Maruti Suzuki : ಮಾರಾಟ ಕುಸಿದರೂ ಅತಿ ಹೆಚ್ಚು ಮಾರಾಟವಾದ ಕಾರ್ ಎಂಬ ಗರಿಮೆಯನ್ನು ಉಳಿಸಿಕೊಂಡ ಮಾರುತಿ ಸುಜುಕಿ

ಡಿಸೆಂಬರ್ 2021ರ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ( Maruti Suzuki ) ಶೇಕಡಾ 4 ರಷ್ಟು ಕುಸಿತ ತಂಡಿದೆ. ಡಿಸೆಂಬರ್ 2021ರಲ್ಲಿ 1,53,149 ಮಾರುತಿ ಸುಜುಕಿ ಕಾರುಗಳು ಮಾರಾಟಗೊಂಡಿದೆ(Car Sales). ಡಿಸೆಂಬರ್ ತಿಂಗಳ ಮಾರಾಟದಲ್ಲಿ ಮಾರುತಿ ಸುಜುಕಿ ಕುಸಿತ ಕಂಡಿದ್ದರೂ ಒಟ್ಟಾರೆ ಮಾರಾಟದಲ್ಲಿ ಮಾರುತಿ ಸುಜುಕಿ ಮೊದಲ ಸ್ಥಾನದಲ್ಲಿದೆ. ಇನ್ನು ಎರಡನೇ ಸ್ಥಾನಕ್ಕೆ ಇದೀಗ ಟಾಟಾ ಮೋಟಾರ್ಸ್(Tata Motors) ಲಗ್ಗೆ ಇಟ್ಟಿದೆ. ಇನ್ನು ಎರಡನೇ ಸ್ಥಾನದಲ್ಲಿದ್ದ ಹ್ಯುಂಡೈ ಇಂಡಿಯಾ (Hyundai India) ಇದೀಗ 3ನೇ ಸ್ಥಾನಕ್ಕೆ ಕುಸಿದಿದೆ. ಈ ಹೊಸ ವರ್ಷ(New year 2022) ಭಾರತೀಯ ಆಟೋಮೊಬೈಲ್(Automobile) ಕಂಪನಿಗಳಿಗೆ ಅತ್ಯುತ್ತಮವೆನಿಸಿದೆ.

ಮಾರುತಿ ಸುಜುಕಿ 2020ರ ಡಿಸೆಂಬರ್ ತಿಂಗಳಲ್ಲಿ 1,60,226 ಮಾರುತಿ ಕಾರುಗಳು ಭಾರತದಲ್ಲಿ ಮಾರಾಟವಾಗಿದೆ. ಇನ್ನು 2021ರ ನವೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ 1,39,184 ಕಾರುಗಳು ಮಾರಾಟಗೊಂಡಿದೆ. ನವೆಂಬರ್ ತಿಂಗಳಕ್ಕೆ ಹೋಲಿಸಿದರೆ ಡಿಸೆಂಬರ್ ತಿಂಗಳಲ್ಲಿ ಶೇಕಡಾ 10 ರಷ್ಟು ಮಾರಾಟದಲ್ಲಿ ಏರಿಕೆ ಕಂಡಿದೆ.

ಭಾರತದಲ್ಲಿ ಉತ್ಪಾದನೆಯಾದ ಮಾರುತಿ ಸುಜುಕಿ ಕಾರುಗಳ ಪೈಕಿ ಡಿಸೆಂಬರ್ 2021ರಲ್ಲಿ 22,280 ಕಾರುಗಳನ್ನು ವಿದೇಶಕ್ಕೆ ರಫ್ತು ಮಾಡಲಾಗಿದೆ. 2020ರ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ  ಏರಿಕೆ ಕಂಡಿಡೆ. 2020ರ ಡಿಸೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ 9,938 ಕಾರುಗಳನ್ನು ವಿದೇಶಕ್ಕೆ ರಫ್ತು ಮಾಡಿತ್ತು. ಅಲ್ಟೋ, ಎಸ್‌ಪ್ರೆಸ್ಸೋ, ವ್ಯಾಗನ್ಆರ್, ಸ್ಪಿಫ್ಟ್, ಸೆಲೆರಿಯೋ, ಇಗ್ನಿಸ್ , ಬಲೆನೋ, ಹಾಗೂ ಡಿಸೈರ್ ಕಾರುಗಳ ಮಾರಾಟದಲ್ಲಿ ಕುಸಿತ ಕಂಡಿದೆ. ಡಿಸೆಂಬರ್ ತಿಂಗಳಲಿ ಈ ಕಾರುಗಳ ಮಾರಾಟದ ಒಟ್ಟು ಸಂಖ್ಯೆ  85,665. ಆದರೆ 2020ರ ಡಿಸೆಂಬರ್ ತಿಂಗಳಲ್ಲಿ ಇದೇ ಕಾರುಗಳ ಮಾರಾಟ ಸಂಖ್ಯೆ 1,02,568.

ದೇಶದ ಅತೀ ದೊಡ್ಡ ಕಾರು ಉತ್ಪಾದನಾ ಕಂಪನಿ ಮಾರುತಿ ಸುಜುಕಿ ಭಾರತದಲ್ಲಿ ಅಗ್ರಸ್ಥಾನವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪ್ರಬಲ ಪೈಪೋಟಿ ನಡುವೆ ಮಾರುತಿ ಸುಜುಕಿ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ. ಮಾರುತಿ ಸುಜುಕಿ ಕಾರುಗಳು ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕಾರುಗಳಾಗಿದೆ. ಇನ್ನು ಗರಿಷ್ಠ ಮೈಲೇಜ್ ಹಾಗೂ ಕಡಿಮೆ ವೆಚ್ಚದ ನಿರ್ವಹಣೆಗೂ ಮಾರುತಿ ಸುಜುಕಿ ಹೆಸರುವಾಸಿಯಾಗಿದೆ. ಜೊತೆಗೆ ಭಾರತದ ರಸ್ತೆಗಳಿಗೆ ಬೇಕಾದ ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಕೂಡ ನೀಡಲಾಗಿದೆ. ಹಲವು ಕಾರಣಗಳಿಂದ ಭಾರತೀಯರು ಮಾರುತಿ ಸುಜುಕಿ ಕಾರುಗಳ ಮೊರೆ ಹೋಗುತ್ತಿದ್ದಾರೆ.

ಸೆಮಿಕಂಡಕ್ಟರ್ ಚಿಪ್ ಕೊರತೆ
ಮಾರುತಿ ಸುಜುಕಿ ಮಾರಾಟ ದಾಖಲೆಯಲ್ಲಿ ಕುಸಿತ ಕಾಣಲು ಪ್ರಮುಖ ಕಾರಣ ಸೆಮಿಕಂಡಕ್ಟರ್ ಚಿಪ್ ಕೊರತೆ. ಇದರಿಂದ ಮಾರುತಿ ಸುಜುಕಿ ಕಾರುಗಳ ಉತ್ಪಾದನೆ ಕುಂಠಿತವಾಗಿದೆ. ಬುಕಿಂಗ್ ಮಾಡಿದ ಹಲವು ಗ್ರಾಹಕರಿಗೆ ಮಾರುತಿ ಸುಜುಕಿ ಕಾರು ಉತ್ಪಾದನೆಯಾಗದ ಕಾರಣ ಡೆಲಿವರಿ ಮಾಡಲು ಸಾಧ್ಯವಾಗಿಲ್ಲ.

ಪ್ರಾದೇಶಿಕ ಮಾರಾಟದಲ್ಲೂ ಮಾರುತಿ ಸುಜುಕಿ ಕುಸಿತ ಕಂಡಿದೆ. ಡೋಮೆಸ್ಟಿಕ್ ಸೇಲ್ಸ್ ಡಿಸೆಂಬರ್ 2021ರ ತಿಂಗಳಲ್ಲಿ 1,30,869. ಇದೇ ಡಿಸೆಂಬರ್ 2020ರಲ್ಲಿ ಈ ಸಂಖ್ಯೆ 1,50,288 ಆಗಿತ್ತು. ಹೀಗಾಗಿ ಶೇಕಡಾ 12ರಷ್ಟು ಡೋಮೆಸ್ಟಿಕ್ ಸೇಲ್ಸ್ ಕುಸಿತ ಕಂಡಿದೆ. ಆದರೆ ನವೆಂಬರ್ 2021ಕ್ಕೆ ಹೋಲಿಸಿದರೆ ಶೇಕಡಾ 11 ರಷ್ಟು ಏರಿಕೆ ಕಂಡಿದೆ. ನವೆಂಬರ್ 2021ರಲ್ಲಿ ಮಾರುತಿ ಸುಜುಕಿ 1,17,791 ಕಾರುಗಳು ಮಾರಾಟವಾಗಿದೆ.

ಇದನ್ನೂ ಓದಿ: real estate 11e sketch: ಕೃಷಿ ಭೂಮಿಯನ್ನು ಸೈಟ್ ಆಗಿ ಪರಿವರ್ತಿಸುವ, ಸೈಟ್ ಖರೀದಿಸುವ ಮುನ್ನ ಗಮನಿಸಲೇಬೇಕಾದ ಅಂಶಗಳಿವು

ಇದನ್ನೂ ಓದಿ: top 5 financial resolutions : ಹೊಸವರ್ಷದಲ್ಲಿ ನಿಮಗೆ ಲಾಭತರಲಿರುವ 5 ಆರ್ಥಿಕ ನಿರ್ಧಾರಗಳು

(Maruti Suzuki Car Sales Dip 4 percent but highest sales in 2021)

Comments are closed.