Quit Smoking in 2022 : ಮೊಬೈಲ್ ಆ್ಯಪ್ ಬಳಸಿಯೂ ಸ್ಮೋಕಿಂಗ್ ಬಿಡಬಹುದು: ಇಲ್ಲಿವೆ ಸ್ಮೋಕಿಂಗ್ ಬಿಡಲು ಟಾಪ್ 5 ಆ್ಯಪ್‌ಗಳು

ಹೊಸ ವರ್ಷ ಬಂತೆಂದರೆ ಪ್ರತಿಯೊಬ್ಬರೂ ನ್ಯೂ ಇಯರ್ ರಿಸೊಲ್ಯೂಷನ್ (New Year Resolution) ಎಂದು ಒಂದಿಷ್ಟು ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳು ತ್ತಾರೆ. ಅದರಲ್ಲೂ, ಕೆಟ್ಟ ಚಟಗಳನ್ನು ಬಿಟ್ಟು ಹೆಲ್ತಿ ಲೈಫ್ ಸ್ಟೈಲ್ (Healthy Lifestyle) ಪಡೀಬೇಕು ಎಂಬುದು ಹಲವರ ಯೋಜನೆ. ಈ ಪೈಕಿ ಧೂಮಪಾನ ತ್ಯಜಿಸಬೇಕು (Quit Smoking in 2022) ಎನ್ನುವುದು ಪ್ರಪಂಚದಾದ್ಯಂತ ಇರುವ ಜನರ ಬಹು ಮುಖ್ಯ ಆಸೆಯಾಗಿದೆ.

ಟೆಕ್ನಾಲಜಿ ಇಂದು ಪ್ರತಿಯೊಬ್ಬ ವ್ಯಕ್ತಿಯ ಅವಿಭಾಜ್ಯ ಅಂಗವಾಗಿದೆ. ಬೆಳಗ್ಗೆ ಏಳುವುದರಿಂದ ರಾತ್ರಿ ಮಲಗುವ ತನಕ ಟೆಕ್ನಾಲಜಿ ಬೇಕೇ ಬೇಕು. ಇದರ ಮೂಲಕ, ಬ್ಲಡ್ ಪ್ರೆಶರ್, ಹಾರ್ಟ್ ಬಿಟ್ ಕೂಡ ಚೆಕ್ ಮಾಡಬಹುದು ಎಂದು ಹಲವರಿಗೆ ಗೊತ್ತಿದೆ. ಹಾಗೇ ನಿಕೋಟಿನ್ ಬಿಡಲು ಸಹ ಹೊಸ ಅಪ್ಲಿಕೇಶನ್ ಬಂದಿವೆ. 2022ರಲ್ಲಿ ಸ್ಮೋಕಿಂಗ್ ಬಿಡಲು ನಿಮಗೆ ಸಹಾಯಕವಾಗುವ ಆ್ಯಪ್‌ಗಳ ಲಿಸ್ಟ್ ಇಲ್ಲಿದೆ.

ಈಸಿ ಕ್ವಿಟ್ (Easy Quit) : ಇದು ಆಂಡ್ರಾಯ್ಡ್ ಹಾಗೂ ಐಒಎಸ್ ಎರಡರಲ್ಲೂ ಲಭ್ಯವಿದ್ದು, ಹೈ ರೇಟಿಂಗ್ ಹೊಂದಿದೆ. ಇದರಲ್ಲಿ ಮೆಮರಿ ಗೇಮ್ಸ್ ಇದ್ದು, ಸ್ಮೋಕಿಂಗ್ ಮರೆಯಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ, ಸ್ಮೋಕಿಂಗ್ ಟ್ರಾಕ್ ಮಾಡಲು ಆಪ್ಶನ್ ಇದೆ.

ಸ್ಮೋಕ್ ಫ್ರೀ (Smoke Free): ಈ ಅಪ್ಲಿಕೇಶನ್ ಸ್ಮೋಕ್ ಮಾಡುವವರಿಗೆ ಅದನ್ನು ನಿಲ್ಲಿಸಲು ಸೂಚನೆ ನೀಡುತ್ತದೆ. ಸ್ಮೋಕ್ ಫ್ರೀ ಎಂಬ ಫೇಸ್ ಬುಕ್ ಕಮ್ಯುನಿಟಿಯು ಇದ್ದು, ರಿಸರ್ಚ್ ಮಾಡಿ ಸ್ಮೋಕಿಂಗ್ ತ್ಯಜಿಸುವ ಉಪಾಯಗಳನ್ನು ಹೇಳಿ ಕೊಡಲಾಗುತ್ತದೆ. ಇದು ಎವಿಡೆನ್ಸ್ ಬೇಸ್ಡ್ ಟೆಕ್ನಾಲಜಿ ಬಳಸಿ, ಸ್ಮೋಕಿಂಗ್ ಕ್ವಿಟ್ ಮಾಡಲು ಸಹಾಯ ಮಾಡುತ್ತದೆ.

ಕ್ವಿಟ್ (Quit): ಈ ಅಪ್ಲಿಕೇಶನ್ ಮೋಟಿವೇಷನಲ್ ಕಾರ್ಡ್ಸ್ ನೀಡಿ ಸ್ಮೋಕಿಂಗ್ ಕ್ವಿಟ್ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಟ್ರಾಕರ್ ಹಾಗೂ ಡಾಯರಿ ಇದ್ದು, ನಿಮ್ಮ ನಿತ್ಯದ ಅಭ್ಯಾಸ ಬರೆಯಲು ಸಹಾಯ ಮಾಡುತ್ತದೆ.

ಕ್ವಿಟ್ ಶೂರ್ ( Quit Sure): ಇದು ಸ್ಮೋಕಿಂಗ್ ಕ್ವಿಟ್ ಮಾಡಲು ಸಹಾಯ ಮಾಡುವುದಲ್ಲದೆ, ಚ್ಯುಯಿಂಗ್ ಗಮ್ ಅಭ್ಯಾಸ ಕೂಡ ನಿಲ್ಲಿಸಲು ಸಹಾಯ ಮಾಡುತ್ತದೆ. ಇದು 6 ದಿನಗಳ ಸ್ಮೋಕ್ ಫ್ರೀ ಏಕ್ಸ್ಪೀರಿಯೆನ್ಸ್ ಆಫರ್ ಮಾಡುತ್ತದೆ. ಡೆವಲಪರ್ಸ್ ಹೇಳುವ ಪ್ರಕಾರ, ಇದು 95% ಸಕ್ಸಸ್ ಆಪ್ ಆಗಿದೆ.

ಕ್ವಿಟ್ ನೌ ( Quit Now): ಇದು ನಿಮ್ಮದೇ ಇಮೇಜ್ ತೋರಿಸುವ ಮೂಲಕ ಸ್ಮೋಕ್ ಕ್ವಿಟ್ ಮಾಡಲು ಸಹಯ ಮಾಡುತ್ತದೆ. ಅಂದರೆ, ಸಿಗರೇಟ್ ಮೂಲಕ ನೀವು ಖರ್ಚು ಮಾಡುವ ದುಡ್ಡು, ಅದು ಬೀರುವ ಪರಿಣಾಮ ನಿಮಗೆ ಬಿಡಿ ಬಿಡಿಯಾಗಿ ಹೇಳುತ್ತದೆ.ಈ ಮೂಲಕ ಸ್ಮೋಕಿಂಗ್ ಬಿಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ

ಇದನ್ನೂ ಓದಿ: real estate 11e sketch: ಕೃಷಿ ಭೂಮಿಯನ್ನು ಸೈಟ್ ಆಗಿ ಪರಿವರ್ತಿಸುವ, ಸೈಟ್ ಖರೀದಿಸುವ ಮುನ್ನ ಗಮನಿಸಲೇಬೇಕಾದ ಅಂಶಗಳಿವು

(Top 5 free Apps to quit smoking in 2022)

Comments are closed.