Fact Check :ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ರನ್ನು ವಿವಾದಗಳು ಯಾಕೋ ಬೆನ್ನು ಬಿಡುವಂತೆ ಕಾಣುತ್ತಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಯುವಕನೊಬ್ಬ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಈ ರೀತಿ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರೋದು ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಎಂದು ಆರೋಪಿಸಿದ ನೆಟ್ಟಿಗರು ಆರ್ಯನ್ ಖಾನ್ ವಿರುದ್ಧ ಆಕ್ರೋಶ ಹೊರಹಾಕಿದ್ದರು.
24 ವರ್ಷದ ಆರ್ಯನ್ ಖಾನ್ರನ್ನು ಡ್ರಗ್ ಸೇವನೆ ಪ್ರಕರಣದ ಅಡಿಯಲ್ಲಿ ಮುಂಬೈ ಮಾದಕ ವಸ್ತು ನಿಗ್ರಹ ದಳದ ಅಧಿಕಾರಿಗಳು ಅಕ್ಟೋಬರ್ ಮೂರರಂದು ಬಂಧಿಸಿದ್ದರು. ಆರ್ಯನ್ ಖಾನ್ ಬಂಧನವಾಗಿ ಮೂರು ವಾರಗಳ ಬಳಿಕ ಅವರನ್ನು ಜಾಮೀನಿನ ಮೇಲೆ ಹೊರಬಿಡಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ಯುವಕನನ್ನು ಇನ್ನೊಬ್ಬ ವ್ಯಕ್ತಿ ತಡೆಯಲು ಯತ್ನಿಸಿದರೂ ಸಹ ಆತ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದನ್ನು ನೋಡಿ ದಿಗ್ಬ್ರಮೆಗೊಂಡ ನೆಟ್ಟಿಗರು ಶಾರೂಕ್ ಖಾನ್ ಪುತ್ರ ಈ ರೀತಿ ಮಾಡುತ್ತಾನಾ..? ಎಂದು ಆಡಿಕೊಳ್ಳಲು ಆರಂಭಿಸಿದ್ದಾರೆ.
ಈ ವಿಡಿಯೋ ಪೋಸ್ಟ್ ಮಾಡಿದ ವ್ಯಕ್ತಿಯೊಬ್ಬರು ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಟೊರೊಂಟೋ ವಿಮಾನ ನಿಲ್ದಾಣದಲ್ಲಿ ಕಂಡು ಬಂದರು ಎಂದು ಶೀರ್ಷಿಕೆ ನೀಡಿದ್ದಾರೆ.
ಆದರೆ ಫ್ಯಾಕ್ಟ್ ಚೆಕ್ನಲ್ಲಿ ನಿಜ ವಿಚಾರ ಬಟಾ ಬಯಲಾಗಿದೆ. ಈ ವಿಡಿಯೋದಲ್ಲಿರುವ ವ್ಯಕ್ತಿ ಆರ್ಯನ್ ಖಾನ್ ಅಲ್ಲ. ಈತ ಟ್ವಿಲೈಟ್ ಖ್ಯಾತಿಯ ಕೆನಡಾದ ನಟ ಬ್ರಾನ್ಸನ್ ಪೆಲ್ಲೆಟಿಯರ್ ಎಂದು ತಿಳಿದುಬಂದಿದೆ. ಇದು 2012ರಲ್ಲಿ ಚಿತ್ರೀಕರಿಸಲಾಗಿದ್ದು ಈ ಕೃತ್ಯಕ್ಕಾಗಿ ಪೆಲ್ಲೆಟಿಯರ್ನ್ನು ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 2012ರಲ್ಲಿ ಲಾಸ್ ಏಂಜಲೀಸ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಪೆಲ್ಲೆಟಿಯರ್ ಅಮಲೇರಿದ ಸ್ಥಿತಿಯಲ್ಲಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
Fact Check : This is not Aryan Khan urinating in public at an airport
ಇದನ್ನು ಓದಿ : corona 3rd wave : ರಾಜ್ಯಕ್ಕೆ ಮೂರನೆ ಅಲೆಯ ಎಂಟ್ರಿಯಾಗಿದೆ: ಆತಂಕಕಾರಿ ಮಾಹಿತಿ ನೀಡಿದ ಸಚಿವ ಡಾ.ಸುಧಾಕರ್
ಇದನ್ನೂ ಓದಿ : Anchor Anushree: ಮತ್ತೆ ಹಿರಿತೆರೆಗೆ ಜಿಗಿದ ಆ್ಯಂಕರ್ ಅನುಶ್ರೀ; ಹಾರರ್ ಚಿತ್ರಕ್ಕೆ ಗೋವಾದಲ್ಲಿ ಶೂಟಿಂಗ್