ಸ್ ಹಾಗೂ ಬೀಚ್ ಗಳಲ್ಲಿ ಹಾಟ್ ಹಾಟ್ ಪೋಸ್ ನೀಡಿ ಅಭಿಮಾನಿಗಳ ಜೊತೆ ಪೋಟೋ ಕೂಡ ಶೇರ್‌ಮಾಡಿದ್ದರು.

ಇದನ್ನೂ ಓದಿ : ಹೊಸವರ್ಷದಂದು ಶುಭಸುದ್ದಿ ಹಂಚಿಕೊಂಡ ಕಾಜಲ್​ ಅಗರ್ವಾಲ್​ ದಂಪತಿ

ಇದನ್ನೂ ಓದಿ : ಬಾಲಿವುಡ್​​ ನಟ ವಿಕ್ಕಿ ಕೌಶಲ್​ ವಿರುದ್ಧ ದಾಖಲಾಯ್ತು ಪೊಲೀಸ್​ ಕಂಪ್ಲೇಂಟ್​..!

( Let’s do something to the wound: Samantha message for the new year)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular